ಇಲ್ಲಿದೆ ನೋಡಿ ಎಲ್ಲಾ 10 ಐಪಿಎಲ್ ತಂಡಗಳ ರೀಟೈನ್ ಆಟಗಾರರ ಕಂಪ್ಲೀಟ್ ಡೀಟೈಲ್ಸ್‌!

First Published | Nov 1, 2024, 2:26 PM IST

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡು, ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿವೆ. ನಿಯಮಗಳ ಪ್ರಕಾರ, ಫ್ರಾಂಚೈಸಿಗಳು ತಮ್ಮ ಐಪಿಎಲ್ 2024 ತಂಡದಿಂದ ಗರಿಷ್ಠ ಆರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು, ಇದೀಗ ಯಾವ ತಂಡ ಯಾವೆಲ್ಲಾ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ ಎನ್ನುವುದನ್ನು ನೋಡೋಣ ಬನ್ನಿ.

1. ಚೆನ್ನೈ ಸೂಪರ್ ಕಿಂಗ್ಸ್ (CSK)

ಚೆನ್ನೈ ಸೂಪರ್ ಕಿಂಗ್ಸ್ (CSK) ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಐದು ಟ್ರೋಫಿಗಳನ್ನು  ಗೆದ್ದ ಅತ್ಯಂತ ಒಂದು ಯಶಸ್ವಿ ತಂಡ. ಹರಾಜಿನ ತಂತ್ರಗಳ ಬಗ್ಗೆ ಸ್ಪಷ್ಟವಾಗಿರುವ ಸಿಎಸ್‌ಕೆ ಐಪಿಎಲ್ 2025 ಮೆಗಾ ಹರಾಜಿನ ಮೊದಲು ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಮತೀಶಾ ಪತಿರಾಣ, ಶಿವಂ ದುಬೆ ಅವರನ್ನು ಉಳಿಸಿಕೊಂಡಿದೆ. ಜೊತೆಗೆ, ಅನ್‌ಕ್ಯಾಪ್ಡ್ ವಿಭಾಗದಲ್ಲಿ ದಂತಕಥೆ ಎಂಎಸ್ ಧೋನಿಯನ್ನು ತಂಡದಲ್ಲಿ ಉಳಿಸಿಕೊಂಡಿದೆ.

CSK ಉಳಿಸಿಕೊಂಡ ಆಟಗಾರರು : ರವೀಂದ್ರ ಜಡೇಜಾ-18 ಕೋಟಿ, ಋತುರಾಜ್ ಗಾಯಕ್ವಾಡ್ - 18 ಕೋಟಿ, ಮತೀಶಾ ಪತಿರಾನ - 13 ಕೋಟಿ, ಶಿವಂ ದುಬೆ - 12 ಕೋಟಿ, MS ಧೋನಿ - 4 ಕೋಟಿ

2. ಮುಂಬೈ ಇಂಡಿಯನ್ಸ್ (MI)

ಮುಂಬೈ ಇಂಡಿಯನ್ಸ್ (MI) ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಮತ್ತೊಂದು ತಂಡ. ಆದರೆ ಕಳೆದ ಕೆಲವು ಋತುಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಾ ಬಂದಿದೆ. ಐಪಿಎಲ್ 2024 ಋತುವಿನಲ್ಲಿ ಫ್ರಾಂಚೈಸಿ ಪಾಲಿಗೆ ಭಯಾನಕವಾಗಿತ್ತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡವು ಕೇವಲ 4 ಗೆಲುವುಗಳೊಂದಿಗೆ 10 ನೇ ಸ್ಥಾನ ಪಡೆದು ಮುಖಭಂಗ ಅನುಭವಿಸಿತ್ತು. ಆದಾಗ್ಯೂ, ಮುಂಬರುವ ಋತುವಿಗಾಗಿ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಅವರನ್ನು ಉಳಿಸಿಕೊಂಡಿದೆ. 

MI ಉಳಿಸಿಕೊಂಡ ಆಟಗಾರರು : ರೋಹಿತ್ ಶರ್ಮಾ - 16.30 ಕೋಟಿ, ಹಾರ್ದಿಕ್ ಪಾಂಡ್ಯ - 16.35 ಕೋಟಿ, ಜಸ್ಪ್ರೀತ್ ಬುಮ್ರಾ - 18 ಕೋಟಿ, ಸೂರ್ಯಕುಮಾರ್ ಯಾದವ್ - 16.35 ಕೋಟಿ, ತಿಲಕ್ ವರ್ಮಾ - 8 ಕೋಟಿ

Tap to resize

3. ಕೋಲ್ಕತ ನೈಟ್ ರೈಡರ್ಸ್ (KKR)

ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಒಟ್ಟು ಮೂರು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದೆ. ಮುಂಬರುವ ಋತುವಿಗಾಗಿ ಆಲ್ರೌಂಡರ್‌ಗಳಾದ ಆಂಡ್ರೆ ರಸೆಲ್, ಸುನೀಲ್ ನರೈನ್, ರಿಂಕು ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ರಮಣದೀಪ್ ಸಿಂಗ್‌ರೊಂದಿಗೆ ಆರು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಆದಾಗ್ಯೂ, ತಮ್ಮ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಅಚ್ಚರಿಯ ರೀತಿಯಲ್ಲಿ ತಂಡದಿಂದ ರಿಲೀಸ್ ಮಾಡಿದೆ.

KKR ಉಳಿಸಿಕೊಂಡ ಆಟಗಾರರು : ಆಂಡ್ರೆ ರಸೆಲ್ - 12 ಕೋಟಿ, ಸುನೀಲ್ ನರೈನ್ - 12 ಕೋಟಿ, ರಿಂಕು ಸಿಂಗ್ - 13 ಕೋಟಿ, ವರುಣ್ ಚಕ್ರವರ್ತಿ - 12 ಕೋಟಿ, ಹರ್ಷಿತ್ ರಾಣಾ - 4 ಕೋಟಿ, ರಮಣದೀಪ್ ಸಿಂಗ್ - 4 ಕೋಟಿ.

4. ರಾಜಸ್ಥಾನ್ ರಾಯಲ್ಸ್ (RR)

ರಾಜಸ್ಥಾನ ರಾಯಲ್ಸ್ (RR) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಚೊಚ್ಚಲ ಆವೃತ್ತಿಯ ಚಾಂಪಿಯನ್ ತಂಡ. ಕಳೆದ ಕೆಲವು ಋತುಗಳಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದೆ, ಆದರೆ ಮತ್ತೊಮ್ಮೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮುಂಬರುವ ಋತುವಿಗಾಗಿ ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೇಯರ್, ಸಂದೀಪ್ ಶರ್ಮಾ ಅವರನ್ನು ಉಳಿಸಿಕೊಂಡಿದೆ. 

RR ಉಳಿಸಿಕೊಂಡ ಆಟಗಾರರ ಪಟ್ಟಿ : ಸಂಜು ಸ್ಯಾಮ್ಸನ್ - 18 ಕೋಟಿ, ಯಶಸ್ವಿ ಜೈಸ್ವಾಲ್ - 18 ಕೋಟಿ, ರಿಯಾನ್ ಪರಾಗ್ - 14 ಕೋಟಿ, ಧ್ರುವ್ ಜುರೆಲ್ - 14 ಕೋಟಿ, ಶಿಮ್ರಾನ್ ಹೆಟ್ಮೆಯರ್ - 11 ಕೋಟಿ, ಸಂದೀಪ್ ಶರ್ಮಾ - 4 ಕೋಟಿ.

5. ಸನ್‌ರೈಸರ್ಸ್ ಹೈದರಾಬಾದ್ (SRH)

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಫೈನಲಿಸ್ಟ್ ಹೈದರಾಬಾದ್ ತಂಡವು ಮುಂಬರುವ ಋತುವಿಗಾಗಿ ಆಕ್ರಮಣಕಾರಿ ಆಟಗಾರರನ್ನು ಉಳಿಸಿಕೊಂಡಿದೆ. ನಾಯಕ ಪ್ಯಾಟ್ ಕಮಿನ್ಸ್ ಜೊತೆಗೆ ಹೆನ್ರಿಕ್ ಕ್ಲಾಸೆನ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ.

SRH ಉಳಿಸಿಕೊಂಡ ಆಟಗಾರರು : ಹೆನ್ರಿಕ್ ಕ್ಲಾಸೆನ್ - 23 ಕೋಟಿ, ಪ್ಯಾಟ್ ಕಮಿನ್ಸ್ - 18 ಕೋಟಿ, ಅಭಿಷೇಕ್ ಶರ್ಮಾ - 14 ಕೋಟಿ, ಟ್ರಾವಿಸ್ ಹೆಡ್ - 14 ಕೋಟಿ, ನಿತೀಶ್ ರೆಡ್ಡಿ - 6 ಕೋಟಿ.

6. ಗುಜರಾತ್ ಟೈಟಾನ್ಸ್ (GT)

ಗುಜರಾತ್ ಟೈಟಾನ್ಸ್ (GT) ತಾನಾಡಿದ ಮೊದಲ ಋತುವಿನಲ್ಲಿಯೇ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿತು. ನಂತರ ಐಪಿಎಲ್ 2023 ರಲ್ಲಿ ಫೈನಲ್ ತಲುಪಿತು. ಆದರೆ, ಐಪಿಎಲ್ 2024 ರಲ್ಲಿ ಕಳಪೆ ಪ್ರದರ್ಶನದಿಂದ 8 ನೇ ಸ್ಥಾನದಲ್ಲಿ ಕೊನೆಗೊಂಡಿತು. ಮುಂಬರುವ ಋತುವಿಗಾಗಿ ಸ್ಟಾರ್ ಆಲ್‌ರೌಂಡರ್ ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಶಾರೂಖ್ ಖಾನ್ ಜೊತೆಗೆ ತಮ್ಮ ನಾಯಕ ಶುಭಮನ್ ಗಿಲ್ ಅವರನ್ನು ಉಳಿಸಿಕೊಂಡಿದೆ.

ಗುಜರಾತ್ ಟೈಟಾನ್ಸ್ ಧಾರಣಗಳು: ರಶೀದ್ ಖಾನ್ - 18 ಕೋಟಿ, ಶುಭಮನ್ ಗಿಲ್ - 16.5 ಕೋಟಿ, ಸಾಯಿ ಸುದರ್ಶನ್ - 8.5 ಕೋಟಿ, ರಾಹುಲ್ ತೆವಾಟಿಯಾ- 4 ಕೋಟಿ, ಶಾರೂಖ್ ಖಾನ್ - 4 ಕೋಟಿ.

7. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್‌ನಲ್ಲಿ ಭಾರಿ ಅಭಿಮಾನಿ ಬಳಗವನ್ನು ಹೊಂದಿದೆ. ಆದರೆ ಇಲ್ಲಿಯವರೆಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಮುಂಬರುವ ಋತುವಿನಲ್ಲಿ ವಿರಾಟ್ ಕೊಹ್ಲಿಗೆ ನಾಯಕತ್ವವನ್ನು ವಹಿಸಲಿದೆ ಎಂದು ವರದಿಗಳಿವೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ಆರ್‌ಸಿಬಿ ಉಳಿಸಿಕೊಂಡಿದೆ.

RCB ಉಳಿಸಿಕೊಂಡ ಆಟಗಾರರು : ವಿರಾಟ್ ಕೊಹ್ಲಿ - 21 ಕೋಟಿ, ರಜತ್ ಪಾಟಿದಾರ್ - 11 ಕೋಟಿ, ಯಶ್ ದಯಾಳ್ - 5 ಕೋಟಿ

8. ಡೆಲ್ಲಿ ಕ್ಯಾಪಿಟಲ್ಸ್ (DC)

ಡೆಲ್ಲಿ ಕ್ಯಾಪಿಟಲ್ಸ್ (DC) ಐಪಿಎಲ್‌ನಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಆದರೆ, ಇಲ್ಲಿಯವರೆಗೆ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ನಾಯಕ ರಿಷಭ್ ಪಂತ್ ತಂಡದಿಂದ ಹೊರಗುಳಿದಿದ್ದಾರೆ. ಮುಂಬರುವ ಋತುವಿಗಾಗಿ ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಟ್ರಿಸ್ಟನ್ ಸ್ಟಬ್ಸ್, ಅಭಿಷೇಕ್ ಪೊರೆಲ್ ಅವರನ್ನು ಉಳಿಸಿಕೊಂಡಿದೆ. ಮುಂಬರುವ ಋತುವಿನಲ್ಲಿ ಶ್ರೇಯಸ್ ಅಯ್ಯರ್ ಡಿಸಿಗೆ ನಾಯಕರಾಗಲಿದ್ದಾರೆ ಎಂಬ ವರದಿಗಳಿವೆ.

ದೆಹಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ಆಟಗಾರರು : ಅಕ್ಷರ್ ಪಟೇಲ್ - 16.5 ಕೋಟಿ, ಕುಲ್ದೀಪ್ ಯಾದವ್ - 13.25 ಕೋಟಿ, ಟ್ರಿಸ್ಟನ್ ಸ್ಟಬ್ಸ್ - 10 ಕೋಟಿ, ಅಭಿಷೇಕ್ ಪೊರೆಲ್ - 4 ಕೋಟಿ

9. ಪಂಜಾಬ್ ಕಿಂಗ್ಸ್ (PBKS)

ಪಂಜಾಬ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಹರಾಜಿನಲ್ಲಿ ಪ್ರತಿ ಬಾರಿಯೂ ತಂಡದಲ್ಲಿ ಭಾರಿ ಬದಲಾವಣೆಗಳನ್ನು ಮಾಡುತ್ತದೆ. ಈ ಬಾರಿಯೂ ಅದೇ ಯೋಜನೆಯೊಂದಿಗೆ ಮುಂದುವರೆದಿದೆ. ಹೀಗಾಗಿ ತಂಡದ ಎಲ್ಲಾ ಸ್ಟಾರ್ ಆಟಗಾರರನ್ನು ಬಿಟ್ಟುಬಿಟ್ಟು ಅನ್‌ಕ್ಯಾಪ್ಡ್ ಪಟ್ಟಿಯಲ್ಲಿ ಶಶಾಂಕ್ ಸಿಂಗ್, ಪ್ರಭ್ಸಿಮ್ರಾನ್ ಸಿಂಗ್ ಅವರನ್ನು ಮಾತ್ರ ಉಳಿಸಿಕೊಂಡಿದೆ.

ಪಂಜಾಬ್ ಕಿಂಗ್ಸ್ ಧಾರಣ ಪಟ್ಟಿ : ಶಶಾಂಕ್ ಸಿಂಗ್ - 5.5 ಕೋಟಿ, ಪ್ರಭ್ಸಿಮ್ರಾನ್ ಸಿಂಗ್ - 4 ಕೋಟಿ

10. ಲಕ್ನೋ ಸೂಪರ್ ಜೈಂಟ್ಸ್ (LSG)

ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಮ್ಮ ನಾಯಕ ಕೆಎಲ್ ರಾಹುಲ್ ಅವರನ್ನು ಬಿಟ್ಟುಬಿಟ್ಟಿರುವುದರಿಂದ ಹರಾಜಿನ ಮೊದಲು ದೊಡ್ಡ ಬದಲಾವಣೆ ಕಂಡಿದೆ. ಕೆಎಲ್ ರಾಹುಲ್ ಹೊರಗುಳಿದ ನಂತರ ನಿಕೋಲಸ್ ಪೂರನ್ ತಂಡದಲ್ಲಿ ಉಳಿದಿದ್ದಾರೆ. ಅವರ ಜೊತೆಗೆ ಮಯಾಂಕ್ ಯಾದವ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಆಯುಷ್ ಬದೋನಿ ಅವರನ್ನು ಲಕ್ನೋ ತಂಡ ಉಳಿಸಿಕೊಂಡಿದೆ.

ಲಕ್ನೋ ಸೂಪರ್ ಜೈಂಟ್ಸ್ (LSG) ಧಾರಣ ಪಟ್ಟಿ: ನಿಕೋಲಸ್ ಪೂರನ್ - 21 ಕೋಟಿ, ಮಯಾಂಕ್ ಯಾದವ್ - 11 ಕೋಟಿ, ರವಿ ಬಿಷ್ಣೋಯ್ - 11 ಕೋಟಿ, ಮೊಹ್ಸಿನ್ ಖಾನ್ - 4 ಕೋಟಿ, ಆಯುಷ್ ಬಡೋನಿ - 4 ಕೋಟಿ

Latest Videos

click me!