ರಿಯಾನ್ ಪರಾಗ್ ಅರೆಸ್ಟ್ ಆಗ್ತಾರಾ? ಇ-ಸಿಗರೇಟ್ ಸೇದಿದ್ದಕ್ಕೆ ಭಾರತದ ಕಾನೂನು ಹೇಳೋದೇನು?

Published : Apr 29, 2026, 01:30 PM IST

ಪಂದ್ಯದ ಮಧ್ಯೆ ಡ್ರೆಸ್ಸಿಂಗ್ ರೂಮ್‌ನಲ್ಲೇ ಇ-ಸಿಗರೇಟ್ ಸೇದಿದ ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ರಿಯಾನ್ ಪರಾಗ್ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು? ಐಪಿಎಲ್, ಬಿಸಿಸಿಐ ನಿಯಮಗಳು ಹಾಗೂ ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತೆ? ನೋಡೋಣ ಬನ್ನಿ

PREV
16
ಐಪಿಎಲ್ ಕ್ಯಾಪ್ಟನ್ ಅರೆಸ್ಟ್..?

ಇಂಡಿಯನ್ ಪ್ರೀಮಿಯರ್ ಲೀಗ್ 2026 ಸಖತ್‌ ಆಗಿ ನಡೀತಿದೆ. ಈ ಸೀಸನ್ ಆರಂಭದಿಂದಲೂ ರಾಜಸ್ಥಾನ್ ರಾಯಲ್ಸ್ ಅದ್ಭುತವಾಗಿ ಆಡುತ್ತಿದೆ. ಯುವ ಆಟಗಾರರ ತಂಡವನ್ನು ಕ್ಯಾಪ್ಟನ್ ರಿಯಾನ್ ಪರಾಗ್ ಚೆನ್ನಾಗಿ ಮುನ್ನಡೆಸುತ್ತಿದ್ದಾರೆ ಎಂದು ಹೊಗಳಲಾಗ್ತಿತ್ತು. ಬ್ಯಾಟಿಂಗ್‌ನಲ್ಲಿ ಹೆಚ್ಚು ಮಿಂಚದಿದ್ದರೂ, ಅವರ ನಾಯಕತ್ವದಲ್ಲಿ ರಾಜಸ್ಥಾನ ತಂಡ ಸತತ ಗೆಲುವುಗಳನ್ನು ಕಂಡಿದೆ. 

26
ಪಂಜಾಬ್‌ ಕಿಂಗ್ಸ್‌ಗೆ ಸೋಲಿನ ರುಚಿ ತೋರಿಸಿದ ರಾಜಸ್ಥಾನ ರಾಯಲ್ಸ್

ಇತ್ತೀಚೆಗೆ, ಪಂಜಾಬ್ ಕಿಂಗ್ಸ್ ತಂಡವನ್ನು ರಾಜಸ್ಥಾನ ಸೋಲಿಸಿತು. ಆದರೆ ಈ ಗೆಲುವಿನ ಖುಷಿಗಿಂತ ಪರಾಗ್ ವಿವಾದವೇ ಹೆಚ್ಚಾಗಿ ಸದ್ದು ಮಾಡ್ತಿದೆ. ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ಸೇದಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಪರಾಗ್ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

36
ಅಸಲಿಗೆ ಆಗಿದ್ದೇನು...?

ಐಪಿಎಲ್-2026ರ ಭಾಗವಾಗಿ ಏಪ್ರಿಲ್ 28ರಂದು ಚಂಡೀಗಢದ ಮುಲ್ಲನ್‌ಪುರ್ ಸ್ಟೇಡಿಯಂನಲ್ಲಿ ಪಂಜಾಬ್ ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 222 ರನ್ ಗಳಿಸಿತು. ರಾಜಸ್ಥಾನ 223 ರನ್‌ಗಳ ಗುರಿ ಬೆನ್ನಟ್ಟಿತು. ಪಂದ್ಯದ ನಡುವೆ, ಕ್ಯಾಪ್ಟನ್ ರಿಯಾನ್ ಪರಾಗ್ 16 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ನಿರ್ಣಾಯಕ ಸಮಯದಲ್ಲಿ ವಿಕೆಟ್ ಒಪ್ಪಿಸಿದ್ದಕ್ಕೆ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದರು. ನಂತರ 16ನೇ ಓವರ್‌ನಲ್ಲಿ ಕ್ಯಾಮರಾ ಡ್ರೆಸ್ಸಿಂಗ್ ರೂಮ್ ಕಡೆ ತಿರುಗಿದಾಗ, ಪರಾಗ್ ಇ-ಸಿಗರೇಟ್ (ವೇಪಿಂಗ್) ಸೇದುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಯ್ತು. ಈ ವಿಡಿಯೋ ವೈರಲ್ ಆಗಿದ್ದು, ಕ್ರೀಡಾ ಸ್ಪೂರ್ತಿಗೆ ವಿರುದ್ಧವಾದ ಈ ಕೆಲಸಕ್ಕೆ ಫ್ಯಾನ್ಸ್ ಗರಂ ಆಗಿದ್ದಾರೆ. 15 ವರ್ಷದ ವೈಭವ್ ಸೂರ್ಯವಂಶಿಯಂತಹ ಯುವ ಆಟಗಾರರಿಗೆ ಕ್ಯಾಪ್ಟನ್ ಆಗಿ ನೀವೇನು ಸಂದೇಶ ಕೊಡ್ತಿದ್ದೀರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

46
ಡ್ರೆಸ್ಸಿಂಗ್ ರೂಮ್‌ನಲ್ಲಿ ಸಿಗರೇಟ್ ಸೇದಬಹುದೇ? ಐಪಿಎಲ್ ನಿಯಮ ಏನು ಹೇಳುತ್ತೆ?
ಐಪಿಎಲ್ ನಿಯಮಗಳಲ್ಲಿ ವೇಪಿಂಗ್ ಬಗ್ಗೆ ನಿರ್ದಿಷ್ಟವಾಗಿ ಯಾವುದೇ ರೂಲ್ಸ್ ಇಲ್ಲ. ಆದರೆ, ಸ್ಟೇಡಿಯಂ ಮತ್ತು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ತಂಬಾಕು ಅಥವಾ ಸಂಬಂಧಿತ ಉತ್ಪನ್ನಗಳ ಬಳಕೆಯನ್ನು ಬಿಸಿಸಿಐ ನಿಷೇಧಿಸಿದೆ. ಆಟಗಾರರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಬಿಸಿಸಿಐ ಈ ನಿಯಮಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಮೈದಾನದಲ್ಲಿ ಸಿಗರೇಟ್ ಸೇದುವುದು ನಿಷಿದ್ಧ, ಡ್ರೆಸ್ಸಿಂಗ್ ರೂಮ್ ಒಂದು ನಾನ್-ಸ್ಮೋಕಿಂಗ್ ಜೋನ್. ಐಪಿಎಲ್ ನಿಯಮಗಳ ಪ್ರಕಾರ, ಕ್ರಿಕೆಟ್ ಗೌರವಕ್ಕೆ ಧಕ್ಕೆ ತಂದರೆ ರೆಫರಿ ಆಟಗಾರರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಪಂದ್ಯದ ಶುಲ್ಕದಲ್ಲಿ ಕಡಿತ, ದಂಡ ಅಥವಾ ಮುಂದಿನ ಪಂದ್ಯಗಳಿಂದ ಅಮಾನತು ಮಾಡುವ ಶಿಕ್ಷೆ ವಿಧಿಸಬಹುದು. ಸದ್ಯಕ್ಕೆ ಐಪಿಎಲ್ ಆಡಳಿತ ಮಂಡಳಿ ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
56
ಇ-ಸಿಗರೇಟ್ ಸೇದಿದರೆ ಜೈಲು ಶಿಕ್ಷೆ ತಪ್ಪಲ್ವಾ?

ರಾಜಸ್ಥಾನ ಕ್ಯಾಪ್ಟನ್ ರಿಯಾನ್ ಪರಾಗ್ ಕ್ರೀಡಾ ನಿಯಮಗಳಷ್ಟೇ ಅಲ್ಲ, ಭಾರತೀಯ ಕಾನೂನನ್ನೂ ಉಲ್ಲಂಘಿಸಿದ್ದಾರೆ. ಭಾರತದಲ್ಲಿ 'ಪ್ರೊಹಿಬಿಷನ್ ಆಫ್ ಎಲೆಕ್ಟ್ರಾನಿಕ್ ಸಿಗರೇಟ್ಸ್ ಆಕ್ಟ್ (PECA) 2019'ರ ಪ್ರಕಾರ ಇ-ಸಿಗರೇಟ್ ನಿಷೇಧಿಸಲಾಗಿದೆ. ಅಂದರೆ ಇ-ಸಿಗರೇಟ್ ತಯಾರಿಸುವುದು, ಮಾರಾಟ ಮಾಡುವುದು, ಸಂಗ್ರಹಿಸುವುದು ಅಥವಾ ಬಳಸುವುದು ಕಾನೂನುಬಾಹಿರ. ಮೊದಲ ಬಾರಿಗೆ ಈ ಕಾನೂನು ಮುರಿದರೆ, ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಬಹುದು. ಪದೇ ಪದೇ ತಪ್ಪು ಮಾಡಿದರೆ 3 ವರ್ಷ ಜೈಲು ಮತ್ತು 5 ಲಕ್ಷ ರೂಪಾಯಿ ದಂಡ ಬೀಳಬಹುದು. ಸಾರ್ವಜನಿಕ ಸ್ಥಳದಲ್ಲಿ ಇ-ಸಿಗರೇಟ್ ಸೇದಿದರೆ ಶಿಕ್ಷೆ ಇನ್ನಷ್ಟು ಕಠಿಣವಾಗಿರುತ್ತದೆ. ಪರಾಗ್ ಮಾಡಿದ್ದೂ ಇದನ್ನೇ. ಹೀಗಾಗಿ, ಪರಾಗ್ ಮೇಲೆ ಜೈಲು ಶಿಕ್ಷೆ ಮತ್ತು ದಂಡ ಬೀಳುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.

66
ಕ್ಯಾಪ್ಟನ್ ಆಗಿ ಸಕ್ಸಸ್.,ಪ್ಲೇಯರ್ ಆಗಿ ಫೇಲ್..!

ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹೋದ ನಂತರ, 24 ವರ್ಷದ ಪರಾಗ್‌ಗೆ ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ಸಿ ಸಿಕ್ಕಿತು. ಆದರೆ ಈ ಸೀಸನ್‌ನಲ್ಲಿ ಅವರು ಬ್ಯಾಟಿಂಗ್‌ನಲ್ಲಿ ಹೆಚ್ಚು ಮಿಂಚಲು ಸಾಧ್ಯವಾಗಿಲ್ಲ. ಈ ಪಂದ್ಯಕ್ಕೂ ಮುನ್ನ ಆಡಿದ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 81 ರನ್ ಗಳಿಸಿದ್ದರು. ಫಾರ್ಮ್ ಇಲ್ಲದೆ ಪರದಾಡುತ್ತಿರುವಾಗಲೇ ಈ ಇ-ಸಿಗರೇಟ್ ವಿವಾದ ಅವರಿಗೆ ದೊಡ್ಡ ತಲೆನೋವಾಗಿದೆ. ಪರಾಗ್ ವಿವಾದದ ನಡುವೆಯೂ, ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಜಯ ಸಾಧಿಸಿತು. ಡೊನೊವನ್ ಫೆರೇರಾ (52*) ಮತ್ತು ಶುಭಂ ದೂಬೆ (31) ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ತಂಡ ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ ರಾಜಸ್ಥಾನ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories