IPL 2021 : ಗಂಡನನ್ನು ದುಬೈನಲ್ಲಿ ಬಿಟ್ಟು ಮುಂಬೈಗೆ ಮರಳಿದ ಅನುಷ್ಕಾ!

First Published | Sep 30, 2021, 10:56 AM IST

ಬಾಲಿವುಡ್‌ ನಟಿ  ಅನುಷ್ಕಾ ಶರ್ಮಾ (Anushka Sharma) ಒಂದು ವಾರದ ಹಿಂದೆ ದುಬೈನಿಂದ ಮುಂಬೈಗೆ ಮರಳಿದ್ದಾರೆ. ಪತಿ ಆರ್‌ಸಿಬಿ  (RCB)ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಬಿಟ್ಟು  ಅನುಷ್ಕಾ ಮಗಳ ಜೊತೆ ಭಾರತಕ್ಕೆ ಮರಳಿದ್ದು, ಹಲವು ವಂದತಿಗಳಿಗೆ ಕಾರಣವಾಗಿತ್ತು. ಆದರೆ ವಾಸ್ತವವಾಗಿ, ಅನುಷ್ಕಾ ಶರ್ಮಾ ಮತ್ತೊಮ್ಮೆ ಸೆಟ್‌ಗೆ ಮರಳಿದ್ದಾರೆ ಮತ್ತು ಅವರು ಇತ್ತೀಚೆಗೆ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡರು. ಅನುಷ್ಕಾ ಸ್ವಲ್ಪ ಸಮಯದಿಂದ ಬೆಳ್ಳಿತೆರೆಯಿಂದ ದೂರವಿದ್ದರು. ಆದರೆ ಈಗ ಮಗಳು ವಾಮಿಕಾಗೆ  8 ತಿಂಗಳ ನಂತರ, ಅವರು ಮತ್ತೆ ಸಿನಿಮಾ ಜಗತ್ತಿಗೆ ಮರಳಿದರು ಮತ್ತು ತನ್ನ ಪುಟ್ಟ ಕಂದನನ್ನು ಮನೆಯಲ್ಲಿ ಬಿಟ್ಟು, ಶೂಟಿಂಗ್‌ನಲ್ಲಿ ನಿರತನಾಗಿದ್ದಾರೆ.

ಅನುಷ್ಕಾ ಶರ್ಮಾ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡರು, ಆ ಸಮಯದಲ್ಲಿ ನಟಿ ಕಪ್ಪು ಬಣ್ಣದ ಕ್ರಾಪ್ ಟಾಪ್ ಅನ್ನು ಟೋರ್ನ್‌ ಜೀನ್ಸ್ ಧರಿಸಿದ್ದಾರೆ. ಈ ಫೋಟೋಗಳಲ್ಲಿ  ಆಕೆಯ ಲುಕ್‌ ವಿಭಿನ್ನವಾಗಿ ಕಾಣುತ್ತದೆ.

ವಾಸ್ತವವಾಗಿ, ತನ್ನ ಲಂಡನ್ ಪ್ರವಾಸದ ಸಮಯದಲ್ಲಿ, ಅನುಷ್ಕಾ ಕೂದಲು ಉದುರುವಿಕೆಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಶಾರ್ಟ್‌ ಹೇರ್‌ಕಟ್‌ ಮಾಡಿಸಿಕೊಂಡಿದ್ದಾರೆ. ಅವರ ಈ ಲುಕ್‌ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ.

Tap to resize

2018 ರಲ್ಲಿ ಶಾರೂಖ್ ಖಾನ್ ಮತ್ತು ಕತ್ರಿನಾ ಕೈಫ್ ಎದುರು ಜೀರೋ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಅನುಷ್ಕಾ ತನ್ನ ಪ್ರೆಗ್ನೆಂಸಿಯ ಸಮಯದಲ್ಲಿ ಕೆಲವು ಜಾಹೀರಾತು ಚಿತ್ರೀಕರಣಗಳನ್ನು ಮಾಡಿದರೂ, ಬಹಳ ಸಮಯದಿಂದ ಸಿನಿಮಾದಿಂದ ದೂರವಾಗಿದ್ದಾರೆ. ಅವರ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಅನೇಕ ದೊಡ್ಡ ಹಿಟ್ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು (Web Series) ನಿರ್ಮಾಣ ಮಾಡಲಾಗಿದೆ. 

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ವರ್ಷದ ಜನವರಿಯಲ್ಲಿ ವಾಮಿಕಾಗೆ ಪೋಷಕರಾದರು. ದಂಪತಿಗಳು ತಮ್ಮ ಮಗಳ ಆರು ತಿಂಗಳ ಹುಟ್ಟುಹಬ್ಬವನ್ನು ಯುಕೆಯಲ್ಲಿ ಆಚರಿಸಿದರು. ಈ ಸಮಯದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಕ್ಕತ್‌ ವೈರಲ್‌ ಆಗಿದ್ದವು. 

ಅನುಷ್ಕಾ (Anushka Sharma) ಮತ್ತು ವಿರಾಟ್ (Virat Kohli) ತಮ್ಮ ಮಗಳನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಡಲು ನಿರ್ಧರಿಸಿದ್ದಾರೆ. ಹಲbg ಸಂದರ್ಭಗಳಲ್ಲಿ ಈ ಕಪಲ್‌ (Couple) ಮಗಳ ಫೋಟೋವನ್ನು ಪೋಸ್ಟ್‌ ಮಾಡಿದ್ದರೂ, ಅದರಲ್ಲಿ ಮಗಳು ವಾಮಿಕಾಳ ಮುಖ ಕಾಣದ ರೀತಿಯಲ್ಲಿ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ. 

ರಾಟ್ ಕೊಹ್ಲಿಯ ಬಗ್ಗೆ ಹೇಳುವುದಾದರೆ, ಅವರು ಪ್ರಸ್ತುತ ತಮ್ಮ ತಂಡದೊಂದಿಗೆ ಯುಎಇ (UAE)ಯಲ್ಲಿದ್ದಾರೆ. ಭಾನುವಾರ, ಅವರ ತಂಡವು ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಸೋಲಿಸಿ ಪಾಯಿಂಟ್‌ಗಳ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಸೆ.29ರಂದು ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ ರಾಯಲ್ಸ್ (ಈ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿ, ಗೆಲವು ಸಾಧಿಸಿದೆ. 

Latest Videos

click me!