ಭಾರತದ ಮಾಜಿ ಕ್ರಿಕೆಟಿಗ, ಯುವರಾಜ್ ಸಿಂಗ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಆಲ್ ರೌಂಡರ್ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ICC ವಿಶ್ವಕಪ್ 2011 ರಲ್ಲಿ ಅವರ ದೊಡ್ಡ ಕೊಡುಗೆಯೊಂದಿಗೆ, ಭಾರತವು 28 ಸುದೀರ್ಘ ವರ್ಷಗಳ ನಂತರ ಮರಳಿ ಚಾರ್ಮ್ ಪಡೆಯಿತು. ಇದರ ಹೊರತಾಗಿ, ಯುವಿ ಬಹುದೊಡ್ಡ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದರು. ಬಿ-ಟೌನ್ ಸುಂದರಿಯರು ಸಹ ಅವನತ್ತ ಆಕರ್ಷಿತರಾಗುದ್ದರು. ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ ಯುವಿ ಡೇಟಿಂಗ್‌ನಲ್ಲಿದ್ದರು ಎನ್ನಲಾಗಿದೆ. 2008 ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಈ ವೇಳೆ ಯುವಿ ಟೆಸ್ಟ್ ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದರು. ಆಗ ಅಪಾರ ಅಭಿಮಾನಿಗಳು ದೀಪಿಕಾ ಅವರನ್ನು ದೂಷಿಸಿದರು. ಬಳಿಕ ಯುವಿ ಬಾಲಿವುಡ್ ನಟಿ, ಹೇಜೆಲ್ ಕೀಚ್ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದಾರೆ.