ಪಾಕಿಸ್ತಾನ ಸೆಮಿಫೈನಲ್ ಎಂಟ್ರಿಗೆ ಅದ್ಭುತ ಐಡಿಯಾ ನೀಡಿದ ವಾಸಿಮ್ ಅಕ್ರಮ್!

First Published Nov 10, 2023, 2:45 PM IST

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಸೆಮಿಫೈನಲ್ ಹಾದಿ ಬಹುತೇಕ ಬಂದ್ ಆಗಿದೆ. ಆದರೆ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಅದ್ಭುತ ಐಡಿಯಾ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಈ ಪ್ಲಾನ್ ಜಾರಿಗೊಳಿಸಿದರೆ ಪಾಕಿಸ್ತಾನ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲಿದೆ.

ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿರುವ ಒಂದು ಸ್ಥಾನಕ್ಕಾಗಿ ಮೂರು ತಂಡಗಳು ಹೋರಾಟ ನಡೆಸುತ್ತಿದೆ. ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡ 5 ವಿಕೆಟ್ ಗೆಲುವು ದಾಖಲಿಸಿದೆ. ಇದರೊಂದಿಗೆ ನ್ಯೂಜಿಲೆಂಡ್ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳುವ ತವಕದಲ್ಲಿದೆ.
 

ಪಾಕಿಸ್ತಾನ ತಂಡದ ಸೆಮಿಫೈನಲ್ ಪ್ರವೇಶ ಬಹುತೇಕ ಅಂತ್ಯಗೊಂಡಿದೆ. ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಅಸಾಧ್ಯ ಗೆಲುವು ಸಾಧಿಸಿದರೆ ಮಾತ್ರ ಸಣ್ಣ ಅವಕಾಶವೊಂದು ತೆರೆದುಕೊಳ್ಳಲಿದೆ. 

ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಹೊಸ ಐಡಿಯಾ ನೀಡಿದ್ದಾರೆ. ಪಾಕಿಸ್ತಾನ ತಂಡದ ಸೆಮಿಫೈನಲ್ ಪ್ರವೇಶಕ್ಕೆ ಟೈಮ್  ಔಟ್ ಐಡಿಯಾ ನೀಡಿದ್ದಾರೆ. ಈ ಐಡಿಯಾ ಜಾರಿಗೊಳಿಸಿದರೆ ಪಾಕಿಸ್ತಾನ ಸುಲಭವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ.
 

ಖಾಸಗಿ ವಾಹಿನಿಯಲ್ಲಿನ ಸಂದರ್ಶನದ ವೇಳೆ ವಾಸಿಂ ಅಕ್ರಮ್ , ಪಾಕ್ ತಂಡಕ್ಕೆ ಐಡಿಯಾ ಕೊಟ್ಟಿದ್ದಾರೆ. ಪಾಕಿಸ್ತಾನ ತಂಡ ಸ್ಫೋಟ ಬ್ಯಾಟಿಂಗ್ ಮೂಲಕ ಎಷ್ಟು ಸಾಧ್ಯವೋ ಅಷ್ಟು ರನ್ ಸ್ಕೋರ್ ಮಾಡಬೇಕು. ಬಳಿಕ 20 ನಿಮಿಷ ಇಂಗ್ಲೆಂಡ್ ತಂಡದ ಡ್ರೆಸ್ಸಿಂಗ್ ರೂಂ ಲಾಕ್ ಮಾಡಿಬಿಡಿ ಸಾಕು ಎಂದಿದ್ದಾರೆ.

10 ಬ್ಯಾಟ್ಸ್‌ಮನ್ ಒಟ್ಟು 20 ನಿಮಿಷದಲ್ಲಿ ಟೈಮ್ಡ್ ಔಟ್ ಆಗಿ ಇಂಗ್ಲೆಂಡ್ ತಂಡ ಒಂದು ರನ್‌ಗಳಿಸದೇ ಸೋಲು ಕಾಣಲಿದೆ. ಪಾಕಿಸ್ತಾನ 50 ಓವರ್ ಬಾಕಿ ಇರುವಂತೆ ಪಂದ್ಯ ಗೆದ್ದುಕೊಳ್ಳಲಿದೆ. ಇದು ಅತ್ಯಂತ ಸುಲಭವಾಗಿ ಸೆಮಿಫೈನಲ್ ಪ್ರವೇಶಕ್ಕಿರುವ ಮಾರ್ಗ ಎಂದು ಅಕ್ರಮ್ ಹೇಳಿದ್ದಾರೆ.

ಅಕ್ರಮ್ ಈ ಮಾತನ್ನು ಹೇಳಲು ಕಾರಣವಿದೆ. ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 287ರನ್ ಅಂತರದ ಗೆಲುವು ದಾಖಲಿಸಬೇಕು. ಇದು ಪಾಕಿಸ್ತಾನಕ್ಕಿರುವ ಮತ್ತೊಂದು ದಾರಿ.

ಚೇಸಿಂಗ್ ಮಾಡುವುದಾದರೆ ಇಂಗ್ಲೆಂಡ್ ತಂಡವನ್ನು 50 ರನ್‌ಗೆ ಆಲೌಟ್ ಮಾಡಿ, 2 ಓವರ್‌ನಲ್ಲಿ ಟಾರ್ಗೆಟ್ ಚೇಸ್ ಮಾಡಬೇಕು. ಅಥವಾ ಇಂಗ್ಲೆಂಡ್ 100 ರನ್ ಸಿಡಿಸಿದರೆ ಪಾಕಿಸ್ತಾನ 3 ಓವರ್‌ನಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಬೇಕು. ಇವೆಲ್ಲ ಅಸಾಧ್ಯವಾದ ಗೆಲುವು.

ಈ ಎರಡು ದಾರಿಗಳು ಪಾಕಿಸ್ತಾನಕ್ಕೆ ಸುಲಭವಲ್ಲ, ಹೀಗಾಗಿ ವಾಸಿಂ ಅಕ್ರಮ್ ಸುಲಭ ದಾರಿಯನ್ನು ಹೇಳಿದ್ದಾರೆ. 20 ನಿಮಿಷ ಇಂಗ್ಲೆಂಡ್ ಡ್ರೆಸ್ಸಿಂಗ್ ರೂಂ ಬಾಗಿಲು ಲಾಕ್ ಮಾಡಿದರೆ ಎಲ್ಲವು ಸುಗಮ ಎಂದಿದ್ದಾರೆ.
 

click me!