IPL 2022- KKR ಹೊಸ ನಾಯಕ Shreyas Iyer ಐಷಾರಾಮಿ ಜೀವನಶೈಲಿ ಹೀಗಿದೆ

Suvarna News   | Asianet News
Published : Mar 26, 2022, 05:07 PM IST

ಇಂದು ಅಂದರೆ ಶನಿವಾರ, 26 ಮಾರ್ಚ್ 2022 ರಂದು, ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ IPL 2022 ರ ಮೊದಲ ಪಂದ್ಯವು ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಉಭಯ ತಂಡಗಳು ಈ ಬಾರಿ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿವೆ. ಒಂದು ರೀತಿಯಲ್ಲಿ ಸಿಎಸ್‌ಕೆ ನಾಯಕತ್ವವನ್ನು ರವೀಂದ್ರ ಜಡೇಜಾ ವಹಿಸಿದರೆ, ಕೆಕೆಆರ್ ಅನ್ನು ಶ್ರೇಯಸ್ ಅಯ್ಯರ್ (Shreyas Iyer) ನಿರ್ವಹಿಸಲಿದ್ದಾರೆ. ಅಯ್ಯರ್ ಅವರನ್ನು ಈ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ 12.25 ಕೋಟಿ ರೂಪಾಯಿ ವೆಚ್ಚದಲ್ಲಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ ಮತ್ತು ನಾಯಕನನ್ನಾಗಿ ಮಾಡಿದೆ. ಕೆಕೆಆರ್‌ನ ಸ್ಟೈಲಿಶ್ ಕ್ಯಾಪ್ಟನ್ ಅಯ್ಯರ್ ಅವರ ಐಷಾರಾಮಿ ಜೀವನದ ಕೆಲವು ಝಲಕ್‌ಗಳ ಪರಿಚಯ ಇಲ್ಲಿದೆ.

PREV
18
IPL 2022- KKR ಹೊಸ ನಾಯಕ Shreyas Iyer ಐಷಾರಾಮಿ ಜೀವನಶೈಲಿ ಹೀಗಿದೆ

ಐಪಿಎಲ್ ಮೆಗಾ ಹರಾಜಿನಲ್ಲಿ 12.25 ಕೋಟಿ ರೂ.ಗೆ ಮಾರಾಟವಾದ ಶ್ರೇಯಸ್ ಅಯ್ಯರ್ ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ ಮತ್ತು ಇದು ಅವರ ಬಟ್ಟೆ, ಬೂಟುಗಳು, ಕಾರು ಮತ್ತು ಮನೆಯಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ  ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

28

ಪಂದ್ಯಕ್ಕೂ ಒಂದು ದಿನ ಮೊದಲು ಅಪ್ಲೋಡ್ ಮಾಡಿರುವ ಈ ಫೋಟೋದಲ್ಲಿ ಅಯ್ಯರ್ ಕೈಯಲ್ಲಿ ದುಬಾರಿ ಫೋನ್, ಸ್ಟೈಲಿಶ್ ಬಟ್ಟೆ, ಕೊರಳಲ್ಲಿ ಚೈನ್, ಕೈಯಲ್ಲಿ ದುಬಾರಿ ವಾಚ್ ಧರಿಸಿ   ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
 

 

38

ಶ್ರೇಯಸ್ ಅಯ್ಯರ್ 2015 ರಿಂದ ಐಪಿಎಲ್ ಆಡುತ್ತಿದ್ದಾರೆ.  ಅವರ ಆಟದ ಜೊತೆಗೆ, ಅವರ  ವೈಯಕಿಕ ಜೀವನ ಸಹ ಯಾವುದೇ ಸ್ಟಾರ್‌ಗಿಂತ  ಕಡಿಮೆಯಿಲ್ಲ. ವರದಿ ಪ್ರಕಾರ ಅವರ ಒಟ್ಟು ಆಸ್ತಿ 43 ಕೋಟಿಗೂ ಹೆಚ್ಚು.

48

ಶ್ರೇಯಸ್ ಅಯ್ಯರ್ ಅವರು ಮುಂಬೈನಲ್ಲಿ ಐಷಾರಾಮಿ ಫ್ಲಾಟ್  ಮಾಲೀಕರು.  ಅವರು  ಮನೆಯನ್ನು ಸ್ವಲ್ಪ ಸಮಯದ ಹಿಂದೆ ಖರೀದಿಸಿದರು. ಲೋವರ್ ಪರೇಲ್ ನ ವರ್ಲ್ಡ್ ಟವರ್ಸ್ ನಲ್ಲಿ 2,618 ಚದರ ಅಡಿಯ ಐಷಾರಾಮಿ ಅಪಾರ್ಟ್ ಮೆಂಟ್ ಅನ್ನು 11.85 ಕೋಟಿ ರೂ.ಗೆ ಖರೀದಿಸಿದ್ದರು.

58

ಮನೆ ಬಿಟ್ಟರೆ ಅಯ್ಯರ್ ಅವರ ಬಹುತೇಕ ಹಣ ಕಾರುಗಳಲ್ಲಿ ಹೂಡಿಕೆಯಾಗಿದೆ. ಅವರ ನೆಚ್ಚಿನ ಕಾರು ಫೆರಾರಿ. ಇದಲ್ಲದೇ ಆಡಿ ಎಸ್5, ಬಿಎಂಡಬ್ಲ್ಯು ಮುಂತಾದ ಹಲವು ಕಾರುಗಳನ್ನು ಹೊಂದಿದ್ದಾರೆ.

68

ಅವರು 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಆಡಿದ ಹಣದಿಂದ ತಮ್ಮ ಮೊದಲ ಕಾರನ್ನು ಹ್ಯುಂಡೈ ಐ 20 ಸ್ಪೋರ್ಟ್ಸ್ ಖರೀದಿಸಿದರು ಮತ್ತು ಅವರು ಇನ್ನೂ ಈ ಕಾರು ಅವರ ಬಳಿ ಇದೆ.

78

ಶ್ರೇಯಸ್ ಅಯ್ಯರ್ ಅವರು ಶೂಗಳು ಮತ್ತು ವಾಚ್‌ಗಳ ಉತ್ತಮ ಸಂಗ್ರಹವನ್ನು ಹೊಂದಿದ್ದಾರೆ. ಅವರ ಮನೆಯಲ್ಲಿ, ಅವರು ಉನ್ನತ ಮಟ್ಟದ ಸ್ನೀಕರ್‌ಗಳಿಗಾಗಿ ಪ್ರತ್ಯೇಕ ಕ್ಯಾಬಿನೆಟ್ ಅನ್ನು ನಿರ್ವಹಿಸುತ್ತಾರೆ.

88

ಇನ್ನೂ ಅಯ್ಯರ್ ಲವ್‌ ಲೈಫ್‌ ಬಗ್ಗೆ ಹೇಳುವುದಾದರೆ, ಅವರ ಹೆಸರು ಪ್ರಸಿದ್ಧ ಮಾಡೆಲ್ ನಿಕಿತಾ ಜೈಸಿಂಘಾನಿ ಅವರ ಜೊತೆ ಕೇಳಿ ಬರುತ್ತದೆ ಅವರಿಬ್ಬರೂ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತದೆ. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು  ಖಚಿತಪಡಿಸಿಲ್ಲ. ಜಾಹೀರಾತಿನ ಚಿತ್ರೀಕರಣದ ವೇಳೆ ಇವರಿಬ್ಬರು ಭೇಟಿಯಾಗಿದ್ದರು. 
 

click me!

Recommended Stories