ಕೆಕೆಆರ್‌ಗೆ ಐಪಿಎಲ್ 2024 ಕಿರೀಟ: ಮೋದಿಯನ್ನು ನಿರ್ಲಕ್ಷಿಸಿದ್ರೂ, ಶ್ರೇಯಸ್ ಅಯ್ಯರ್‌ಗೇ ಗೆಲುವಾಯ್ತೆಂದ ನೆಟ್ಟಿಗರು!

Published : May 27, 2024, 01:39 PM IST

Sunrisers Hyderabad ಮಣಿಸಿ Kolkata Knight Riders 2024ರ ಐಪಿಎಲ್ ಟ್ರೋಫಿ ಗೆದ್ದಿದೆ. ಚೆನ್ನೈನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಮೂರನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ ಕೆಕೆಆರ್. ಇದರಲ್ಲಿ ತಂಡದ ಶ್ರಮವಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲಿಯೂ ನಾಯಕ ಶ್ರೇಯಸ್ ಅಯ್ಯರ್‌ಗೆ ಗೆಲುವಿನ ಕೀರ್ತಿ ಸಲ್ಲುತ್ತದೆ. ಆದರೆ, ನೆಟ್ಟಿಗರು ಇದೀಗ ಈ ಗೆಲುವಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಯಾವತ್ತೂ ಮೋದಿಗೆ ಶ್ರೇಯಸ್ ಅಯ್ಯರ್ ಮಣೆ ಹಾಕಿಲ್ಲ, ಬಿಜೆಪಿ ಕಡೆಗೆ ವಾಲಿಲ್ಲ. ಆದರೂ, ಲಕ್ ಅಯ್ಯರ್ ಜೊತೆಗಿದ್ದು, ತಮ್ಮ ನಾಯಕತ್ವದಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.   

PREV
112
ಕೆಕೆಆರ್‌ಗೆ ಐಪಿಎಲ್ 2024 ಕಿರೀಟ: ಮೋದಿಯನ್ನು ನಿರ್ಲಕ್ಷಿಸಿದ್ರೂ, ಶ್ರೇಯಸ್ ಅಯ್ಯರ್‌ಗೇ ಗೆಲುವಾಯ್ತೆಂದ ನೆಟ್ಟಿಗರು!

Amockxi FC ಎಂಬ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಹಾಕಲಾಗಿದ್ದು, ಇದೊಂದು ಕಾಮೆಂಟರ್ ಅಕೌಂಟ್ ಎಂಬುವುದು ಸ್ಪಷ್ಟವಾಗುತ್ತದೆ. ಆರ್‌ಜಿ ಎಂದೂ ಬಯೋನಲ್ಲಿ ಮೆನ್ಷನ್ ಮಾಡಲಾಗಿದೆ.

212

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು.

312

ಈ ವೇಳೆ ನಮ್ಮ ದೇಶದ ತಂಡ ಸೋತಾಗ ಪ್ರಧಾನಿ ನರೇಂದ್ರ ಮೋದಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮಿಗೆ ಹೋಗಿ ಭಾರತೀಯ ಕ್ರಿಕೆಟಿಗರನ್ನು ಸಂತೈಸಿದ್ದರು.

412

ಆದರೆ ಆಗ ಡ್ರೆಸ್ಸಿಂಗ್‌ ರೂಂನಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್, ಪ್ರಧಾನಿ ಮೋದಿಯನ್ನು ಇಗ್ನೋರ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು!

512

ಅಷ್ಟೇ ಅಲ್ಲ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯನ್ನು ರಾಜಕೀಯ ಕಾರ್ಯಕ್ರಮ ಮಾಡಲಾಗಿತ್ತು. ಅದಕ್ಕೂ ಶ್ರೇಯಸ್ ಅಯ್ಯರ್ ಮಣೆಯನ್ನೇ ಹಾಕಲಿಲ್ಲವಂತೆ.

612

ಇನ್‌ಸ್ಟಾಗ್ರಾಮ‌್ನಲ್ಲಿ ಧೈರ್ಯವಾಗಿ ಶ್ರೇಯಸ್ ಅಯ್ಯರ್, ಮೋದಿ ಸರ್ಕಾರದ ಕಟು ವಿಮರ್ಶಕರಾಗಿರುವ ಧ್ರುವ್ ರಾಥಿಯನ್ನು ಫಾಲೋ ಮಾಡಿದರು ಇದೀಗ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿಯೂ ಶ್ರೇಯಸ್ ಯಶಸ್ವಿಯಾಗಿದ್ದಾರೆಂಬ ಪೋಸ್ಟಿನಲ್ಲಿ ಹೇಳಲಾಗಿದ್ದು, ಇದರ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. 

712

ಕೆಕೆಆರ್ ಐಪಿಎಲ್ ಗೆದ್ದಿದ್ದಕ್ಕೆ ಜೂನ್ 4ರ ನಂತರ ರಾಹುಲ್ ಗಾಂಧಿ ಪಿಎಂ ಆಗ್ತಾರಾ ಎಂಬಲ್ಲಿಂದ ಹಿಡಿದು, ಈ ಮ್ಯಾಚನ್ನು ಜೇ ಮೆಹ್ತಾ ಫಿಕ್ಸ್ ಮಾಡಿದ್ದರೆನ್ನುವಲ್ಲಿಗೆ  ಈ ಪೋಸ್ಟ್ ಬಗ್ಗೆ ಚರ್ಚೆಯಾಗುತ್ತಿದೆ.

812

ಇದರಿಂದ ನರೇಂದ್ರ ಮೋದಿ ಡಿಕ್ಟೇಟರ್ ಅಲ್ಲ ಎಂಬುವುದೂ ಸಾಬೀತಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದು, ಇದು ಕಾಂಗ್ರೆಸ್ ಟೂಲ್ ಕಿಟ್ಎಂಬ ಆರೋಪವೂ ಕೇಳಿ ಬರುತ್ತಿದೆ.

912

ಇನ್ನು ದ್ರಾವಿಡ ಟೀಮ್ ಸೋತಿದ್ದಕ್ಕೆ ಸೆಲೆಬ್ರೇಟ್ ಮಾಡುತ್ತಿದ್ದು, ಉನ್ನತ ವರ್ಗದವರ ಕ್ಯಾಪ್ಟೆನ್ಸಿಯಲ್ಲಿ ಟೀಂ ಗೆದ್ದಿದ್ದಕ್ಕೆ ಕಾಂಗ್ರೆಸ್ ಸಂಭ್ರಮಿಸುತ್ತಿದೆ, ಎಂಬ ಕಮೆಂಟ್ ಸಹ ಬಂದಿದೆ.

1012

ಒಟ್ಟಿನಲ್ಲಿ ಕ್ರಿಕೆಟ್ ಗೆಲುವನ್ನು, ಅದರಲ್ಲಿಯೂ ಐಪಿಎಲ್ ಗೆಲುವಲ್ಲೂ ರಾಜಕಾರಣ ಮಾಡಿದ ಟ್ವೀಟಿಗೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದು, ಸಂಬಂಧವೇ ಇಲ್ಲದಂತೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

1112

ಆದರೆ, ಈ ಚರ್ಚೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ರಣದೀಪ್ ಸಿಸೋಡಿಯಾ ಎಂಬುವರ ಕಮೆಂಟ್‌ನಿಂದ. ಕೆಕೆಆರ್ ಗೆದ್ದಿದ್ದು ಸುಳ್ಳಲ್ಲ. ಅದರಲ್ಲಿ ಶ್ರೇಯಸ್ ಅಯ್ಯರ್ ಸ್ಟ್ರಾಟಜಿಯೊಂದಿಗೆ, ಗೌತಮ್ ಗಂಭೀರ್ ಕೋಚಿಂಗ್ ಸಹ ಅಷ್ಟೇ ಮುಖ್ಯವಾಗಿತ್ತು. ಗೌತಮ್ ಬಿಜೆಪಿಗ ಎನ್ನುವುದರ ಮೂಲಕ ಚರ್ಚೆ ಮತ್ತೊಂದೆಡೆ ಎಳೆದುಕೊಂಡು ಹೋಗಿದೆ.

1212

ಐಪಿಎಲ್ ಒಂದು ಜೋಕ್, ಜಾಗತಿಕ ಮಟ್ಟದ ಟಿ20 ಮ್ಯಾಚಿನಲ್ಲಿ ಹೋರಾಡಲು ಅಸಮರ್ಥನಾಗೋ ಬ್ಯಾಟ್ಸ್‌ಮನ್, ಈ ಟೂರ್ನಿಯಲ್ಲಿ ಚಚ್ಚಿ ಹಾಕುತ್ತಾನೆ. ಅದು ಹೇಗೆ ಎಂಬುವುದೇ ಅರ್ಥವಾಗುತವುದಿಲ್ಲೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

Read more Photos on
click me!

Recommended Stories