ಅವಳಿ ಮಕ್ಕಳಿಗೆ ಜನ್ಮ ನೀಡಿದ ದೀಪಿಕಾ, ಡಬಲ್ ಸಂಭ್ರಮದಲ್ಲಿ ದಿನೇಶ್ ಕಾರ್ತಿಕ್!

Published : Oct 28, 2021, 10:05 PM IST

ಅವಳಿ ಗಂಡು ಮಕ್ಕಳ ಪೋಷಕರಾದ ದಿನೇಶ್ ಕಾರ್ತಿಕ್, ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡ ದಿನೇಶ್ ಕಾರ್ತಿಕ್ ಮೂವರಿದ್ದ ನಾವು ಇದೀಗ ಐವರಾಗಿದ್ದೇವೆ ಎಂದು ಕಾರ್ತಿಕ್  

PREV
16
ಅವಳಿ ಮಕ್ಕಳಿಗೆ ಜನ್ಮ ನೀಡಿದ ದೀಪಿಕಾ, ಡಬಲ್ ಸಂಭ್ರಮದಲ್ಲಿ ದಿನೇಶ್ ಕಾರ್ತಿಕ್!

ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್‌ಗೆ ಡಬಲ್ ಸಂಭ್ರಮ. ಪತ್ನಿ ದೀಪಿಕಾ ಪಲ್ಲಿಕಲ್ ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಕಾರ್ತಿಕ್ ಇಬ್ಬರು ಮುದ್ದಿನ ಮಕ್ಕಳ ತಂದೆಯಾಗಿದ್ದಾರೆ. ಈ ಸಂತಸವನ್ನು ದಿನೇಶ್ ಕಾರ್ತಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

26

ಮೂವರು ಇದೀಗ ಐವರಾಗಿದ್ದೇವೆ ಎಂದು ದಿನೇಶ್ ಕಾರ್ತಿಕ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಇದುವರೆಗೆ ದಿನೇಶ್ ಕಾರ್ತಿಕ್, ದೀಪಿಕಾ ಪಲ್ಲಿಕಲ್ ಮುದ್ದಾಯ ನಾಯಿ ಮರಿಯೊಂದನ್ನು ಸಾಕಿದ್ದಾರೆ. ಹೀಗಾಗಿ ನಾವು ಮೂರು ಮಂದಿ ಇದ್ದವೆ ಇದೀಗ ಐವರಾಗಿದ್ದೇವೆ ಎಂದಿದ್ದಾರೆ.

36

ಮತ್ತೊಂದು ವಿಶೇಷ ಅಂದರೆ ಅವಳಿ ಗಂಡು ಮಕ್ಕಳ ಹೆಸರನ್ನು ದಿನೇಶ್ ಕಾರ್ತಿಕ್ ಬಹಿರಂಗ ಪಡಿಸಿದ್ದಾರೆ. ಕಬಿರ್ ಪಲ್ಲಿಕಲ್ ಕಾರ್ತಿಕ್ ಹಾಗೂ ಝಿಯಾನ್ ಪಲ್ಲಿಕಲ್ ಕಾರ್ತಿಕ್ ಎಂದು ಹೆಸರಿಟ್ಟಿದ್ದಾರೆ. ಪತ್ನಿ ದೀಪಿಕಾ ಪಲ್ಲಿಕಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.

46

ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಪಲ್ಲಿಕಲ್ ಸ್ಕ್ವಾಶ್ ಪಟುವಾಗಿದ್ದಾರೆ. ಅಂತಾರಾಷ್ಟ್ರೀಯ ಸ್ಕ್ವಾಶ್ ಪಟುವಾಗಿರುವ ದೀಪಿಕಾ, ಭಾರತವನ್ನು ಪ್ರತನಿಧಿಸಿದ್ದಾರೆ. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 2015ರಲ್ಲಿ ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

56

ದೀಪಿಕಾ ಪಲ್ಲಿಕಲ್ ಸ್ಕ್ವಾಶ್ ಕ್ರೀಡೆಯಲ್ಲಿ ಬ್ಯುಸಿಯಾಗಿದ್ದರೆ, ಇತ್ತ ದಿನೇಶ್ ಕಾರ್ತಿಕ್ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಇವರಿಬ್ಬರು ತಮ್ಮ ತಮ್ಮ ಕ್ರೀಡಗಳಲ್ಲಿ ಸಾಧನೆಯ ಹಾದಿಯಲ್ಲಿದ್ದರು.  ಆದರೆ ಇತ್ತೀಚೆಗೆ ಪಲ್ಲಿಕಲ್ ಸ್ಕ್ವಾಶ್ ಕ್ರೀಡೆಗೆ ವಿರಾಮ ಹೇಳಿ ಕುಟುಂಬದ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದರು. 

66

ದಿನೇಶ್ ಕಾರ್ತಿಕ್‌ಗೆ ಮೊದಲ ಮದುವೆಯಿಂದ ವಿಚ್ಚೇದನ ಪಡೆದ ಬಳಿಕ ದೀಪಿಕಾ ಪಲ್ಲಿಕಲ್ ವಿವಾಹವಾಗಿದ್ದಾರೆ. ಮೊದಲ ಮದುವೆಯಿಂದ ನೊಂದಿದ್ದ ಕಾರ್ತಿಕ್ ಕುಟುಂಬ ಜೀವನದಿಂದ ದೂರ ಉಳಿದಿದ್ದರು. ಜಿಮ್ ಅಭ್ಯಾಸದ ವೇಳೆ ಆತ್ಮೀಯರಾಗಿದ್ದ ಪಲ್ಲಿಕಲ್ ಜೊತೆಗಿನ ಸ್ನೇಹ ಪ್ರೀತಿಯಾಗಿ, ಪ್ರೀತಿ ಮದುವೆ ಅರ್ಥ ಪಡೆದುಕೊಂಡಿತ್ತು. ಇದೀಗ ಇಬ್ಬರು ಅವಳಿ ಮಕ್ಕಳ ಪೋಷಕರಾಗಿದ್ದಾರೆ.
 

Read more Photos on
click me!

Recommended Stories