Published : Nov 07, 2023, 03:07 PM ISTUpdated : Nov 08, 2023, 02:42 PM IST
ಕೋಲ್ಕತಾ ಪಂದ್ಯದ ಬಳಿಕ ಟೀಂ ಇಂಡಿಯಾಗೆ ಕೆಲ ದಿನಗಳ ವಿಶ್ರಾಂತಿ ಸಿಕ್ಕಿದೆ. ಇತ್ತ ವಿರಾಟ್ ಕೊಹ್ಲಿ ಪ್ರತ್ಯೇಕವಾಗಿ ಬೆಂಗಳೂರಿಗೆ ಆಗಮಿಸಿದ್ದರೆ, ಇತ್ತ ಅನುಷ್ಕಾ ಶರ್ಮಾ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ ಬೇಬಿ ಬಂಪ್ ಮರೆಮಾಚುವ ಸಲುವಾಗಿ ಅನುಷ್ಕಾ, ದೊಡ್ಡ ಸೈಜ್ ಟೀಶರ್ಟ್ ಧರಿಸಿದ್ರಾ ಅನ್ನೋ ಮಾತುಗಳು ಕೇಳಿಬರುತ್ತಿದೆ.
ವಿರಾಟ್ ಕೊಹ್ಲಿ ಇತ್ತೀಚೆಗಷ್ಟ 35ನೇ ವಸಂತದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅದೇ ದಿನ ಸೌತ್ ಆಫ್ರಿಕಾ ವಿರುದ್ದ ಸೆಂಚುರಿ ಸಿಡಿಸಿ ಸ್ಮರಣೀಯವಾಗಿಸಿದ್ದರು. ಈ ಪಂದ್ಯ ಕೋಲ್ಕತಾದಲ್ಲಿ ನಡೆದಿತ್ತು. ಗೆಲುವಿನ ಬಳಿಕ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಕ್ರಿಕೆಟಿಗರಿಗಿಂತ ಮುಂಚೆ ಬೆಂಗಳೂರಿಗೆ ಆಗಮಿಸಿದ್ದಾರೆ.
28
Virat Kohli
ಭಾರತ ತನ್ನ ಕೊನೆಯ ಐಸಿಸಿ ವಿಶ್ವಕಪ್ 2023 ಲೀಗ್ ಪಂದ್ಯವನ್ನು ನೆದರ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ. ನವೆಂಬರ್ 12 ರಂದು ಈ ಪಂದ್ಯ ನಡೆಯಲಿದೆ. ಹೀಗಾಗಿ ಆಟಗಾರರಿಗೆ ಕೆಲ ದಿನಗಳ ವಿಶ್ರಾಂತಿ ಸಿಕ್ಕಿದೆ. ಇದೀಗ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ.
38
ಅನುಷ್ಕಾ ಶರ್ಮಾ ಶಾಲಾ-ಕಾಲೇಜು ದಿನಗಳನ್ನು ಬೆಂಗಳೂರಿನಲ್ಲೇ ಕಳೆದಿದ್ದರು. ಹೀಗಾಗಿ ಅನುಷ್ಕಾಗೆ ಬೆಂಗಳೂರು ತವರು. ಇದೀಗ ಅನುಷ್ಕಾ ಶರ್ಮಾ, ಕೊಹ್ಲಿಗೆ ಚಿಯರ್ ಅಪ್ ಮಾಡಲು ಬೆಂಗಳೂರಿಗೆ ಆಗಮಿಸಿದ್ದಾರೆ.
48
ಅನುಷ್ಕಾ ಶರ್ಮಾ ದೊಡ್ಡ ಸೈಜ್ ಟಿ ಶರ್ಟ್‌ನಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಮೂಲಕ ಅನುಷ್ಕಾ ಬೇಬಿ ಬಂಪರ್ ಮರೆಮಾಚುವ ಪ್ರಯತ್ನ ಮಾಡಿದ್ರಾ ಅನ್ನೋ ಮಾತುಗಳು ಕೇಳಿಬರುತ್ತಿದೆ.
58
ಅನುಷ್ಕಾ ಶರ್ಮಾ ಗರ್ಭಿಣಿ ಅನ್ನೋ ಮಾತುಗಳು ಇತ್ತೀಚೆಗೆ ಭಾರಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಪೂರಕವಾದ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು
68
ಅಕ್ಟೋಬರ್ 26 ರಂದು ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಂ ಮೂಲಕ ಫೋಟೋ ಹಂಚಿಕೊಂಡದ್ದರು. ಈ ಫೋಟೋದಲ್ಲಿ ಅನುಷ್ಕಾ ಬೇಬಿ ಬಂಪ್ ಕಾಣಿಸುತ್ತಿದೆ ಅನ್ನೋ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
78
ಇದೀಗ ಬೆಂಗಳೂರಿಗೆ ಆಗಮಿಸಿರುವ ಅನುಷ್ಕಾ ಶರ್ಮಾ ಇದೇ ಕಾರಣಕ್ಕೆ ದೊಡ್ಡ ಸೈಜ್ ಟೀ ಶರ್ಟ್ ಧರಿಸಿ ಬೇಬಿ ಬಂಪ್ ಮರೆಮಾಚಿದ್ದಾರೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
88
ನದೆರ್ಲೆಂಡ್ ವಿರುದ್ದದ ಪಂದ್ಯಕ್ಕೂ ಮೊದಲು 5 ದಿನಗಳ ವಿಶ್ರಾಂತಿ ಸಮಯವಿದೆ. ಹೀಗಾಗಿ ಅನುಷ್ಕಾ ಶರ್ಮಾ ಕೊಹ್ಲಿ ಜೊತೆ ಕೆಲ ದಿನ ಕಾಲ ಕಳೆಯಲಿದ್ದಾರೆ. ಭಾರತ-ನದೆರ್ಲೆಂಡ್ ಪಂದ್ಯಕ್ಕೆ ಅನುಷ್ಕಾ ಶರ್ಮಾ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಾಗಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.