ICC T20 World Cup ಟೂರ್ನಿಯಿಂದಲೇ ಹೊರಬಿದ್ದ ಸ್ಟಾರ್ ವೇಗಿ..!

First Published Oct 27, 2021, 11:26 AM IST

ಶಾರ್ಜಾ: ಯುಎಇನಲ್ಲಿ 7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಕ್ರಿಕೆಟ್ ಟೂರ್ನಿ ಅದ್ಧೂರಿಯಾಗಿ ಸಾಗುತ್ತಿದೆ. ಸೂಪರ್ 12 ಹಂತದ ಪಂದ್ಯಗಳು ಸಾಕಷ್ಟು ರೋಚಕ ಪಪೋಟಿಗಳಿಗೆ ಸಾಕ್ಷಿಯಾಗಿದೆ. ಇದೀಗ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡ (New Zealand Cricket ) ದ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ವೇಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಯಾಕೆ? ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ 
 

pakistan vs new zealand

ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ ಗೆಲ್ಲುವ ಕನಸಿನೊಂದಿಗೆ ಯುಎಇ ಬಂದಿಳಿದೆ. ಪಾಕಿಸ್ತಾನ ಎದುರಿನ ಮೊದಲ ಪಂದ್ಯದಲ್ಲೇ ಕಿವೀಸ್‌ ಆಘಾತಕಾರಿ ಸೋಲು ಕಂಡಿದೆ.

Lockie Ferguson

ಪಾಕ್‌ ವಿರುದ್ದದ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸುವ ವೇಳೆ ಮೀನ ಖಂಡದ ಗಾಯಕ್ಕೆ ಒಳಗಾಗಿರುವ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯೂಸನ್‌ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪಾಕಿಸ್ತಾನ ವಿರುದ್ದದ ಪಂದ್ಯಕ್ಕೂ ಮುನ್ನ ವೇಗಿ ಲಾಕಿ ಫರ್ಗ್ಯೂಸನ್‌ ಬೌಲಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡರು. ತಕ್ಷಣ ಅವರನ್ನು ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದ್ದು, 4 ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್‌ ರೈಡರ್ಸ್ ತಂಡವು ಫೈನಲ್‌ಗೇರುವಲ್ಲಿ ಲಾಕಿ ಫರ್ಗ್ಯೂಸನ್‌ ಮಹತ್ವದ ಪಾತ್ರ ವಹಿಸಿದ್ದರು. ಕೆಕೆಆರ್ ಪರ ಫರ್ಗ್ಯೂಸನ್‌ 8 ಪಂದ್ಯಗಳನ್ನಾಡಿ 13 ವಿಕೆಟ್ ಕಬಳಿಸಿದ್ದರು.

ಇದೀಗ ಟಿ20 ವಿಶ್ವಕಪ್ ಟೂರ್ನಿಗೆ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿದ್ದ ಆಡಂ ಮಿಲ್ನೆ, ಲಾಕಿ ಫರ್ಗ್ಯೂಸನ್‌ ಅವರ ಬದಲಿಗೆ ನ್ಯೂಜಿಲೆಂಡ್ ತಂಡವನ್ನು ಕೂಡಿಕೊಂಡಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಕೇವಲ 13 ದಿನಗಳ ಅಂತರದಲ್ಲಿ 5 ಟಿ20 ಪಂದ್ಯಗಳನ್ನು ಆಡಲಿದೆ. ಗಾಯಗೊಂಡಿರುವ ಫರ್ಗ್ಯೂಸನ್ ಅವರನ್ನು ತಂಡದಿಂದ ಕೈಬಿಡದೇ ಬೇರೆ ಆಯ್ಕೆಗಳೇ ನಮಗಿರಲಿಲ್ಲ ಎಂದು ಕಿವೀಸ್ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.

ಈಗಾಗಲೇ ಪಾಕಿಸ್ತಾನ ವಿರುದ್ದ ಆಘಾತಕಾರಿ ಸೋಲು ಕಂಡಿರುವ ನ್ಯೂಜಿಲೆಂಡ್ ತಂಡಕ್ಕೀಗ ಅಗ್ನಿಪರೀಕ್ಷೆ ಎದುರಾಗಿದ್ದು, ಸೆಮೀಸ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಭಾರತ ವಿರುದ್ದದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಅಕ್ಟೋಬರ್ 31ರಂದು ಈ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡವು ಮೊದಲ ಪಂದ್ಯದಲ್ಲಿ ಪಾಕ್ ಎದುರು ಮುಗ್ಗರಿಸಿದ್ದು, ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿವೆ.

click me!