IPL Auction:ಹಳೆ ತಂಡಕ್ಕೆ ನಾಲ್ವರ ರಿಟೈನ್, ಹೊಸ ತಂಡಕ್ಕೆ ಆರಂಭಿಕ 3 ಖರೀದಿ, ಹರಾಜಿನ ರೂಲ್ಸ್!

First Published Oct 28, 2021, 8:29 PM IST
  • ಐಪಿಎಲ್ ಹರಾಜಿಗೆ ಬಿಸಿಸಿ ತಯಾರಿ ಆರಂಭ
  • 15ನೇ ಆವೃತ್ತಿಗೆ ತಂಡದ ಆಟಗಾರರು ಅದಲು ಬದಲು
  • 10 ತಂಡಗಳಿಗೆ ನಡೆಯಲಿದೆ ಆಟಗಾರರ ಹರಾಜು

ಟಿ20 ವಿಶ್ವಕಪ್ ಟೂರ್ನಿ ನಡುವೆ ಬಿಸಿಸಿಐ ಮುಂಬರುವ ಐಪಿಎಲ್ ಟೂರ್ನಿಗೆ ತಯಾರಿ ನಡೆಸುತ್ತಿದೆ. ಈಗಾಗಲೇ ಹೊಸ ತಂಡಗಳನ್ನು ಬಿಸಿಸಿಐ ಸೇರಿಸಿಕೊಂಡಿದೆ. ಇದೀಗ 15ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಆಟಗಾರರ ಹರಾಜು ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ತಯಾರಿ ಮಾಡಿಕೊಳ್ಳುತ್ತಿದೆ. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿಗೆ ಕೆಲ ನಿಯಮಗಳು ಪ್ರಕಟಗೊಂಡಿದೆ.

ಸಂಜೀವ್ ಗೊಯೆಂಕಾ ಹಾಗೂ ಸಿವಿಸಿ ಕ್ಯಾಪಿಟಲ್ 12,715 ಕೋಟಿ ರೂಪಾಯಿ ನೀಡಿ ಎರಡು ತಂಡಗಳನ್ನು ಖರೀದಿಸಿದೆ. ಇದೀಗ ಹೊಸ 2 ತಂಡಗಳಾದ ಲಕ್ನೋ , ಅಹಮ್ಮಾದಾಬ್ ಹಾಗೂ ಹಳೆಯ 8 ತಂಡಗಳಿಗೆ ಮೆಘಾ ಹರಾಜು ನಡೆಯಲಿದೆ. ಈ ಬಾರಿಯ ಹರಾಜಿನಲ್ಲಿ ಆಟಗಾರರು ಅದಲು ಬದಲಾಗಲಿದ್ದಾರೆ. ಆದರೆ ಹಳೇ ತಂಡಕ್ಕೆ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಹೊಸ ತಂಡಕ್ಕೆ ಹರಾಜಿನ ಆರಂಭದಲ್ಲಿ ಮೂವರು ಆಟಗಾರರು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಮೂಲಕ ಹರಾಜು ಕಣದಲ್ಲಿರುವ ಮೂವರು ಆಟಗಾರರನ್ನು ಲಕ್ನೋ ಹಾಗೂ ಅಹಮ್ಮದಾಬಾದ್ ತಂಡಗಳು ಖರೀದಿ ಮಾಡಬಹುದು. ಈ ಮೂಲಕ ಹಳೆ ತಂಡಗಳಿಗೆ ಸಮನಾಗಿ ಬಲಿಷ್ಠ ತಂಡ ಕಟ್ಟಲು ಅವಕಾಶ ನೀಡಲಾಗಿದೆ.

ಹಳೇ ತಂಡಗಳು ಕೇವಲ ನಾಲ್ವರು ಆಟಗಾರರನ್ನು ಮಾತ್ರ ರಿಟೈನ್ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಇಷ್ಟು ವರ್ಷ ಕೋರ್ ಆಟಗಾರರನ್ನು ಹೊಂದಿದೆ ಮುಂಬೈ ಇಂಡಿಯನ್ಸ್ ಸೇರಿದಂತೆ ಪ್ರಮುಖ ತಂಡಗಳು ಆಟಾಗಾರರು ಬದಲಾಗಲಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಇನ್ನು ಹಾರ್ದಿಕ್ ಪಾಂಡ್ಯರನ್ನು ಉಳಿಸಿಕೊಳ್ಳುವುದಾಗಿ ಹೇಳಿದೆ. ಹೀಗಾಗಿ ಮತ್ತೊರ್ವ ಆಟಗಾರ ಯಾರು ಅನ್ನೋದು ಕುತೂಹಲ ಶುರುವಾಗಿದೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಿರ್ಲಕ್ಷ್ಯಕ್ಕೊಳಗಾಗಿರುವ ಡೇವಿಡ್ ವಾರ್ನರ್ ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಹೈದರಾಬಾದ್ ತಂಡ ತನ್ನ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ. ಹೀಗಾಗಿ ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. 

ಘಟಾನುಘಟಿ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಈ ಬಾರಿಯ ಮೆಘಾ ಹರಾಜು ತೀವ್ರ ಕುತೂಹಲ ಕೆರಳಿಸಿದೆ. ಬಿಸಿಸಿಐ ಹಾಗೂ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಶೀಘ್ರದಲ್ಲೇ ಐಪಿಎಲ್ ಹರಾಜಿನ ದಿನಾಂಕ ಬಹಿರಂಗಗೊಳಿಸಲಿದೆ. ಡಿಸೆಂಬರ್ ತಿಂಗಳಲ್ಲಿ ಮೆಘಾ ಹರಾಜು ನಡೆಯುವ ಸಾಧ್ಯತೆ ಇದೆ.

click me!