ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಶುರು, ಆರ್‌ಸಿಬಿ ಸೇರಿ 4 ತಂಡಕ್ಕೆ ಸುಲಭ, ಎಲ್ಲರಿಗೂ ಇದೆ ಅವಕಾಶ

Published : Apr 30, 2026, 05:05 PM IST

ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಶುರು, ಆರ್‌ಸಿಬಿ ಸೇರಿ 4 ತಂಡಕ್ಕೆ ಸುಲಭ, ಎಲ್ಲರಿಗೂ ಇದೆ ಅವಕಾಶ, RCB ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆರ್‌ಸಿಬಿ ಸೇರಿದಂತೆ 10 ತಂಡಗಳ ಪ್ಲೇ ಆಫ್ ಅವಕಾಶ ಹೇಗಿದೆ? ಯಾರಿಗೆ ಕಲ್ಲು ಮುಳ್ಳಿನ ಹಾದಿ?

PREV
16
ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ

ಐಪಿಎಲ್ 2026 ಟೂರ್ನಿಯ ಪ್ಲೇ ಆಫ್ ಲೆಕ್ಕಾಚಾರ ಶುರುವಾಗಿದೆ. ಲೀಗ್‌ನ ಅರ್ಧ ಮ್ಯಾಚ್ ಮುಗಿದಿದೆ. ಪ್ರತಿ ಪಂದ್ಯಗಳು ಮುಖ್ಯವಾಗುತ್ತಿದೆ. ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ನಾಲ್ಕು ತಂಡಗಳಿಗೆ ಸುಲಭ ಚಾನ್ಸ್. ವಿಶೇಷ ಅಂದರೆ ಇನ್ನೂ ಎಲ್ಲಾ ತಂಡಗಳಿಗೂ ಅವಕಾಶವಿದೆ.

26
ಆರ್‌ಸಿಬಿ ಪ್ಲೇ ಆಫ್ ಹಾದಿ

ಆರ್‌ಸಿಬಿ ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 8 ಪಂದ್ಯದಲ್ಲಿ 6 ಗೆದ್ದು 12 ಅಂಕ ಸಂಪಾದಿಸಿದೆ. ಆರ್‌ಸಿಬಿಗೆ ಇನ್ನು 6 ಪಂದ್ಯಗಳು ಬಾಕಿ ಇದೆ. ಇದರಲ್ಲಿ 2 ಗೆಲುವು ದಾಖಲಿಸಿದರೆ ಆರ್‌ಸಿಬಿ ಪ್ಲೇ ಆಪ್ ಚಾನ್ಸ್ ಗಿಟ್ಟಿಸಿಕೊಳ್ಳಲಿದೆ. ಹೀಗಾಗಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸುಲಭವಾಗಿದೆ.

36
ಆರ್‌ಸಿಬಿ ಸೇರಿ ನಾಲ್ಕು ತಂಡಕ್ಕೆ ಸುಲಭ ಚಾನ್ಸ್

ಆರ್‌ಸಿಬಿ ಜೊತೆ ಇನ್ನು ಮೂರು ತಂಡಗಳಿಗೆ ಸುಲಭ ಅವಕಾಶವಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಉಳಿದ 6 ಪಂದ್ಯಗಳಿಂದ 2 ಗೆಲುವು ಬೇಕಿದೆ. ಇದು ಕನಿಷ್ಠ ಪ್ಲೇ ಆಫ್ ಅವಕಾಶಕ್ಕಾಗಿ ಮಾತ್ರ. ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನದಲ್ಲಿರಲು ಹೆಚ್ಚಿನ ಗೆಲುವು ಬೇಕಿದೆ.

46
ಅಂಕ ಪಟ್ಟಿಯ ಟಾಪ್ 4 ತಂಡದ ಚಾನ್ಸ್

ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕನಿಷ್ಠ 2 ಗೆಲುವು ಬೇಕು. ಆದರೆ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಇನ್ನು 5 ಪಂದ್ಯ ಮಾತ್ರ ಬಾಕಿ ಇದೆ. ಸದ್ಯ ಟೇಬಲ್ ಟಾಪ್ 4ನಲ್ಲಿರುವ ತಂಡಗಳಿಗೆ ಇನ್ನೆರಡು ಗೆಲುವು ಪ್ಲೇ ಆಫ್ ಅವಕಾಶ ನೀಡಲಿದೆ.

56
ಎಲ್ಲಾ ತಂಡಕ್ಕೂ ಇದೆ ಚಾನ್ಸ್

ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ಅವಕಾಶಕ್ಕೆ ಇನ್ನುಳಿದ 6 ಪಂದ್ಯದಲ್ಲಿ 4ರಲ್ಲಿ ಗೆಲುವು ದಾಖಲಿಸಬೇಕು. ಇದು ಗುಜರಾತ್‌ನ ಸದಸ್ಯದ ಫಾರ್ಮ್‌ಗೆ ಕಷ್ಟ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಹಂತಕ್ಕೇರಲು ಇನ್ನುಳಿದ 6 ಪಂದ್ಯದಲ್ಲಿ 5 ಗೆಲುವು ದಾಖಲಿಸಬೇಕು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ 6ರಲ್ಲಿ 5 ಗೆಲುವು ದಾಖಲಿಸಬೇಕು.

66
ಮೂರು ತಂಡಕ್ಕೆ ಮಾಡು ಇಲ್ಲವೇ ಮಡಿ

ಅಂಕ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಮೂರು ತಂಡಗಳಿಗೆ ಕೊನೆಯ ಅವಕಾಶವಿದೆ. ಕೋಲ್ಕತಾ ನೈಟ್ ರೈಡರ್ಸ್ ಇನ್ನುಳಿದ 6 ಪಂದ್ಯದಲ್ಲಿ 6ರಲ್ಲೂ ಗೆಲುವು ದಾಖಲಿಸಬೇಕು. ಇತ್ತ ಮುಂಬೈ ಇಂಡಿಯನ್ಸ್ 6ರಲ್ಲಿ 6 ಪಂದ್ಯ ಹಾಗೂ ಲಖನೌ ಸೂಪರ್ ಜೈಂಟ್ಸ್ 6 ಪಂದ್ಯದಲ್ಲಿ 6ರಲ್ಲೂ ಗೆಲುವು ದಾಖಲಿಸಬೇಕು.

ಮೂರು ತಂಡಕ್ಕೆ ಮಾಡು ಇಲ್ಲವೇ ಮಡಿ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories