ಟಿ20 ಕ್ರಿಕೆಟ್: ನೂರಕ್ಕೂ ಹೆಚ್ಚು ರನ್‌ ಸಿಡಿಸಿದ ಓಪನರ್ಸ್‌ ರೋಹಿತ್‌ ಶರ್ಮಾ, ಕೊಹ್ಲಿ ಮಾತ್ರವಲ್ಲ!

Published : Dec 01, 2023, 05:09 PM IST

ವಿಶ್ವಕಪ್‌ 2023 ಪಂದ್ಯಾವಳಿ ನಂತರ ಭಾರತ ತಂಡವು ಈಗ ಆಸ್ಟ್ರೇಲಿಯಾದ ವಿರುದ್ದ ಟಿ20 ಪಂದ್ಯಾವಳಿಯಲ್ಲಿ ನಿರತವಾಗಿದೆ. ಈ ಸಮಯದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಆರಂಭಿಕ ಆಟಗಾರರು ನೂರಕ್ಕಿಂತ ಹೆಚ್ಚು ರನ್‌ ಸಿಡಿಸಿದಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

PREV
15
ಟಿ20 ಕ್ರಿಕೆಟ್: ನೂರಕ್ಕೂ ಹೆಚ್ಚು ರನ್‌ ಸಿಡಿಸಿದ ಓಪನರ್ಸ್‌ ರೋಹಿತ್‌ ಶರ್ಮಾ, ಕೊಹ್ಲಿ ಮಾತ್ರವಲ್ಲ!

ವಿರಾಟ್ ಕೊಹ್ಲಿ:
ಸೆಪ್ಟೆಂಬರ್ 8 ರಂದು ದುಬೈನಲ್ಲಿ ಅಫ್ಘಾನಿಸ್ತಾನ ವಿರುದ್ಧ 2022 ರಲ್ಲಿ ಭಾರತದ ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 122 ರನ್ ಗಳಿಸಿದರು.
 

25

ರೋಹಿತ್ ಶರ್ಮಾ:
ಅಂತಾರಾಷ್ಟ್ರೀಯ ಟಿ20ಯಲ್ಲಿ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ.  2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 106, 2017 ರಲ್ಲಿ ಶ್ರೀಲಂಕಾ ವಿರುದ್ಧ 118 ರನ್ ಹಾಗೂ 2018 ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 100 ಮತ್ತು ವೆಸ್ಟ್ ಇಂಡೀಸ್ ವಿರುದ್ಧ 111.

35

ಶುಭಮನ್ ಗಿಲ್:
ಫೆಬ್ರವರಿ 11, 2023 ರಂದು ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶುಭ್‌ಮನ್ ಗಿಲ್ 63 ಎಸೆತಗಳಲ್ಲಿ 126 ರನ್ ಗಳಿಸಿದರು.
 

45

ರುತುರಾಜ್ ಗಾಯಕ್ವಾಡ್:
ನವೆಂಬರ್ 28, 2023 ರಂದು ಗುವಾಹಟಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ರುತುರಾಜ್ ಗಕ್ವಾಡ್ 57 ಎಸೆತಗಳಲ್ಲಿ 123 ರನ್ ಗಳಿಸಿದರು.

55

ಯಶಸ್ವಿ ಜೈಸ್ವಾಲ್:
ಆಕ್ಟೋಬರ್ 3 ರಂದು ಏಷ್ಯನ್ ಗೇಮ್ಸ್ ಪಂದ್ಯದಲ್ಲಿ ನೇಪಾಳ ವಿರುದ್ಧ ಯಶಸ್ವಿ ಜಯಸ್ವಾಲ್ ನೂರು ರನ್ ಗಳಿಸಿದರು

Read more Photos on
click me!

Recommended Stories