ಸೂರ್ಯಕುಮಾರ್ ಯಾದವ್ ಭಾರತ ಟಿ20 ನಾಯಕತ್ವದಿಂದ ಔಟ್! ಕ್ಯಾಪ್ಟನ್‌ ರೇಸ್‌ನಲ್ಲಿ ಶ್ರೇಯಸ್ ಅಯ್ಯರ್ ಜತೆ ಮತ್ತೊಬ್ಬ ಎಂಟ್ರಿ, ಪಾಟೀದಾರ್‌ಗಿಲ್ಲ ಸ್ಥಾನ!

Published : Jun 04, 2026, 09:07 AM IST

ಮುಲ್ಲಾನ್‌ಪುರ: 2026ರ ಐಪಿಎಲ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ಹರಿದಿದೆ. ಹೀಗಿರುವಾಗಲೇ ಭಾರತ ಟಿ20 ನಾಯಕತ್ವದ ವಿಚಾರದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಕುರಿತಾದ ಹೊಸ ಅಪ್ಡೇಟ್ಸ್‌ ಇಲ್ಲಿದೆ ನೋಡಿ.

PREV
16
ಸೂರ್ಯಕುಮಾರ್ ಯಾದವ್‌ಗೆ ಬಿಗ್ ಶಾಕ್

ಭಾರತ ಟಿ20 ತಂಡದ ನಾಯಕತ್ವದಿಂದ ಸೂರ್ಯಕುಮಾರ್‌ ಯಾದವ್‌ರನ್ನು ಕೆಳಗಿಸುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳಿಂದಲೇ ತಿಳಿದುಬಂದಿದೆ. ಇದರ ನಡುವೆ ಸೂರ್ಯಕುಮಾರ್ ಯಾದವ್ ನಾಯಕತ್ವದಿಂದ ಕೆಳಗಿಳಿದರೆ, ಭಾರತ ಟಿ20 ತಂಡದ ಮುಂದಿನ ನಾಯಕ ಯಾರು ಎನ್ನುವ ಪ್ರಶ್ನೆ ಕೂಡಾ ಜೋರಾಗಿದೆ.

26
ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಸೂರ್ಯಕುಮಾರ್ ಯಾದವ್

ಕಳೆದ ಒಂದೂವರೆ ವರ್ಷದಿಂದ ಸೂರ್ಯಕುಮಾರ್‌ ಉತ್ತಮವಾಡಿ ಆಡುತ್ತಿಲ್ಲ. ಐಪಿಎಲ್‌ನಲ್ಲೂ ಅವರು ಲಯಕ್ಕೆ ಮರಳಿಲ್ಲ. ರನ್‌ ಬರ ಎದುರಿಸುತ್ತಿರುವ ಕಾರಣ ಮುಂಬರುವ ಟಿ20 ಸರಣಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿಲ್ಲ ಎಂದು ಗೊತ್ತಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳಬಹುದು ಎಂದು ವರದಿಯಾಗಿದೆ. ಸೂರ್ಯಕುಮಾರ್ ಯಾದವ್ 2026ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 13 ಪಂದ್ಯಗಳನ್ನಾಡಿ ಕೇವಲ 270 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

36
ಸತತ ಎರಡು ಐಪಿಎಲ್ ಟ್ರೋಫಿ ಗೆದ್ದ ನಾಯಕನಿಗೆ ನಿರಾಸೆ?

ಒಂದು ವೇಳೆ ಸೂರ್ಯಕುಮಾರ್ ಯಾದವ್ ಭಾರತ ಟಿ20 ನಾಯಕತ್ವದಿಂದ ಹೊರಬಿದ್ದರೇ, ಅವರ ಸ್ಥಾನಕ್ಕೆ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದ ರಜತ್ ಪಾಟೀದಾರ್‌ಗೆ ಭಾರತ ಚುಟುಕು ತಂಡದ ನಾಯಕತ್ವ ಸಿಗಬಹುದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿತ್ತು.

46
ರಜತ್ ಪಾಟೀದಾರ್‌ ಬದಿಗಿಟ್ಟು ಶ್ರೇಯಸ್ ಅಯ್ಯರ್‌ಗೆ ಚಾನ್ಸ್

ಆದರೆ ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ರಜತ್ ಪಾಟೀದಾರ್ ಭಾರತ ಟಿ20 ನಾಯಕತ್ವದ ಬದಿಗಿರಲಿ, ಆಟಗಾರನಾಗಿಯೂ ಸದ್ಯಕ್ಕೆ ತಂಡದೊಳಗೆ ಮಣೆಹಾಕುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ. ಒಂದು ಸೂರ್ಯ ಅವರ ತಲೆದಂಡವಾದರೆ, ಆ ಸ್ಥಾನಕ್ಕೆ ಶ್ರೇಯಸ್‌ ಅಯ್ಯರ್‌ ಹಾಗೂ ತಿಲಕ್‌ ವರ್ಮಾ ನಡುವೆ ಪೈಪೋಟಿಯಿದೆ ಎಂದು ವರದಿಯಾಗಿದೆ.

56
ಜೂನ್ 26ರಿಂದ ಐರ್ಲೆಂಡ್, ಇಂಗ್ಲೆಂಡ್ ಪ್ರವಾಸ ಮಾಡಲಿರುವ ಭಾರತ

ಭಾರತ ತಂಡವು ಜೂನ್ 26ರಿಂದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಭಾರತ ತಂಡದ ನೂತನ ಟಿ20 ನಾಯಕರಾಗಿ ಶ್ರೇಯಸ್ ಅಯ್ಯರ್ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

66
ಶ್ರೇಯಸ್ ಅಯ್ಯರ್ ನಾಯಕ, ತಿಲಕ್ ವರ್ಮಾ ಉಪನಾಯಕ?

ಈಗಾಗಲೇ ಐಪಿಎಲ್‌ನಲ್ಲಿ ನಾಯಕನಾಗಿ ಯಶಸ್ಸು ಗಳಿಸಿರುವ ಮುಂಬೈ ಮೂಲದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಲಿದ್ದು, ಉಪನಾಯಕರಾಗಿ ತಿಲಕ್ ವರ್ಮಾ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories