ಸಂಜನಾ ಗಣೇಶನ್ :
ಸಂಜನಾ ಗಣೇಶನ್ :
ಸಂಜನಾ ಗಣೇಶನ್ ಪ್ರಸ್ತುತ ಭಾರತದ ಪ್ರಮುಖ ಆಂಕರ್‌ಗಳಲ್ಲಿ ಒಬ್ಬರು. ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕ್ರಿಕೆಟ್ ಶೋಗಳನ್ನು ಆಯೋಜಿಸುತ್ತಿದ್ದಾರೆ. ಅವರು ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪತ್ನಿ. ಸಂಜನಾ ಹಾಗೂ ಬುಮ್ರಾ ಕಳೆದ ವರ್ಷವಷ್ಟೇ ವಿವಾಹವಾದರು. ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆ್ಯಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ಮಹಿಳಾ ವಿಶ್ವಕಪ್ ಮುಗಿದ ಬಳಿಕ ಐಪಿಎಲ್‌ನಲ್ಲಿ ಸಂಜನಾ ಕಾಣಿಸಿಕೊಳ್ಳಲಿದ್ದಾರೆ
ತಾನ್ಯಾ ಪುರೋಹಿತ್ :
ತಾನ್ಯಾ ಪುರೋಹಿತ್ :
ತಾನ್ಯಾ ಪುರೋಹಿತ್ ಉತ್ತರಾಖಂಡ್ ಮೂಲದವರಾಗಿದ್ದು, ಗರ್ವಾಲ್ ವಿಶ್ವವಿದ್ಯಾಲಯದ ಸಮೂಹ ಸಂವಹನದ ವಿದ್ಯಾರ್ಥಿನಿಯಾಗಿದ್ದಾರೆ. ಅಷ್ಟೇ ಅಲ್ಲ, ಅನುಷ್ಕಾ ಶರ್ಮಾ ಅಭಿನಯದ NH-10 ಚಿತ್ರದ ಮೂಲಕ ಅವರು ಸಾಕಷ್ಟು ಸುದ್ದಿ ಮಾಡಿದರು. ಅಂದಿನಿಂದ ತಾನ್ಯಾಗೆ ಬಾಲಿವುಡ್ ಹಾಗೂ ಕ್ರಿಕೆಟ್ ಶೋಗಳಿಗೆ ಹಲವು ಆಫರ್‌ಗಳು ಬರುತ್ತಿವೆ. ಅವರು ಐಪಿಎಲ್ 2022 ರ ಆ್ಯಂಕರ್‌ಗಳ ಪಟ್ಟಿಯ ಭಾಗವಾಗಿದ್ದಾರೆ.
ಮಾಯಾಂತಿ ಲಾಂಗರ್:
ಮಾಯಾಂತಿ ಲಾಂಗರ್:
ಐಪಿಎಲ್ 2022 ಟೂರ್ನಿಯಲ್ಲಿ ಖ್ಯಾತ ಮಹಿಳಾ ಆ್ಯಂಕರ್, ಮಯಾಂತಿ ಲ್ಯಾಂಗರ್ ಆ್ಯಂಕರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಹೋಸ್ಟ್ ಮಾಡುವ ಪ್ರಮುಖ ಮಹಿಳಾ ಆ್ಯಂಕರ್ ಗಳಲ್ಲಿ ಮಾಯಾಂತಿ ಒಬ್ಬರು. ಅವರು ಭಾರತೀಯ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ.
ನೆರೋಲಿ ಮೆಡೋಸ್:
ನೆರೋಲಿ ಮೆಡೋಸ್:
ಆಸ್ಟ್ರೇಲಿಯಾ ಸ್ಪೋರ್ಟ್ಸ್‌ಕಾಸ್ಟರ್ ಮತ್ತು ಆಂಕರ್ ನೆರೋಲಿ ಮೀಡೋಡ್ ಕೂಡ ಐಪಿಎಲ್ 2022 ರ ಸಮಯದಲ್ಲಿ ಆಂಕರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ನೆರೋಲಿ ಮೆಡೋಸ್ ಅನೇಕ ಕ್ರಿಕೆಟ್ ಶೋಗಳನ್ನು ಆಯೋಜಿಸುತ್ತಿದ್ದಾರೆ. ಅವರು ಫುಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ಪ್ರದರ್ಶನಗಳನ್ನು ಆಂಕರ್ ಮಾಡುವ ಅನುಭವವನ್ನೂ ಹೊಂದಿದ್ದಾರೆ. ಮೆಡೋಸ್ ಆಸ್ಟ್ರೇಲಿಯಾದ ಪತ್ರಕರ್ತೆ ಮತ್ತು ನಿರೂಪಕಿ. ಈ ಹಿಂದೆ, ಅವರು ಐಪಿಎಲ್ 2021 ರ ಸಂದರ್ಭದಲ್ಲಿಯೂ ಆ್ಯಂಕರ್ ಮಾಡಿದ್ದರು.
ನಶ್ಪ್ರೀತ್ ಕೌರ್:
ನಶ್ಪ್ರೀತ್ ಕೌರ್:
ನಶ್ಪ್ರೀತ್ ಕೌರ್ ಭಾರತೀಯ ಕ್ರೀಡಾ ಆಂಕರ್ ಆದರೆ ಹುಟ್ಟಿ ಬೆಳೆದದ್ದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ. ಹಲವು ಕ್ರಿಕೆಟ್ ಶೋಗಳನ್ನು ಮಾಡಿದ ಅನುಭವ ಅವರಿಗಿದೆ. ಅವರು ಐಪಿಎಲ್ 2020 ರ ಋತುವಿನಲ್ಲಿ ಪ್ರಚಾರಕ್ಕೆ ಬಂದರು, ಇದರಲ್ಲಿ ಅವರು ಪೋಸ್ಟ್ ಮತ್ತು ಮಿಡ್-ಶೋ ಅನ್ನು ಆಂಕರ್ ಮಾಡುತ್ತಿದ್ದರು. ಯುಎಇಯಲ್ಲಿ ನಡೆದ ಐಪಿಎಲ್‌ನಲ್ಲಿ ಅವರು ಹೆಚ್ಚು ಪ್ರಶಂಸೆಗೆ ಒಳಗಾಗಿದ್ದರು.