IPL 2024: ಆರೆಂಜ್ ಕ್ಯಾಪ್,ಗೆದ್ದ ಕೊಹ್ಲಿಗೆ ₹10 ಲಕ್ಷ ನಗದು, ಮತ್ತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್?

First Published | May 27, 2024, 3:37 PM IST

ಚೆನ್ನೈ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಸನ್‌ರೈಸರ್ಸ್ ಜೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು 2024ನೇ ಸಾಲಿನ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚಾಂಪಿಯನ್ ತಂಡಕ್ಕೆ ಸಿಕ್ಕ ಬಹುಮಾನವೆಷ್ಟು? ನಾಕೌಟ್‌ಗೇರಿದ್ದ ಆರ್‌ಸಿಬಿ ಸಿಕ್ಕ ನಗದು ಬಹುಮಾನ ಎಷ್ಟು? ಇನ್ನು ಯಾರಿಗೆ ಯಾವೆಲ್ಲಾ ಅವಾರ್ಡ್ ಸಿಕ್ಕಿದೆ ನೋಡೋಣ ಬನ್ನಿ.
 

ಜಗತ್ತಿನ ಶ್ರೀಮಂತ ಟಿ20 ಲೀಗ್ ಎಂದೇ ಪ್ರಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಬರೋಬ್ಬರಿ 46.5 ಕೋಟಿ ರುಪಾಯಿಗಳನ್ನು ಮೀಸಲಿಡಲಾಗಿತ್ತು.

ಈ ಪೈಕಿ ಮೂರನೇ ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಟ್ರೋಫಿ ಜತೆಗೆ 20 ಕೋಟಿ ರುಪಾಯಿ ನಗದು ಬಹುಮಾನ ಪಡೆದರೆ, ರನ್ನರ್ ಅಪ್ ತಂಡವಾದ ಸನ್‌ರೈಸರ್ಸ್ ಹೈದರಾಬಾದ್ 13 ಕೋಟಿ ರುಪಾಯಿ ತನ್ನದಾಗಿಸಿಕೊಂಡಿತು.

Tap to resize

ಇನ್ನು ನಾಕೌಟ್ ಹಂತ ಪ್ರವೇಶಿಸಿದ್ದ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕ್ರಮವಾಗಿ 7 ಹಾಗೂ 6.5 ಕೋಟಿ ರುಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡವು.

ಟೂರ್ನಿಯುದ್ದಕ್ಕೂ ಅಸಾಧಾರಣ ಪ್ರದರ್ಶನ ತೋರಿ 15 ಪಂದ್ಯಗಳಿಂದ 61.75ರ ಬ್ಯಾಟಿಂಗ್ ಸರಾಸರಿಯಲ್ಲಿ ಒಂದು ಶತಕ ಹಾಗೂ 5 ಅರ್ಧಶತಕ ಸಹಿತ 741 ರನ್ ಸಿಡಿಸಿದ ಆರ್‌ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಆರೆಂಜ್‌ ಕ್ಯಾಪ್ ಅವಾರ್ಡ್ ಜತೆಗೆ ಕೊಹ್ಲಿ 10 ಲಕ್ಷ ರುಪಾಯಿ ನಗದು ಬಹುಮಾನ ಪಡೆದರು.

ಇನ್ನು ಪಂಜಾಬ್ ಕಿಂಗ್ಸ್ ತಂಡದ ಅನುಭವಿ ವೇಗಿ ಹರ್ಷಲ್ ಪಟೇಲ್, ಟೂರ್ನಿಯಲ್ಲಿ ಗರಿಷ್ಠ ವಿಕೆಟ್(24) ಕಬಳಿಸುವ ಮೂಲಕ ಎರಡನೇ ಬಾರಿಗೆ ಪರ್ಪಲ್ ಕ್ಯಾಪ್ ಅವಾರ್ಡ್ ತಮ್ಮದಾಗಿಸಿಕೊಂಡರು. ಇದರ ಜತೆಗೆ ಹರ್ಷಲ್ ಪಟೇಲ್ 10 ಲಕ್ಷ ರುಪಾಯಿ ನಗದು ಬಹುಮಾನವನ್ನು ಪಡೆದರು.

ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗುವಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿದ ಸುನಿಲ್ ನರೈನ್ ಸರಣಿ ಶ್ರೇಷ್ಠ(ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇ ಆಫ್‌ ದಿ ಸೀಸನ್) ಬಹುಮಾನ ಪಡೆದರು. ನರೈನ್ 14 ಪಂದ್ಯಗಳನ್ನಾಡಿ ಬ್ಯಾಟಿಂಗ್‌ನಲ್ಲಿ 488 ರನ್ ಸಿಡಿಸಿದರೆ, ಬೌಲಿಂಗ್‌ನಲ್ಲಿ 17 ವಿಕೆಟ್ ಪಡೆದರು. ಈ ಅವಾರ್ಡ್ ಜತೆಗೆ ನರೈನ್ 12 ಲಕ್ಷ ರುಪಾಯಿ ನಗದು ಬಹುಮಾನ ಪಡೆದರು.

ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಉದಯೋನ್ಮುಖ ಆಟಗಾರ ಅವಾರ್ಡ್ ತನ್ನದಾಗಿಸಿಕೊಂಡರು. ರೆಡ್ಡಿ 13 ಪಂದ್ಯಗಳನ್ನಾಡಿ 303 ರನ್ ಬಾರಿಸಿದರೆ, ಬೌಲಿಂಗ್‌ನಲ್ಲಿ 3 ವಿಕೆಟ್ ಪಡೆದರು. ನಿತೀಶ್ ಕುಮಾರ್ ರೆಡ್ಡಿ ಎಮರ್ಜಿಂಗ್ ಪ್ಲೇ ಆಫ್‌ ದಿ ಸೀಸನ್ ಪ್ರಶಸ್ತಿ ಜತೆಗೆ 20 ಲಕ್ಷ ರುಪಾಯಿಗಳನ್ನು ಜೇಬಿಗಿಳಿಸಿಕೊಂಡರು.

ಫೇರ್ ಪ್ಲೇ ಅವಾರ್ಡ್‌ ಸನ್‌ರೈಸರ್ಸ್ ಹೈದರಾಬಾದ್ ಪಾಲು:

ಕ್ರೀಡಾಸ್ಪೂರ್ತಿಯನ್ನು ಎತ್ತಿಹಿಡಿದಿದ್ದಕ್ಕೆ ನೀಡಲಾಗುವ ಫೇರ್‌ ಪ್ಲೇ ಅವಾರ್ಡ್‌ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ಪಾಲಾಯಿತು. ಆರೆಂಜ್ ಆರ್ಮಿ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯುದ್ದಕ್ಕೂ ಶಿಸ್ತಿನ ಪ್ರದರ್ಶನ ತೋರಿತ್ತು.

Latest Videos

click me!