T20 World Cup: Pak vs NZ ಕಿವೀಸ್‌ ಮಣಿಸಿ, ನಗುತ್ತಲೇ ಹಳೇ ಸೇಡು ತೀರಿಸಿಕೊಂಡ ಪಾಕಿಸ್ತಾನ..!

Suvarna News   | Asianet News
Published : Oct 27, 2021, 12:33 PM IST

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಬಾಬರ್ ಅಜಂ (Babar Azam) ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಅದ್ಭುತ ಪ್ರದರ್ಶನ ತೋರುವ ಮೂಲಕ ಸೂಪರ್ 12 ಹಂತದ ಗ್ರೂಪ್ 2 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ವಿರುದ್ದ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದ ಜಯ ಸಾಧಿಸುವ ಮೂಲಕ ಕೆಲವು ದಿನಗಳ ಹಿಂದಷ್ಟೇ ಅನುಭವಿಸಿದ್ದ ಮುಜುಗರಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
113
T20 World Cup: Pak vs NZ ಕಿವೀಸ್‌ ಮಣಿಸಿ, ನಗುತ್ತಲೇ ಹಳೇ ಸೇಡು ತೀರಿಸಿಕೊಂಡ ಪಾಕಿಸ್ತಾನ..!

ಬಾಬರ್ ಅಜಂ (Babar Azam) ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಕಪ್‌ ಗೆಲ್ಲಬಲ್ಲ ಪ್ರಬಲ ಸ್ಪರ್ಧಿಗಳಲ್ಲಿ ಒಂದು ಎನಿಸಿದ್ದು, ಈಗಾಗಲೇ ಗ್ರೂಪ್‌ 2ನ ಮೊದಲೆರಡು ಪಂದ್ಯಗಳಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

213

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ (Dubai International Stadium) ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾ (Team India) ಎದುರು ಪಾಕಿಸ್ತಾನ ತಂಡವು 10 ವಿಕೆಟ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.

313

ಇದಷ್ಟೇ ಅಲ್ಲದೇ ವಿಶ್ವಕಪ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಎದುರು ಪಾಕಿಸ್ತಾನ ಕ್ರಿಕೆಟ್ ತಂಡವು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಶಾಹೀನ್ ಶಾ ಅಫ್ರಿದಿ, ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಟೀಂ ಇಂಡಿಯಾ ಎದುರಿನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

413

ನಾವು ಅಸ್ಥಿರ ಆಟಕ್ಕೆ ಹೆಸರುವಾಸಿ ಎನ್ನುವುದನ್ನು ನೆನಪಿನಲ್ಲಿಡಿ. ಖುಷಿಯಲ್ಲಿ ಮೈಮರೆಯಬೇಡಿ ಎಂದು ಪಂದ್ಯ ಮುಕ್ತಾಯದ ಬಳಿಕ ನಾಯಕ ಬಾಬರ್ ಅಜಂ ಡ್ರೆಸ್ಸಿಂಗ್ ರೂಂನಲ್ಲಿ ಸಹ ಆಟಗಾರರನ್ನು ಎಚ್ಚರಿಸಿದ್ದರು. 

513

ಇದೀಗ ಶಾರ್ಜಾದಲ್ಲಿ ನಡೆದ ಪಾಕ್‌ ಪಾಲಿನ ಎರಡನೇ ಪಂದ್ಯದಲ್ಲಿ ಮತ್ತೊಂದು ಬಲಿಷ್ಠ ತಂಡವಾದ ನ್ಯೂಜಿಲೆಂಡ್ ವಿರುದ್ದ 5 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಂಡಿದೆ. 

613

ಇದರ ಜತೆಗೆ ಕೆಲವು ದಿನಗಳ ಹಿಂದಷ್ಟೇ ಜಗತ್ತಿನ ಮುಂದೆ ಪಾಕಿಸ್ತಾನ ಕ್ರಿಕೆಟ್ ತಂಡವು ತವರಿನಲ್ಲಿ ಅನುಭವಿಸಿದ್ದ ಮುಜುಗರಕ್ಕೆ ನ್ಯೂಜಿಲೆಂಡ್ ತಂಡದ ವಿರುದ್ದ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

713

ಹೌದು, ಸೆಪ್ಟೆಂಬರ್ ತಿಂಗಳಿನಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯನ್ನಾಡಲು ನ್ಯೂಜಿಲೆಂಡ್ ತಂಡವು ಪಾಕಿಸ್ತಾನಕ್ಕೆ ಬಂದಿಳಿದಿತ್ತು. ನ್ಯೂಜಿಲೆಂಡ್ ತಂಡವು ಪಾಕ್‌ ಎದುರು ರಾವುಲ್ಪಿಂಡಿಯಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ ಲಾಹೋರ್‌ನಲ್ಲಿ 5 ಟಿ20 ಸರಣಿಯನ್ನಾಡಬೇಕಿತ್ತು.
 

813

ಆದರೆ ಏಕದಿನ ಸರಣಿ ಆರಂಭಕ್ಕೆ ಕೆಲವೇ ಗಂಟೆಗಳಿದ್ದಾಗ ಭದ್ರತೆಯ ನೆಪವೊಡ್ಡಿ ನ್ಯೂಜಿಲೆಂಡ್ ತಂಡವು ಮೈದಾನಕ್ಕಿಳಿಲು ನಿರಾಕರಿಸಿತ್ತು. ಇದಷ್ಟೇ ಅಲ್ಲದೇ ನೇರವಾಗಿ ನ್ಯೂಜಿಲೆಂಡ್ ತವರಿಗೆ ವಾಪಾಸ್ಸಾಗಿತ್ತು.

913

ಇನ್ನು ನ್ಯೂಜಿಲೆಂಡ್ ತಂಡವು ಭದ್ರತೆಯ ಕಾರಣ ನೀಡಿ ಟೂರ್ನಿಯನ್ನಾಡಲು ನಿರಾಕರಿಸಿದ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿತ್ತು. ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದಂತಾಗಿತ್ತು.
 

1013
Ramiz Raja

ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಚೇರ್‌ಮನ್‌ ರಮೀಜ್ ರಾಜಾ, ಇದುವರೆಗೂ ನಮಗೆ ಭಾರತ ಮಾತ್ರ ಶತ್ರುವಾಗಿತ್ತು. ಈ ಪಟ್ಟಿಗೀಗ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಸೇರಿಕೊಂಡಿವೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರನ್ನು ಸೋಲಿಸಿ ತಕ್ಕ ಉತ್ತರ ನೀಡಿ ಎಂದು ಕರೆಕೊಟ್ಟಿದ್ದರು.

1113

ಇದೀಗ ನ್ಯೂಜಿಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸುವ ಮೂಲಕ ಪಾಕ್ ತಿರುಗೇಟು ನೀಡಿದೆ. ಗಾಯದ ಮೇಲೆ ಬರೆ ಎನ್ನುವಂತೆ ನ್ಯೂಜಿಲೆಂಡ್ ವಿರುದ್ದದ ಗೆಲುವನ್ನು ಅನುಭವಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಪಾಕಿಸ್ತಾನದ ಭದ್ರತಾಸಿಬ್ಬಂದಿಗೆ ಅರ್ಪಿಸಿ ಕಿವೀಸ್‌ ಪಡೆಗೆ ಟಾಂಗ್ ನೀಡಿದ್ದಾರೆ.

1213
Mohammad Hafeez

ನ್ಯೂಜಿಲೆಂಡ್ ವಿರುದ್ದದ ಗೆಲುವನ್ನು ಎಲ್ಲಾ ಪಾಕಿಸ್ತಾನದ ಭದ್ರತಾಪಡೆಗಳಿಗೆ ಅರ್ಪಿಸುತ್ತಿದ್ದೇನೆ. ನಮ್ಮ ಹುಡುಗರ ಚೆನ್ನಾಗಿ ಆಡಿದರು. ಕಪ್ ಗೆಲ್ಲುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿ ಎಂದು ಹಫೀಜ್ ಟ್ವೀಟ್‌ ಮಾಡಿದ್ದಾರೆ.

1313
Pak vs Afghan

ಪಾಕಿಸ್ತಾನ ಕ್ರಿಕೆಟ್‌ ತಂಡವು ಅಕ್ಟೋಬರ್ 29ರಂದು ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸಾಕ್ಷಿಯಾಗಲಿದೆ.

Read more Photos on
click me!

Recommended Stories