ಇಂಡೋ-ಆಫ್ರಿಕಾ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ, ಬೆಂಗಳೂರು ಕೊನೆಯ ಪಂದ್ಯಕ್ಕೆ ಆತಿಥ್ಯ

First Published Apr 24, 2022, 6:23 PM IST

ಮುಂಬೈ(ಏ.24): ಮುಂಬರುವ ಜೂನ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಭಾರತ ಎದುರಿನ 5 ಪಂದ್ಯಗಳ ಟಿ20 ಸರಣಿಯು ಜೂನ್ 09ರಿಂದ ಆರಂಭವಾಗಲಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸೇರಿದಂತೆ 5 ಸ್ಥಳಗಳಲ್ಲಿ 5 ಪಂದ್ಯಗಳು ನಡೆಯಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 
 

ಭಾರತದಲ್ಲಿ ಸದ್ಯ ಟಿ20 ಕ್ರಿಕೆಟ್ ಜ್ವರ ಜೋರಾಗಿದ್ದು, 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರದಿಂದ ಸಾಗುತ್ತಿದೆ. ಐಪಿಎಲ್‌ನಲ್ಲಿ ಈಗಾಗಲೇ 36 ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಫೈನಲ್ ಪಂದ್ಯವು ಮೇ 29ರಂದು ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.
 

ಐಪಿಎಲ್ ಫೈನಲ್ ಮುಗಿದು 10 ದಿನ ಕಳೆಯುವಷ್ಟರಲ್ಲಿ ಭಾರತ ಕ್ರಿಕೆಟ್ ತಂಡವು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಪೈಪೋಟಿ 5 ಸ್ಟೇಡಿಯಂಗಳು ಸಾಕ್ಷಿಯಾಗಲಿವೆ.
 

Latest Videos


ತವರಿನಲ್ಲಿ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಇದೀಗ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮೊದಲ ಟಿ20 ಪಂದ್ಯವು ಜೂನ್ 09ರಂದು ನವ ದೆಹಲಿಯಲ್ಲಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು 5ನೇ ಹಾಗೂ ಕೊನೆಯ ಟಿ20 ಪಂದ್ಯವು ಜೂನ್ 19ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ 
 

ಈ ಟಿ20 ಸರಣಿಯು ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವಭಾವಿ ತಯಾರಿ ಎನಿಸಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 2020ರ ಮಾರ್ಚ್‌ನಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. ಆದರೆ ಅದೇ ವೇಳೆ ದೇಶದಲ್ಲಿ ಕೋವಿಡ್ ಸ್ಪೋಟ ಸಂಭವಿಸಿದ್ದರಿಂದಾಗಿ ಹರಿಣಗಳ ಪಡೆ ಭಾರತ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾಗಿತ್ತು. 
 

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ ನೋಡಿ
1st T20I: ಜೂನ್ 9 (ಡೆಲ್ಲಿ)
2nd T20I: ಜೂನ್ 12 (ಕಟಕ್)
3rd T20I: ಜೂನ್ 14 (ವಿಶಾಖಪಟ್ಟಣಂ)
4th T20I: ಜೂನ್ 17 (ರಾಜ್‌ಕೋಟ್)
5th T20I: ಜೂನ್ 19 (ಬೆಂಗಳೂರು)

click me!