ಭಾರತ-ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ T20 ಸರಣಿ ಬುಧವಾರ ಕ್ಯಾನ್‌ಬೆರಾದಲ್ಲಿ ಆರಂಭವಾಗಲಿದೆ. ಈ ಪಂದ್ಯ ಯಾವ ಸಮಯಕ್ಕೆ ಶುರುವಾಗುತ್ತೆ? ಎಲ್ಲಿ ಲೈವ್ ಸ್ಟ್ರೀಮಿಂಗ್ ಫ್ರೀಯಾಗಿ ನೋಡಬಹುದು ಅನ್ನೋ ವಿವರ ಇಲ್ಲಿದೆ.
ಭಾರತ-ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ T20 ಸರಣಿ ಆರಂಭವಾಗುತ್ತಿದೆ. ಈ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 29 ರಂದು ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ 1:45ಕ್ಕೆ ಆರಂಭವಾಗಲಿದೆ.
25
ಭಾರತ ತಂಡದಲ್ಲಿ ಬದಲಾವಣೆಗಳು, ಪ್ರಮುಖ ಆಟಗಾರರು
ತಂಡದ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ. ಯುವ ಆಟಗಾರರಾದ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ.
35
ಆಸ್ಟ್ರೇಲಿಯಾ ತಂಡದಲ್ಲಿನ ಸವಾಲುಗಳು
ಆಸ್ಟ್ರೇಲಿಯಾ ತಂಡಕ್ಕೆ ಮಿಚೆಲ್ ಮಾರ್ಷ್ ನಾಯಕರಾಗಿದ್ದಾರೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಇಲ್ಲದಿರುವುದು ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗಿದೆ. ಬ್ಯಾಟಿಂಗ್‌ನಲ್ಲಿ ಟ್ರಾವಿಸ್ ಹೆಡ್, ಟಿಮ್ ಡೇವಿಡ್ ಪ್ರಮುಖರು.
ಭಾರತ vs ಆಸ್ಟ್ರೇಲಿಯಾ T20 ಪಂದ್ಯದ ದಿನಾಂಕ, ಸಮಯ, ಪ್ರಸಾರದ ವಿವರಗಳು
ಮೊದಲ T20 ಪಂದ್ಯ ಅಕ್ಟೋಬರ್ 29 ರಂದು ಮಧ್ಯಾಹ್ನ 1:45ಕ್ಕೆ (IST) ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಜಿಯೋ ಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದಾಗಿದೆ.
55
ಭಾರತ vs ಆಸ್ಟ್ರೇಲಿಯಾ T20 ಸರಣಿಯ ಸಂಪೂರ್ಣ ವೇಳಾಪಟ್ಟಿ
1ನೇ ಪಂದ್ಯ: ಅಕ್ಟೋಬರ್ 29 - ಕ್ಯಾನ್‌ಬೆರಾ 2ನೇ ಪಂದ್ಯ: ಅಕ್ಟೋಬರ್ 31 - ಮೆಲ್ಬೋರ್ನ್ 3ನೇ ಪಂದ್ಯ: ನವೆಂಬರ್ 2 - ಹೋಬಾರ್ಟ್ 4ನೇ ಪಂದ್ಯ: ನವೆಂಬರ್ 6 - ಗೋಲ್ಡ್ ಕೋಸ್ಟ್ 5ನೇ ಪಂದ್ಯ: ನವೆಂಬರ್ 8 - ಬ್ರಿಸ್ಬೇನ್