ICC World Cup 2023 ರೋಹಿತ್ ಶರ್ಮಾ ಪಡೆಯ ಸಕ್ಸಸ್ ಸೀಕ್ರೇಟ್ ಏನು ಗೊತ್ತಾ..?

Published : Nov 07, 2023, 03:59 PM IST

ಬೆಂಗಳೂರು(ನ.11): ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ವಿಶ್ವಕಪ್ ಬ್ಯಾಟ್‌ನಲ್ಲಿ ಸೂಪರ್ ಫರ್ಫಾಮೆನ್ಸ್ ನೀಡ್ತಿದೆ. ಸತತ 8 ಪಂದ್ಯಗಳನ್ನ ಗೆದ್ದಿದೆ. ಇದೆಲ್ಲಾ ನಿಮಗೆ ಗೊತ್ತಿರೋದೆ. ಆದ್ರೆ, ರೋಹಿತ್ ಪಡೆಯ ಈ ಸಕ್ಸಸ್ ಹಿಂದಿನ ಸೀಕ್ರೆಟ್ ಏನು ಗೊತ್ತಾ..? ನಾವೇಳ್ತೀವಿ ಈ ಸ್ಟೋರಿ ನೋಡಿ.

PREV
17
ICC World Cup 2023 ರೋಹಿತ್ ಶರ್ಮಾ ಪಡೆಯ  ಸಕ್ಸಸ್ ಸೀಕ್ರೇಟ್ ಏನು ಗೊತ್ತಾ..?

ವಿಶ್ವಕಪ್ ಮೆಗಾ ಟೂರ್ನಿಯಲ್ಲಿ ಟೀಂ ಇಂಡಿಯಾ ಜಬರ್ದಸ್ತ್ ಪ್ರದರ್ಶನ ನೀಡ್ತಿದೆ. ಎದುರಿಗೆ ಸಿಕ್ಕ ಎಲ್ಲಾ ತಂಡಗಳನ್ನ ಹೊಡೆದು ಹೊಡೆದು ಹಾಕಿ ಅಬ್ಬರಿಸ್ತಿದೆ. ರೋಹಿತ್ ಶರ್ಮಾ ಸೈನ್ಯದ ಆರ್ಭಟ ಎದುರಾಳಿ ಪಡೆಗಳ ನಿದ್ದೆ ಗೆಡಿಸಿದೆ. ಮೆನ್ ಇನ್ ಬ್ಲೂ ಪಡೆಯ ಸಕ್ಸಸ್ ಸೀಕ್ರೆಟ್ ಏನು ಅಂತಾ ಎಲ್ಲಾ ತಂಡಗಳು ಸಿಕ್ಕಾ ಪಟ್ಟೆ ತಲೆಕೆಡಿಸಕೊಂಡಿವೆ. 

27
ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋ ಸಿದ್ಧಾಂತವೇ ಗೆಲುವಿಗೆ ಕಾರಣ..!

ಯೆಸ್, ಒಗ್ಗಟ್ಟೇ ಟೀಂ ಇಂಡಿಯಾದ  ಸತತ ಗೆಲುವುಗಳಿಗೆ ಪ್ರಮುಖ ಕಾರಣ ಅಂದ್ರೆ ತಪ್ಪಿಲ್ಲ. ಎಲ್ಲಾ ಆಟಗಾರರು ತಂಡದ ಗೆಲುವಿಗಾಗಿ ಶ್ರಮಿ ಸುತ್ತಿದ್ದಾರೆ. ಹಂಡ್ರೆಡ್ ಪರ್ಸೆಂಟ್ ಎಫರ್ಟ್ ಹಾಕ್ತಿದ್ದಾರೆ. ಮುಖ್ಯವಾಗಿ ಒಬ್ಬರ ಸಕ್ಸಸ್‌ನ ಮತ್ತೊಬ್ಬರು ಎಂಜಾಯ್ ಮಾಡ್ತಿದ್ದಾರೆ

37
ಆಟಗಾರರ ಮನೋಸ್ಥೈರ್ಯ..!

ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿದೆ. ಎದುರಾಳಿ ಎಷ್ಟೇ ಬಲಿಷ್ಠ ವಾಗಿದ್ದರೂ ತಲೆಕೆಡಿಸಿಕೊಳ್ಳದೇ, ತಮ್ಮ ಸಾಮರ್ಥ್ಯವನ್ನ ನಂಬಿ ಕಣಕ್ಕಿಳಿಯುತ್ತಿ ದ್ದಾರೆ. ಎಂತದ್ದೇ ಕಠಿಣ ಸಂದರ್ಭದಲ್ಲೂ ಎದೆಗುಂದದೇ, ಧೈರ್ಯದಿಂದ ಆಡ್ತಿದ್ದಾರೆ. ಇದು ತಂಡಕ್ಕೆ ಸಕ್ಸಸ್‌ಗೆ ಕಾರಣವಾಗ್ತಿದೆ. 

47
ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಫೈಯರ್..!

ಸದ್ಯ ಟೀಂ ಇಂಡಿಯಾ ಎಲ್ಲಾ ಡಿಪಾರ್ಟ್ಮೆಂಟ್ಗಳಲ್ಲೂ ಸಖತ್ ಬ್ಯಾಲೆನ್ಸ್ಡ್ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಸಮನಾಗಿ ಫೈಯರ್ ಆಗ್ತಿದೆ. ಬ್ಯಾಟರ್ಸ್ ಮತ್ತು  ಬೌಲರ್ಸ್ ಸಮನಾಗಿ ತಂಡಕ್ಕೆ ಕಾಂಟ್ರಿಬ್ಯೂಟ್ ಮಾಡ್ತಿದ್ದಾರೆ. ಅದರಲ್ಲೂ ಬೌಲರ್ಸ್ ಖತರ್ನಾ್ಕ್ ಬೌಲಿಂಗ್ ಮೂಲಕ ಪ್ರತಿ ಪಂದ್ಯದಲ್ಲೂ ವಿಕೆಟ್ ಬೇಟೆಯಾಡ್ತಿದ್ದಾರೆ. 

57
ಪ್ರತಿ ಪ್ಲೇಯರ್‌ಗೂ ತಮ್ಮ ರೋಲ್ ಬಗ್ಗೆ ಕ್ಲಾರಿಟಿ..!

ಯೆಸ್, ತಂಡದ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ರೋಲ್ ಬಗ್ಗೆ ಕ್ಲಾರಿಟಿಯಿದೆ. ಇದರಿಂದ ತಮ್ಮ ತಮ್ಮ ಪಾತ್ರವನ್ನ ಪರ್ಫೆಕ್ಟ್ ಆಗಿ ನಿಭಾಯಿಸ್ತಿದ್ದಾರೆ. ರೋಹಿತ್ ಮತ್ತು ವಿರಾಟ್ ಕೊಹ್ಲಿಯ ಆಟವೇ ಇದಕ್ಕೆ ಸಾಕ್ಷಿ. ರೋಹಿತ್ ಪವರ್ಪ್ಲೇನಲ್ಲಿ ಅಬ್ಬರಿಸಿದ್ರೆ, ಕೊಹ್ಲಿ ಆ್ಯಂಕರ್ ಇನ್ನಿಂಗ್ ಮೂಲಕ ತಂಡಕ್ಕೆ ನೆರವಾಗ್ತಿದ್ದಾರೆ. 

67
ರೋಹಿತ್ ಶರ್ಮಾರ ಚಾಣಾಕ್ಷ ನಾಯಕತ್ವ..!

ರೋಹಿತ್ ಶರ್ಮಾರ ನಾಯಕತ್ವವೂ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ರೋಹಿತ್ ಶರ್ಮಾ ಕ್ಯಾಪ್ಟನ್ ಮತ್ತು ಬ್ಯಾಟರ್ ಎರಡು ರೋಲನ್ನೂ ಸಖತ್ತಾಗಿ ನಿಭಾಯಿಸ್ತಿದ್ದಾರೆ. ಹಿಟ್‌ಮ್ಯಾನ್ ಗೇಮ್‌ಪ್ಲಾನ್ ಫಲ ಸಖತ್ತಾಗಿ ಫಲ  ನೀಡ್ತಿದೆ. ಬಲಿಷ್ಠ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ರೋಹಿತ್ ಚಾಣಾಕ್ಷ ನಡೆಗಳ ಮೂಲಕ ಯಶಸ್ಸು ತಂದುಕೊಡ್ತಿದ್ದಾರೆ. 

77
ಕೋಚಿಂಗ್ ಸ್ಟಾಫ್ ಗೇಮ್‌ಪ್ಲಾನ್..!

ಇನ್ನು ಈ ಸಕ್ಸಸ್ನಲ್ಲಿ ತಂಡದ ಕೋಚಿಂಗ್ ಸ್ಟಾಫ್ ಪಾಲೂ ಇದೆ. ಮೇನ್ ಕೋಚ್ ರಾಹುಲ್ ದ್ರಾವಿಡ್, ಆಫ್ ದಿ ಫೀಲ್ಡ್ನಲ್ಲಿ ಪರ್ಫೆಕ್ಟ್ ಗೇಮ್‌ಪ್ಲಾನ್ ರೆಡಿ ಮಾಡ್ತಿದ್ದಾರೆ. ಫೀಲ್ಡಿಂಗ್ ಕೋಚ್ ದಿಲೀಪ್ ಆಟಗಾರರಿಗೆ ಬೆಸ್ಟ್ ಫೀಲ್ಡರ್ ಅವಾರ್ಡ್ ನೀಡೋದ್ರ ಮೂಲಕ, ಹುರಿದುಂಬಿಸುತ್ತಿದ್ದಾರೆ. ಇದ್ರಿಂದ ಪಂದ್ಯದಲ್ಲಿ ಪ್ಲೇಯರ್ಸ್ ಜಿದ್ದಿಗೆ ಬಿದ್ದವರಂತೆ ಫೀಲ್ಡಿಂಗ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಅಂಶಗಳು ಟೀಮ್ ಇಂಡಿಯಾದ ಸತತ ಗೆಲುವುಗಳಿಗೆ ಕಾರಣವಾಗಿವೆ. 

Read more Photos on
click me!

Recommended Stories