ಅನುಷ್ಕಾ ಬೇಬಿ ಬಂಪ್ ಕಾಣಿಸಿದಂತೆ ಅಡ್ಡ ನಿಂತ್ರಾ ಕೊಹ್ಲಿ? ಬೆಂಗಳೂರು ಹೊಟೆಲ್‌ನಲ್ಲಿ ವಿರುಷ್ಕಾ ಜೋಡಿ!

ಐಸಿಸಿ ವಿಶ್ವಕಪ್ ಲೀಗ್ ಟೂರ್ನಿಯ ಅಂತಿಮ ಪಂದ್ಯಕ್ಕೆ ಭಾರತ ತಂಡ ಬೆಂಗಳೂರಿಗೆ ಆಗಮಿಸಿದೆ. ಇತ್ತ ಅನುಷ್ಕಾ ಶರ್ಮಾ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಇದೀಗ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೊತೆಯಾಗಿ ಹೊಟೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಬೇಬಿ ಬಂಪ್ ಕಾಣದಂತೆ ಕೊಹ್ಲಿ ಕ್ಯಾಮೆರಾ ಅಡ್ಡ ಬಂದಿರುವ ಘಟನೆ ನಡೆದಿದೆ.

ನೆದರ್ಲೆಂಡ್ ವಿರುದ್ಧದ ಐಸಿಸಿ ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕೋಲ್ಕತಾ ಪಂದ್ಯ ಮುಗಿಸಿದ ಬೆನ್ನಲ್ಲೇ ಬೆಂಗಳೂರು ವಿಮಾನ ಹತ್ತಿದ ಕೊಹ್ಲಿ ತಮ್ಮ ಎರಡನೇ ತವರಿಗೆ ಆಗಮಿಸಿದ್ದಾರೆ. 

ಕೊಹ್ಲಿ ಬೆನ್ನಲ್ಲೇ ಪತ್ನಿ ಅನುಷ್ಕಾ ಶರ್ಮಾ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಪಂದ್ಯಕ್ಕೂ ಮುನ್ನ ಸಿಕ್ಕಿರುವ ಕೆಲ ವಿಶ್ರಾಂತಿ ದಿನಗಳನ್ನು ಕೊಹ್ಲಿ ಹಾಗೂ ಅನುಷ್ಕಾ ಜೊತೆಯಾಗಿ ಎಂಜಾಯ್ ಮಾಡುತ್ತಿದ್ದಾರೆ.


ಬೆಂಗಳೂರಿನ ಹೊಟೆಲ್‌ನಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಪ್ರತ್ಯಕ್ಷರಾಗಿದ್ದಾರೆ. ಈ ವೇಳೆ ಕೊಹ್ಲಿ ಅನುಷ್ಕಾ ಬೇಬಿ ಬಂಪ್ ಕಾಣದಂತೆ ಕ್ಯಾಮೆರಾಗೆ ಅಡ್ಡ ಬಂದಿರುವ ಘಟನೆ ನಡೆದಿದೆ. 

ಅನುಷ್ಕಾ ಶರ್ಮಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಅನ್ನೋ ಮಾತುಗಳು ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಬೆಂಗಳೂರಿಗೆ ಆಗಮಿಸುವ ವೇಳೆ ಅನುಷ್ಕಾ ದೊಡ್ಡ ಟಿ ಶರ್ಟ್ ಹಾಕಿ ಆಗಮಿಸಿದ್ದರು. 
 

ದೊಡ್ಡ ಟೀ ಶರ್ಟ್ ಮೂಲಕ ಅನುಷ್ಕಾ ಶರ್ಮಾ ಬೇಬಿ ಬಂಪ್ ಮರೆಮಾಚಿದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಮೂಲಕ ಈ ವಿಡಿಯೋ ಒಂದು ಭಾರಿ ವೈರಲ್ ಆಗಿತ್ತು.
 

ಅನುಷ್ಕಾ ಶರ್ಮಾ ಪ್ರೆಗ್ನೆಂಟ್ ಅನ್ನೋ ಚರ್ಚೆ ಶುರುವಾಗಲು ಕಾರಣ ಸ್ವತಃ ಅನುಷ್ಕಾ ಹಂಚಿಕೊಂಡ ಫೋಟೋ. ಅಕ್ಟೋಬರ್ 26 ರಂದು ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಂನಲ್ಲಿನ ಫೋಟೋದಲ್ಲಿ ಬೇಬಿ ಬಂಪ್ ಕಾಣಿಸುತ್ತಿದೆ ಅನ್ನೋ ಚರ್ಚೆ ಆರಂಭಗೊಂಡಿತು.
 

ಇದಕ್ಕೆ ಪೂರಕವಾಗಿ ಇದೀಗ ಅನುಷ್ಕಾ ಶರ್ಮಾ ಬಹಿರಂಗವಾಗಿ ಕಾಣಿಸಿಕೊಳ್ಳುವಾಗ ದೊಡ್ಡ ಸೈಜ್ ಟೀ ಶರ್ಟ, ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಈ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ.
 

Team India

ನವೆಂಬರ್ 12 ರಂದು ಭಾರತ ಹಾಗೂ ನೆದರ್ಲೆಂಡ್ ತಂಡ ವಿಶ್ವಕಪ್ 2023ರ ಅಂತಿಮ ಲೀಗ್ ಪಂದ್ಯ ಆಡಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Latest Videos

click me!