ಮೋದಿ ಕೋಟೆಯಲ್ಲೇ ರಾರಾಜಿಸಿತು ಹೊಸ ಪಾರ್ಟಿ KJP: ಅಹಮದಾಬಾದ್ ಸ್ಟೇಡಿಯಂನಲ್ಲಿ ಗಮನ ಸೆಳೆದ RCB ಫ್ಯಾನ್ ಬ್ಯಾನರ್!

Published : May 31, 2026, 08:15 PM IST

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ, ಆರ್‌ಸಿಬಿ ಅಭಿಮಾನಿಯೊಬ್ಬರು ಹಿಡಿದ 'ಕೊಹ್ಲಿ ಜನತಾ ಪಾರ್ಟಿ' (KJP) ಬ್ಯಾನರ್ ವೈರಲ್ ಆಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ ಆರಂಭಿಕ ಯಶಸ್ಸು ಸಾಧಿಸಿದೆ.

PREV
16

ಫುಲ್‌ಹೌಸ್‌ ಆಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ವರ್ಷದ ಐಪಿಎಲ್‌ ಫೈನಲ್‌ ನಡೆಯುತ್ತಿದೆ. ಇಡೀ ಸ್ಟೇಡಿಯಂ ಸಂಪೂರ್ಣವಾಗಿ ಆರ್‌ಸಿಬಿ ಅಭಿಮಾನಿಗಳಿಂದ ಅದರಲ್ಲೂ ವಿರಾಟ್‌ ಕೊಹ್ಲಿ ಅಭಿಮಾನಿಗಳಿಂದ ತುಂಬಿಹೋಗಿದೆ.

26

ಗುಜರಾತ್‌ನ ಅಹಮದಾಬಾದ್‌ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ. ಬಿಜೆಪಿ ಪಕ್ಷ ಅಧಿಕಾರ ನಡೆಸುತ್ತಿರುವ ರಾಜ್ಯ. ಆದರೆ, ಸ್ಟೇಡಿಯಂನಲ್ಲಿ ಹೊಸ ಪಕ್ಷದ ಹೆಸರು ರಾರಾಜಿಸುತ್ತಿತ್ತು. ಅದು ಯಾವುದು ಗೊತ್ತಾ?

36

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಅಂದರೆ ಸಿಜೆಪಿ ಭಾರೀ ವೈರಲ್‌ ಆಗಿತ್ತು. ಅಹಮದಾಬಾದ್‌ ಸ್ಟೇಡಿಯಂನಲ್ಲಿ ಕಂಡಿರುವುದು ಕೆಜೆಪಿ. ಹಾಗಂತ ಇದು ಯಡಿಯೂರಪ್ಪ ಆರಂಭಿಸಿದ್ದ ಕರ್ನಾಟಕ ಜನತಾ ಪಕ್ಷ ಅಲ್ಲ. ಇದು ಕೊಹ್ಲಿ ಜನತಾ ಪಾರ್ಟಿ. ಇಂಥದ್ದೊಂದು ಫೋಟೋ ವೈರಲ್‌ ಆಗಿದೆ.

46

ಆರ್‌ಸಿಬಿಯ ಅಭಿಮಾನಿಯೊಬ್ಬ 'ನಾವು ಬಂದಿರೋದು ಬೇರೆ ಯಾವುದೇ ಪಾರ್ಟಿಯಿಂದಲ್ಲ. ನಮ್ಮದು ಕೊಹ್ಲಿ ಜನತಾ ಪಾರ್ಟಿ' ಎಂದು ಬರೆದಿರುವ ಬ್ಯಾನರ್‌ಅನ್ನು ಹಿಡಿದಿದ್ದು, ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದೆ.

56

ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಆರ್‌ಸಿಬಿ ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ಮಾಡಿದೆ. ಗುಜರಾತ್‌ ಟೈಟಾನ್ಸ್‌ ತಂಡದ ಆರಂಭಿಕರಾದ ನಾಯಕ ಶುಭ್‌ಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ರಂಥ ಪ್ರಮುಖ ವಿಕೆಟ್‌ ಉರುಳಿಸಿ ಆರ್‌ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

66

ಫೈನಲ್‌ ಪಂದ್ಯಕ್ಕಾಗಿ ಆರ್‌ಸಿಬಿ ತಂಡ ತನ್ನ ಟೀಮ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಗುಜರಾತ್‌ ಟೈಟಾನ್ಸ್‌ ತಂಡ ಒಂದು ಬದಲಾವಣೆ ಮಾಡಿದ್ದು, ಸಾಯಿ ಕಿಶೋರ್‌ ಬದಲಿಗೆ ಆರ್ಶದ್‌ ಖಾನ್‌ರನ್ನು ತಂಡಕ್ಕೆ ಆಯ್ಕೆ ಮಾಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories