IPL 2022: ಸಂಭಾವ್ಯ ವೇಳಾಪಟ್ಟಿ ಪ್ರಕಟ, ಚೆನ್ನೈನಲ್ಲಿ ಮೊದಲ ಪಂದ್ಯ..?

First Published | Nov 25, 2021, 11:29 AM IST

ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ಬಿಸಿಸಿಐ (BCCI) ಈಗಿನಿಂದಲೇ ಸಿದ್ದತೆಗಳನ್ನು ಆರಂಭಿಸಿದೆ. ಕೋವಿಡ್ ಭೀತಿಯಿಂದಾಗಿ (COVID 19) 14ನೇ ಆವೃತ್ತಿಯ ದ್ವಿತಿಯಾರ್ಧದ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಇದೀಗ ಭಾರತದಲ್ಲೇ ಮಿಲಿಯನ್ ಡಾಲರ್‌ ಕ್ರಿಕೆಟ್ ಟೂರ್ನಿ ಆಯೋಜಿಸಲಿ ಬಿಸಿಸಿಐ ಚಿಂತನೆ ನಡೆಸಿದೆ. ಇದೀಗ 2022ನೇ ಸಾಲಿನ ಐಪಿಎಲ್‌ (IPL 2022) ಟೂರ್ನಿಯ ಸಂಭಾವ್ಯ ವೇಳಾಪಟ್ಟಿ ಪ್ರಕಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ಗೆ ವೇಳಾಪಟ್ಟಿ ಅಂತಿಮಗೊಂಡಿದ್ದು, 2022ರ ಏಪ್ರಿಲ್‌ 02ರಂದು ಪಂದ್ಯಾವಳಿಗೆ ಚಾಲನೆ ದೊರೆಯಲಿದೆ ಎಂದು ವರದಿಯಾಗಿದೆ.

ಕೆಲ ದಿನಗಳ ಹಿಂದಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಭಾರತದಲ್ಲೇ ನಡೆಯಲಿದೆ ಎಂದು ಖಚಿತಪಡಿಸಿದ್ದರು. 14ನೇ ಆವೃತ್ತಿಯ ಐಪಿಎಲ್‌ನ ಎರಡನೇ ಭಾಗ ಯುಎಇನಲ್ಲಿ ನಡೆದಿತ್ತು.
 

Tap to resize

ಭಾರತದಲ್ಲೇ ಎಲ್ಲಾ ಪಂದ್ಯಗಳನ್ನು ನಡೆಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದ್ದು, ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ನ ತವರಾದ ಚೆನ್ನೈನ ಚೆಪಾಕ್‌ ಅಂಗಳ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 
 

15ನೇ ಆವೃತ್ತಿಯಿಂದ ಮತ್ತೆರಡು ತಂಡಗಳು ಸೇರ್ಪಡೆಗೊಳ್ಳಲಿದ್ದು, ತಂಡಗಳ ಸಂಖ್ಯೆ 8ರಿಂದ 10ಕ್ಕೆ ಏರಿಕೆ ಆಗಲಿದೆ. ಈ ಆವೃತ್ತಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದ್ದು, ಒಟ್ಟು 60 ದಿನ ಪಂದ್ಯಾವಳಿ ನಡೆಯಲಿದೆ. ಜೂನ್‌ ತಿಂಗಳ ಮೊದಲ ವಾರಾಂತ್ಯ ಅಥವಾ ಜೂನ್ 4 ಅಥವಾ 5ರಂದು ಫೈನಲ್‌ ಪಂದ್ಯ ನಡೆಯಲಿದೆ ಎನ್ನಲಾಗಿದೆ.
 

ಪ್ರತಿ ತಂಡವು 14 ಲೀಗ್‌ ಪಂದ್ಯಗಳನ್ನು ಆಡಲಿದ್ದು, ತಲಾ 7 ಪಂದ್ಯಗಳನ್ನು ತವರಿನಲ್ಲಿ ಆಡಲಿವೆ. ಇನ್ನುಳಿದ 7 ಪಂದ್ಯಗಳನ್ನು ಎದುರಾಳಿಗಳ ತವರಲ್ಲಿ ಆಡಲಿವೆ. ಈ ಕುರಿತು ಬಿಸಿಸಿಐ ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ ಎಂದು ಹೇಳಲಾಗಿದೆ.

ದುಬೈನಲ್ಲಿ ನಡೆದ 14ನೇ ಆವೃತ್ತಿಯ ಫೈನಲ್‌ನಲ್ಲಿ ಕೋಲ್ಕತ ನೈಟ್‌ ರೈಡರ್ಸ್ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು.
(photo source- iplt20.com)

15ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನ ಹೊಸ ಎರಡು ತಂಡಗಳು ಸೇರ್ಪಡೆಯಾಗಿರುವುದರಿಂದ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಮೆಗಾ ಹರಾಜು ನಡೆಯಲಿದೆ.

ಮೆಗಾ ಹರಾಜಿಗೂ ಮುನ್ನ ಈಗಿರುವ 8 ತಂಡಗಳಿಗೆ ಗರಿಷ್ಠ 4 ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಹೊಸ ಎರಡು ತಂಡಗಳು ಕೂಡಾ ಮೂರು ಆಟಗಾರರನ್ನು ತನ್ನತ್ತ ಸೆಳೆದುಕೊಳ್ಳಬಹುದು. ಆಟಗಾರರ ರೀಟೈನ್ ಮಾಡಿಕೊಳ್ಳಲು ನವೆಂಬರ್ 30ರ ವರೆಗೆ ಡೆಡ್ ಲೈನ್‌ ನೀಡಲಾಗಿದೆ.

Latest Videos

click me!