IPL 2022: Mayank Agarwal ಪತ್ನಿ ಆಶಿತಾ ಸೂದ್‌ ಬಗೆಗಿನ ಇಂಟ್ರೆಸ್ಟಿಂಗ್ ಸಂಗತಿಗಳಿವು..!

First Published | Mar 28, 2022, 5:40 PM IST

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(Indian Premier League 2022) ಟೂರ್ನಿಯ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಪಂಜಾಬ್ ಕಿಂಗ್ಸ್ (Punjab Kings) 5 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಪಂಜಾಬ್‌ಗೆ 206 ರನ್‌ಗಳ ದೊಡ್ಡ ಸ್ಕೋರ್ ನೀಡಿದ್ದರೂ, ಮಯಾಂಕ್ ಅಗರ್ವಾಲ್ (Mayank Agarwal)  ನಾಯಕತ್ವದ ಪಂಜಾಬ್ ತಂಡವು ಪಂದ್ಯದ ಮೇಲೆ ಮೊದಲಿನಿಂದಲೂ ಹಿಡಿತ ಸಾಧಿಸಿತು. ನಾಯಕರಾಗಿ ಮಯಾಂಕ್‌ಗೆ ಇದು ಮೊದಲ ಪಂದ್ಯವಾಗಿದ್ದು, ಮೊದಲ ಪಂದ್ಯದಲ್ಲಿಯೇ ಅವರು ಅತ್ಯುತ್ತಮ ಕ್ಯಾಪ್ಟನ್‌ ಎಂದು ಪ್ರೂವ್‌ ಮಾಡಿದ್ದಾರೆ. ಜೊತೆಗೆ ಅವರು ಬ್ಯಾಟಿಂಗ್‌ನಲ್ಲಿ 32 ರನ್‌ಗಳನ್ನುಬಾರಿಸಿದರು. ಈ ಪಂದ್ಯದಲ್ಲಿ ಅವರನ್ನು ಹುರಿದುಂಬಿಸಲು ಅವರ ಪತ್ನಿ ಆಶಿತಾ ಸೂದ್ (Aashita Sood) ಕೂಡ ಹಾಜರಿದ್ದರು. ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಜಾಬ್ ನಾಯಕನ ಸ್ಟೈಲಿಶ್ ಪತ್ನಿ ಆಶಿತಾ ಸೂದ್ ಕಿರುಪರಿಚಯ ಇಲ್ಲಿದೆ.

ಟೀಂ ಇಂಡಿಯಾ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರ ಪತ್ನಿ ಆಶಿತಾ ಸೂದ್ ಅವರು ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2022 ರ ಮೂರನೇ ಪಂದ್ಯದಲ್ಲಿ ಕಾಣಿಸಿಕೊಂಡರು.

ಆಶಿತಾ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಂದ್ಯದ ಸಮಯದಲ್ಲಿ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಸ್ಟ್ಯಾಂಡ್‌ನಲ್ಲಿ ನಿಂತುಕೊಂಡು ನೀಲಿ ಬಣ್ಣದ ಅಗಲವಾದ ಲೆಗ್ ಜೀನ್ಸ್‌ನೊಂದಿಗೆ ಬಿಳಿ ಟಾಪ್ ಧರಿಸಿ ಸ್ಟೈಲಿಶ್ ಆಗಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು.
 

Tap to resize

ಇದರೊಂದಿಗೆ, ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ತಮ್ಮ ಗರ್ಲ್ ಗ್ಯಾಂಗ್‌ನೊಂದಿಗೆ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮತ್ತು ಇತರ ಆಟಗಾರರ ಪತ್ನಿ ಮತ್ತು ತಂಡದ ಸಿಬ್ಬಂದಿ ಪಂಜಾಬ್ ಕಿಂಗ್ಸ್ ಅನ್ನು ಹುರಿದುಂಬಿಸುತ್ತಿದ್ದಾರೆ.
 

ಈ ಪಂದ್ಯದಲ್ಲಿ ಉಭಯ ತಂಡಗಳು ರನ್ ಮಳೆಗರೆದಿದ್ದು, ಒಂದು ಪಂದ್ಯದಲ್ಲಿ ಒಟ್ಟು 413 ರನ್ ಗಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪಂಜಾಬ್ ಕಿಂಗ್ಸ್‌ಗೆ 206 ರನ್‌ಗಳ ಗುರಿ ನೀಡಿತು. ಆದರೆ, ಪಂಜಾಬ್ ತಂಡ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸುವ ಮೂಲಕ ಗೆಲವು ಸಾಧಿಸಿತು.

ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ತಂಡದ ಮೊದಲ ಗೆಲುವಿನ ನಂತರ ತುಂಬಾ ಸಂತೋಷದಿಂದ ಕಾಣುತ್ತಿದ್ದರು. ಅವರ ಪತ್ನಿ ಆಶಿತಾ ಕೂಡಾ ಪತಿಯ ಗೆಲುವಿನಿಂದ ತುಂಬಾ ಸಂತೋಷಪಟ್ಟರು. 

ಜೂನ್ 4, 2018 ರಂದು ಅವರು ಆಶಿದಾ ಸೂದ್ ಅವರನ್ನು ಮಯಾಂಕ್ ಅಗರ್ವಾಲ್ ವಿವಾಹವಾದರು .ಆಶಿತಾ ಅವರ ತಂದೆ ಪ್ರವೀಣ್ ಸೂದ್ ಅವರು ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಅಶಿತಾ ಸ್ವತಃ ವಕೀಲರು. ಬೆಂಗಳೂರಿನಲ್ಲೇ ಕಾನೂನು ಓದಿದ್ದಾರೆ.  

ಮಯಾಂಕ್ ಆಗಾಗ್ಗೆ ತನ್ನ ಪತ್ನಿಯೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಆಶಿತಾ ಕೂಡ ಪ್ರತಿ ವರ್ಷ ಐಪಿಎಲ್ ಸಮಯದಲ್ಲಿ ತನ್ನ ಪತಿಯನ್ನು ಚಿಯರ್‌ ಮಾಡಲು ಹಾಜರಾಗುತ್ತಾರೆ.
 

ಮಯಾಂಕ್ ಮತ್ತು ಆಶಿತಾ ಅವರ ಲವ್ ಸ್ಟೋರಿ ತುಂಬಾ ರೋಮ್ಯಾಂಟಿಕ್ ಆಗಿದೆ. ದೀಪಾವಳಿ ಸಂದರ್ಭದಲ್ಲಿ ಕುಟುಂಬ ಸಮಾರಂಭವೊಂದರಲ್ಲಿ ಇಬ್ಬರೂ ಮೊದಲು ಭೇಟಿಯಾಗಿದ್ದರು. ಇಲ್ಲಿಯೇ ಶುರುವಾದ ಇಬ್ಬರ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು. ಮದುವೆಯಾಗುವ ಮೊದಲು ಇಬ್ಬರೂ 7 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು.
 

ಲಂಡನ್‌ನ ಥೇಮ್ಸ್ ನದಿಯ ದಡದಲ್ಲಿ ನಿರ್ಮಿಸಲಾದ 135-ಮೀಟರ್ ಎತ್ತರದ ವೈಮಾನಿಕ ಸ್ವಿಂಗ್ ಲಂಡನ್ ಐನಲ್ಲಿ ಮಯಾಂಕ್ ಜನವರಿ 2018 ರಲ್ಲಿ ಆಶಿತಾಗೆ ಪ್ರಪೋಸ್‌ ಮಾಡಿದ್ದರು. ಇದಾದ ನಂತರ ಆಶಿತಾ ಕೂಡ ಮದುವೆಗೆ ಒಪ್ಪಿ ಜೂನ್‌ನಲ್ಲಿ ಇಬ್ಬರೂ ಮದುವೆಯಾದರು.

Latest Videos

click me!