IND vs ZIM: ಈ 5 ಕಾರಣಕ್ಕಾದರೂ ನೀವು ಭಾರತ-ಜಿಂಬಾಬ್ವೆ ಟಿ20 ಮ್ಯಾಚ್ ಮಿಸ್‌ ಮಾಡದೇ ನೋಡಲೇಬೇಕು!

Published : Jul 23, 2026, 12:13 PM IST

ಹರಾರೆ: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭವಾಗಲಿದೆ. ಈ ಸರಣಿ ಹಲವು ಕಾರಣಗಳಿಗೆ ವಿಶೇಷತೆ ಎನಿಸಿಕೊಂಡಿದೆ. ಈ ಪೈಕಿ ಈ ಐದು ಕಾರಣಗಳಿಗೋಸ್ಕರವಾದರೂ ಕ್ರಿಕೆಟ್‌ ಅಭಿಮಾನಿಗಳು ಈ ಸರಣಿಯನ್ನು ನೋಡಲೇಬೇಕು.

PREV
16
ಇಂದು ಭಾರತ-ಜಿಂಬಾಬ್ವೆ ಮೊದಲ ಟಿ20 ಕದನ

ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೊದಲ ಟಿ20 ಪಂದ್ಯವು ಇಂದು ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ಆರಂಭವಾಗಲಿದೆ. ಭಾರತೀಯ ಕಾಲಮಾನ ಇಂದು ಸಂಜೆ 4.30ರಿಂದ ಮೊದಲ ಟಿ20 ಪಂದ್ಯಕ್ಕೆ ಚಾಲನೆ ಸಿಗಲಿದೆ. ಯುನೈಟ್8, ಡಿಡಿ ಸ್ಪೋರ್ಟ್ಸ್‌ ಹಾಗೂ ಓಟಿಟಿಯಲ್ಲಿ ಫ್ಯಾನ್‌ ಕೋಡ್‌ ಅಪ್ಲಿಕೇಷನ್ ಮೂಲಕ ಮ್ಯಾಚ್ ವೀಕ್ಷಿಸಬಹುದಾಗಿದೆ. ಈ ಮ್ಯಾಚ್ ಯಾಕೆ ವೀಕ್ಷಿಸಬೇಕು ಗೊತ್ತಾ?

26
1. ಅಂ.ರಾ. ಕ್ರಿಕೆಟ್‌ನಲ್ಲಿ ನೆಲೆಯೂರಲು ಯುವ ತಾರೆ ವೈಭವ್‌ ಸೂರ್ಯವಂಶಿಗೆ ಉತ್ತಮ ವೇದಿಕೆ

15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರಾದರೂ, ದೊಡ್ಡ ಇನ್ನಿಂಗ್ಸ್‌ ಕಟ್ಟಲು ವಿಫಲವಾಗಿದ್ದರು. ಇದೀಗ ಜಿಂಬಾಬ್ವೆ ಎದುರು ದೊಡ್ಡ ಇನ್ನಿಂಗ್ಸ್ ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭದ್ರವಾಗಿ ನೆಲೆಯೂರಲು ವೈಭವ್ ಸೂರ್ಯವಂಶಿಗೆ ಇದು ಸುವರ್ಣಾವಕಾಶವಾಗಿದೆ.

36
2. ನಾಯಕನಾಗಿ ಮೊದಲ ಜಯ ಸಾಧಿಸಲು ಶ್ರೇಯಸ್‌ಗೆ ಅವಕಾಶ

ಟಿ20 ವಿಶ್ವಕಪ್ ಗೆದ್ದುಕೊಟ್ಟ ಸೂರ್ಯಕುಮಾರ್ ಯಾದವ್ ಅವರನ್ನು ಕೆಳಗಿಳಿಸಿ ಶ್ರೇಯಸ್ ಅಯ್ಯರ್‌ಗೆ ಇದೀಗ ಭಾರತ ಟಿ20 ತಂಡದ ನಾಯಕ ಪಟ್ಟಕಟ್ಟಲಾಗಿದೆ. ಆದರೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ಈವರೆಗೆ ಆಡಿರುವ 7 ಪಂದ್ಯದಲ್ಲಿ 6ರಲ್ಲಿ ಸೋಲು, 1 ಪಂದ್ಯ ರದ್ದಾಗಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ನಾಯಕನಾಗಿ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದ್ದಾರೆ.

46
3. ಮಧ್ಯಮ ಓವರ್‌ಗಳಲ್ಲಿ ಸ್ಟ್ರೈಕ್‌ರೇಟ್‌ ಹೆಚ್ಚಿಸುವತ್ತ ಗಮನ ಹರಿಸಲಿರುವ ತಿಲಕ್‌ ವರ್ಮಾ.

ಭಾರತ ಟಿ20 ತಂಡದ ಉಪನಾಯಕ ತಿಲಕ್ ವರ್ಮಾ ಮಧ್ಯಮ ಕ್ರಮಾಂಕದಲ್ಲಿ ಮಂದಗತಿಯ ಬ್ಯಾಟಿಂಗ್ ನಡೆಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಹೀಗಾಗಿ ತಿಲಕ್ ವರ್ಮಾ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಲಯಕ್ಕೆ ಮರಳಲು ಈ ಸರಣಿಯನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.

56
4. ರಿಂಕುಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಗೋಲ್ಡನ್ ಚಾನ್ಸ್:

2026ರ ಟಿ20 ವಿಶ್ವಕಪ್‌ ಬಳಿಕ ತಂಡದಿಂದ ಹೊರಬಿದ್ದಿರುವ ರಿಂಕು ಸಿಂಗ್‌ಗೆ ಮತ್ತೆ ಕಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ಜಿಂಬಾಬ್ವೆ ಎದುರಿನ ಸರಣಿ ಸುವರ್ಣಾವಕಾಶವಾಗಿದೆ. ಈ ಸರಣಿಯಲ್ಲಿ ರಿಂಕು ಸಿಂಗ್ ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೇ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ. ಇಲ್ಲದಿದ್ದರೇ ಕಮ್‌ಬ್ಯಾಕ್‌ ಮಾಡೋದು ಕಷ್ಟ ಸಾಧ್ಯ.

66
5. ಯುವ ವೇಗಿಗಳಾದ ಅಶೋಕ್‌ ಶರ್ಮಾ, ಮಯಾಂಕ್‌ ಯಾದವ್‌ ಮೇಲೆ ನಿರೀಕ್ಷೆ:

ಜಿಂಬಾಬ್ವೆ ಎದುರಿನ ಟಿ20 ಸರಣಿಯಲ್ಲಿ ಯುವ ವೇಗಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿದ್ದ್ ಕೃಷ್ಣ ಅನುಪಸ್ಥಿತಿಯಲ್ಲಿ ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್ ಅವರಂತಹ ಯುವ ವೇಗಿಗಳು ಯಾವ ರೀತಿ ಪ್ರದರ್ಶನ ನೀಡಲಿದ್ದರೆ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories