ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು!

Published : Dec 17, 2025, 12:34 PM IST

ಅಬುಧಾಬಿ: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜು ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು 29 ವಿದೇಶಿಗರು ಸೇರಿದಂತೆ 77 ಆಟಗಾರರನ್ನು ಖರೀದಿಸಿದವು. ಒಟ್ಟು ₹215.45 ಕೋಟಿ ಖರ್ಚು ಮಾಡಿದವು. ಈ ಬಾರಿಯ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು.

PREV
16
1. ಕ್ಯಾಮರೋನ್ ಗ್ರೀನ್: 25.20 ಕೋಟಿ ರುಪಾಯಿ

ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಗ್ರೀನ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬರೋಬ್ಬರಿ 25.20 ಕೋಟಿ ರುಪಾಯಿಗೆ ಖರೀದಿಸಿತು. ಗ್ರೀನ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಂದಹಾಗೆ ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ವಿದೇಶಿ ಆಟಗಾರ ಎನ್ನುವ ಹಿರಿಮೆಗೆ ಗ್ರೀನ್ ಪಾತ್ರರಾದರು.

26
2. ಮಥೀಶ್ ಪತಿರಣ: 18 ಕೋಟಿ ರುಪಾಯಿ

ಶ್ರೀಲಂಕಾದ ಮಾರಕ ವೇಗಿ, ಡೆತ್ ಓವರ್ ಸ್ಪೆಷಲಿಸ್ಟ್ ಮಥೀಶ್ ಪತಿರಣ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು 18 ಕೋಟಿ ರುಪಾಯಿಗೆ ಖರೀದಿಸಿದೆ. ಪತಿರಣ ಸೇರ್ಪಡೆ ಕೆಕೆಆರ್ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತಂದು ಕೊಟ್ಟಿದೆ.

36
3. ಕಾರ್ತಿಕ್ ಶರ್ಮಾ: 14.20 ಕೋಟಿ ರುಪಾಯಿ

ರಾಜಸ್ಥಾನ ಮೂಲದ ಯುವ ಸ್ಪೋಟಕ ಬ್ಯಾಟರ್ ಕಾರ್ತಿಕ್ ಶರ್ಮಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 14.20 ಕೋಟಿ ರುಪಾಯಿ ನೀಡಿ ಖರೀದಿಸಿದ್ದು, ಮ್ಯಾಚ್ ಫಿನಿಶರ್ ಆಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.

46
4. ಪ್ರಶಾಂತ್ ವೀರ್:

ಉತ್ತರ ಪ್ರದೇಶ ಮೂಲದ 20 ವರ್ಷದ ಯುವ ಆಲ್ರೌಂಡರ್ ಪ್ರಶಾಂತ್ ವೀರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 14.20 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಜಡೇಜಾಗೆ ಬದಲಿ ಆಟಗಾರನಾಗಿ ಪ್ರಶಾಂತ್ ವೀರ್ ಅವರನ್ನು ಖರೀದಿಸಿದ್ದು, ಭವಿಷ್ಯದ ಸ್ಟಾರ್ ಆಗುವ ನಿರೀಕ್ಷೆ ಮೂಡಿಸಿದ್ದಾರೆ.

56
5. ಲಿಯಾಮ್ ಲಿವಿಂಗ್‌ಸ್ಟೋನ್: 13 ಕೋಟಿ ರುಪಾಯಿ

ಇಂಗ್ಲೆಂಡ್ ಮೂಲದ ಬಿಗ್ ಹಿಟ್ಟರ್ ಲಿವಿಂಗ್‌ಸ್ಟೋನ್ ಮೊದಲ ಸುತ್ತಿನ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಫ್ರಾಂಚೈಸಿಯು ಬರೋಬ್ಬರಿ 13 ಕೋಟಿ ರುಪಾಯಿಗೆ ಖರೀದಿಸಿದೆ. ಲಿವಿಂಗ್‌ಸ್ಟೋನ್ ಒಳ್ಳೆಯ ಆಲ್ರೌಂಡರ್ ಆಗಿದ್ದು, ಆರೆಂಜ್‌ ಆರ್ಮಿಗೆ ಬಲ ತುಂಬಲಿದ್ದಾರೆ.

66
6. ಮುಸ್ತಾಫಿಜುರ್ ರೆಹಮಾನ್: 9.20 ಕೋಟಿ ರುಪಾಯಿ

ಬಾಂಗ್ಲಾದೇಶ ಮೂಲದ ಅನುಭವಿ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬರೋಬ್ಬರಿ 9.20 ಕೋಟಿ ರುಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ. ಮುಸ್ತಾಫಿಜುರ್ ಹಾಗೂ ಪತಿರಣ ಕೆಕೆಆರ್ ಡೆತ್ ಓವರ್ ಬೌಲಿಂಗ್‌ಗೆ ಮತ್ತಷ್ಟು ಬಲ ತರಲಿದ್ದಾರೆ.

Read more Photos on
click me!

Recommended Stories