ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಿದ್ದತೆ ಜೋರಾಗಿದೆ. ಹೀಗಿರುವಾಗಲೇ ಮಿನಿ ಹರಾಜಿಗೂ ಮುನ್ನ ತಮಗೆ ಬೇಕಾದ ಆಟಗಾರರನ್ನು ಎಲ್ಲಾ 10 ಫ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿವೆ. ಇದೆಲ್ಲದರ ನಡುವೆ ಈ ಐದು ಆಟಗಾರರ ಮೇಲೆ ಹಣದ ಮಳೆ ಸುರಿಸಲು ಫ್ರಾಂಚೈಸಿಗಳು ರೆಡಿಯಾಗಿವೆ.
ಐಪಿಎಲ್ ಮಿನಿ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ಕೆಲವು ಪ್ರಮುಖ ಸ್ಟಾರ್ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿವೆ. ಹೀಗಾಗಿ ಈ ಬಾರಿಯ ಐಪಿಎಲ್ ಮಿನಿ ಹರಾಜು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
29
ಕಳೆದ ಆವೃತ್ತಿಯಲ್ಲಿ ಕೆಕೆಆರ್-ಸಿಎಸ್‌ಕೆ ನೀರಸ ಪ್ರದರ್ಶನ
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ಪ್ರದರ್ಶನ ಸಾಧಾರಣವಾಗಿತ್ತು. ಹೀಗಾಗಿ ಈ ಎರಡು ತಂಡಗಳು ಪ್ರಮುಖ ಆಟಗಾರರನ್ನು ರಿಲೀಸ್ ಮಾಡಿ ದೊಡ್ಡ ಮೊತ್ತದೊಂದಿಗೆ ಹರಾಜಿನಲ್ಲಿ ಕಣಕ್ಕಿಳಿಯಲು ರೆಡಿಯಾಗಿವೆ.
39
ಕೆಕೆಆರ್-ಚೆನ್ನೈ ಬಳಿಯಿದೆ ದೊಡ್ಡ ಮೊತ್ತ
ಸದ್ಯ ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಬಳಿ ಹರಾಜಿಗೆ ಪರ್ಸ್‌ನಲ್ಲಿ ಅತಿಹೆಚ್ಚು ಅಂದರೆ 64.30 ಕೋಟಿ ರುಪಾಯಿ ಹಣವಿದ್ದರೇ, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಬಳಿ ಎರಡನೇ ಅತಿಹೆಚ್ಚು 43.40 ಕೋಟಿ ರುಪಾಯಿ ಹಣವಿದೆ.
ಇಷ್ಟುದೊಡ್ಡ ಮೊತ್ತದ ಹಣವನ್ನು ಇಟ್ಟುಕೊಂಡು ಹರಾಜಿಗೆ ಇಳಿಯಲು ರೆಡಿಯಾಗಿರುವ ಈ ಎರಡು ಫ್ರಾಂಚೈಸಿಗಳು ಈ ಕೆಳಗಿನ ಐದು ಆಟಗಾರರ ಮೇಲೆ ಹಣದ ಮಳೆ ಸುರಿಸುವ ಸಾಧ್ಯತೆಯಿದೆ.
59
1. ಆಂಡ್ರೆ ರಸೆಲ್:
11 ವರ್ಷಗಳ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಂಡ್ರೆ ರಸೆಲ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ. ಸ್ಪೋಟಕ ಬ್ಯಾಟಿಂಗ್ ಹಾಗೂ ಆಕ್ರಮಣಕಾರಿ ಬೌಲಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿರುವ ರಸೆಲ್‌ಗೆ ಸಿಎಸ್‌ಕೆ ಫ್ರಾಂಚೈಸಿ ದೊಡ್ಡ ಮೊತ್ತದ ಬಿಡ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
69
2. ಗ್ಲೆನ್ ಮ್ಯಾಕ್ಸ್‌ವೆಲ್:
ಆಸ್ಟ್ರೇಲಿಯಾ ಮೂಲದ ಅನುಭವಿ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಪಂಜಾಬ್ ಕಿಂಗ್ಸ್ ರಿಲೀಸ್ ಮಾಡಿದೆ. ಮ್ಯಾಕ್ಸಿ ಮೇಲೆ ಚೆನ್ನೈ, ಡೆಲ್ಲಿ ಸೇರಿದಂತೆ ಪ್ರಮುಖ ತಂಡಗಳು ಕಣ್ಣಿಟ್ಟಿದ್ದು ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.
79
3. ಕ್ವಿಂಟನ್ ಡಿ ಕಾಕ್
ದಕ್ಷಿಣ ಆಫ್ರಿಕಾ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್, ವಿಸ್ಪೋಟಕ ಆರಂಭಿಕ ಬ್ಯಾಟರ್ ಆಗಿದ್ದು, ತಂಡಕ್ಕೆ ಸಿಡಿಲಬ್ಬರದ ಆರಂಭ ಒದಗಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಡಿ ಕಾಕ್ ಎಕ್ಸ್ ಫ್ಯಾಕ್ಟರ್ ಎನಿಸಿಕೊಳ್ಳಬಲ್ಲ ಆಟಗಾರನಾಗಿದ್ದು, ಯಾವುದೇ ತಂಡಕ್ಕೆ ಆಸ್ತಿಯಾಗಬಲ್ಲರು. ಡಿ ಕಾಕ್ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.
89
4. ರಚಿನ್ ರವೀಂದ್ರ
ಕಿವೀಸ್ ಮೂಲದ ಸ್ಟಾರ್ ಆಲ್ರೌಂಡರ್ ರಚಿನ್ ರವೀಂದ್ರ ಅವರನ್ನು ಸಿಎಸ್‌ಕೆ ಫ್ರಾಂಚೈಸಿಯು ರಿಲೀಸ್ ಮಾಡಿದೆ. ರಚಿನ್ ಅಗ್ರಕ್ರಮಾಂಕದ ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲೂ ಆಸರೆಯಾಗಬಲ್ಲ ಆಟಗಾರನಾಗಿದ್ದು, ರಚಿನ್ ಖರೀದಿಸಲು ಫ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
99
5. ಜೋಶ್ ಇಂಗ್ಲಿಶ್:
ಆಸ್ಟ್ರೇಲಿಯಾ ಮೂಲದ ಸ್ಪೋಟಕ ಬ್ಯಾಟರ್ ಜೋಶ್ ಇಂಗ್ಲಿಶ್ ಅವರನ್ನು ಪಂಜಾಬ್ ಕಿಂಗ್ಸ್ ರಿಲೀಸ್ ಮಾಡಿದೆ. ತಮ್ಮ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಬಲ್ಲ ಬ್ಯಾಟರ್ ಜೋಶ್ ಇಂಗ್ಲಿಶ್ ಈ ಬಾರಿಯ ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತ ಗಳಿಸುವ ಸಾಧ್ಯತೆಯಿದೆ.