ಏಷ್ಯನ್ ಗೇಮ್ಸ್‌ನ ಪುರುಷರ ವಿಭಾಗದ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದು ಟೀಂ ಇಂಡಿಯಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಹೈ-ವೋಲ್ಟೇಜ್ ಪಂದ್ಯದಲ್ಲಿ ಮೈದಾನದಲ್ಲಿ ಒಂದಷ್ಟು ಹೈಡ್ರಾಮಾಗಳು ನಡೆದ್ರೆ, ಮೈದಾನದ ಆಚೆಗೂ ನಡೆಯಿತು. ಏನದು? ಸ್ಟೋರಿ ಓದಿ..
ಏಷ್ಯನ್ ಗೇಮ್ಸ್ 2026ರ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಒಂದು ತಮಾಷೆಯ ಪ್ರಸಂಗ ನಡೆಯಿತು. ಮೈದಾನದಲ್ಲಿ ಸುಲಭದ ಕ್ಯಾಚ್‌ಗಳನ್ನು ಕೈಚೆಲ್ಲಿದ ಪಾಕಿಸ್ತಾನದ ಆಟಗಾರ ಸೈಮ್ ಅಯೂಬ್ (Saim Ayub) ಅವರನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಗ್ಯಾಲರಿಯಿಂದಲೇ ಗೇಲಿ ಮಾಡಿದರು.
25
ಓಯ್ ಬಿರಿಯಾನಿ.. ಇನ್ನೊಂದು ಕ್ಯಾಚ್ ಬಿಡೋ
ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗ್ತಿರುವ ವಿಡಿಯೋದಲ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸೈಮ್ ಅಯೂಬ್ ಅವರನ್ನು ಭಾರತದ ಅಭಿಮಾನಿಗಳು ಟ್ರೋಲ್ ಮಾಡಿದರು. ಒಬ್ಬ ಅಭಿಮಾನಿ 'ಓಯ್... ಬಿರಿಯಾನಿ...' ಎಂದು ಕೂಗಿದರೆ, ಇನ್ನೊಬ್ಬ ಅಭಿಮಾನಿ 'ಅಣ್ಣಾ, ಇನ್ನೊಂದು ಕ್ಯಾಚ್ ಬಿಟ್ಟುಬಿಡು ಪ್ಲೀಸ್!' (ಏಕ್ ಔರ್ ಕ್ಯಾಚ್ ಛೋಡ್ ನಾ) ಎಂದು ತಮಾಷೆ ಮಾಡಿದ್ದಾನೆ. ಅಷ್ಟೇ ಅಲ್ಲದೆ.. ಇಡೀ ಪ್ರೇಕ್ಷಕರ ಗುಂಪು 'ಛೋಡೇಗಾ ಭಾಯ್ ಛೋಡೇಗಾ... ಪಾಕಿಸ್ತಾನ್ ಕ್ಯಾಚ್ ಛೋಡೇಗಾ' (ಬಿಡ್ತಾನೆ ಭಾಯ್ ಬಿಡ್ತಾನೆ... ಪಾಕಿಸ್ತಾನ ಕ್ಯಾಚ್ ಬಿಡ್ತಾನೆ) ಎಂದು ಜೋರಾಗಿ ಕೂಗಿದ್ದಾರೆ.
35
ರೋಹಿತ್ ಶರ್ಮಾ ಡೈಲಾಗ್ ನೆನಪಿಸಿದ ಫ್ಯಾನ್ಸ್
ಅಭಿಮಾನಿಗಳ ತಮಾಷೆ ಅಷ್ಟಕ್ಕೇ ನಿಲ್ಲಲಿಲ್ಲ. ರೋಹಿತ್ ಶರ್ಮಾರ ಪ್ರಸಿದ್ಧ ಡೈಲಾಗ್ 'ಕೋಯಿ ಗಾರ್ಡನ್ ಮೇ ನಹೀ ಘೂಮೇಗಾ' (ಯಾರೂ ತೋಟದಲ್ಲಿ ವಾಕಿಂಗ್ ಮಾಡಿದಂತೆ ಮೈದಾನದಲ್ಲಿ ಅಡ್ಡಾಡಬಾರದು) ಎಂಬ ಮಾತನ್ನು ಕೂಗಿ ಅಯೂಬ್ ಅವರ ಕಳಪೆ ಫೀಲ್ಡಿಂಗ್ ಅಣಕಿಸಿದ್ದಾರೆ.
ಭಾರತೀಯ ಅಭಿಮಾನಿಗಳು ಅಯೂಬ್‌ನನ್ನು ಟ್ರೋಲ್ ಮಾಡಲು ಮುಖ್ಯ ಕಾರಣವೂ ಇತ್ತು. ಅಯೂಬ್ ಬರೋಬ್ಬರಿ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಸುಲಭದ ಕ್ಯಾಚ್‌ಗಳನ್ನು ಡ್ರಾಪ್ ಮಾಡಿದ್ದ.
55
ಲಾಭ ಪಡೆದ ಅಭಿಷೇಕ್ ಶರ್ಮಾ
ಕ್ಯಾಚ್ ಡ್ರಾಪ್‌ನ ಲಾಭ ಪಡೆದ ಅಭಿಷೇಕ್ ಶರ್ಮಾ.. ಕೇವಲ 28 ಎಸೆತಗಳಲ್ಲಿ 61 ರನ್ ಚಚ್ಚಿ ಪಾಕಿಸ್ತಾನದ ಬೌಲರ್‌ಗಳನ್ನು ಬೆಂಡೆತ್ತಿದರು. ಪಾಕ್ ಕಳಪೆ ಫೀಲ್ಡಿಂಗ್ ಮತ್ತು ಭಾರತೀಯ ಅಭಿಮಾನಿಗಳ ತಮಾಷೆಯ ಸ್ಲೆಡ್ಜಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
Indian Fans Sledging Saim Ayub Saying 🤣
- Koi garden me nahi ghumega.... Varna IYKYK 😅 - Oyeeee... Biryani. - Ek aur catch drop kar na. pic.twitter.com/IsYKRlSrM1
— Mukku (@Cric_Mukku) October 3, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.