ವಿಶ್ವಕಪ್‌ನಿಂದ ಹೊರಬಿದ್ರೂ ಪ್ರತೀಕಾಗೆ ಸಿಗಲಿದೆ ಮೆಡಲ್! ಜಯ್ ಶಾ ಅವರಿಂದಾಗಿ ಐಸಿಸಿ ರೂಲ್ಸ್ ಚೇಂಜ್!

Published : Nov 08, 2025, 12:05 PM IST

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆರಂಭಿಕ ಬ್ಯಾಟರ್ ಪ್ರತೀಕಾ ರಾವಲ್‌ ಪಾಲಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪ್ರತೀಕಾಗಾಗಿ ಐಸಿಸಿ ತನ್ನ ರೂಲ್ಸ್ ಅನ್ನೇ ಬದಲಿಸಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ. 

PREV
18
ಪ್ರತೀಕಾ ರಾವಲ್‌ಗೆ ಗುಡ್‌ ನ್ಯೂಸ್

ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ನಡುವೆಯೇ ಗಾಯಕ್ಕೆ ತುತ್ತಾಗಿ ಹೊರಬಿದ್ದಿದ್ದರೂ ಭಾರತದ ತಾರಾ ಬ್ಯಾಟರ್ ಪ್ರತೀಕಾ ರಾವಲ್‌ಗೆ ವಿಶ್ವಕಪ್ ಪದಕ ಸಿಗಲಿದೆ. ಇದನ್ನು ಸ್ವತಃ ಪ್ರತೀಕಾ ಖಚಿತಪಡಿಸಿಕೊಂಡಿದ್ದಾರೆ.

28
ಪ್ರತೀಕಾ ಬದಲು ಶಫಾಲಿಗೆ ಸ್ಥಾನ

ಸೆಮಿಫೈನಲ್‌ಗೂ ಮುನ್ನ ಗಾಯ ಗೊಂಡ ಕಾರಣ ಪ್ರತೀಕಾ ಟೂರ್ನಿಯಿಂದ ಹೊರಬಿದ್ದು, ಅವರ ಬದಲು ಶಫಾಲಿ ವರ್ಮಾ 15 ಮಂದಿಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆ ಬಳಿಕ ಶಫಾಲಿ ಫೈನಲ್‌ನಲ್ಲಿ ಮಿಂಚಿ ಪಂದ್ಯಶ್ರೇಷ್ಠ ಪ್ರಶಸ್ತಿ ಜತೆಗೆ ವಿಶ್ವಕಪ್ ಪದಕವನ್ನೂ ಜಯಿಸಿದ್ರು.

38
ಐಸಿಸಿ ನಿಯಮವೇನು?

ಐಸಿಸಿ ನಿಯಮದ ಪ್ರಕಾರ ತಂಡದಿಂದ ಹೊರಗುಳಿದವರನ್ನು ಅಂತಿಮ 15ರ ಗುಂಪಿನಲ್ಲಿ ಪರಿಗಣಿಸುವುದಿಲ್ಲ. ಹೀಗಾಗಿ ಪ್ರತೀಕಾ ಬದಲು ಶಫಾಲಿಗೆ ಪದಕ ಸಿಕ್ಕಿತ್ತು. ಪ್ರತೀಕಾಗೆ ನಿರಾಸೆ ಎದುರಾಗಿತ್ತು.

48
ಪದಕದ ಬಗ್ಗೆ ಪ್ರತೀಕಾ ಸ್ಪಷ್ಟನೆ

ಆದರೆ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದ ಸಂದರ್ಭ ದಲ್ಲಿ ಪ್ರತೀಕಾ ಕೊರಳಿನಲ್ಲಿ ಪದಕವಿತ್ತು. ಇದು ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸ್ವತಃ ಪ್ರತೀಕಾ ಪ್ರತಿಕ್ರಿಯಿಸಿದ್ದಾರೆ.

58
ಜಯ್ ಪ್ರಯತ್ನದಿಂದ ರೂಲ್ಸ್ ಬದಲು

“ಅದು ತಾತ್ಕಾಲಿಕ ಪದಕ. ಆದರೆ ಐಸಿಸಿ ಅಧ್ಯಕ್ಷ ಜಯ್ ಶಾ ವೈಯಕ್ತಿಕ ಮುತುವರ್ಜಿ ಯಿಂದ ನಿಜವಾದ ಪದಕ ನನಗೆ ದೊರೆಯಲಿದೆ. ಶೀಘ್ರ ವಿಶ್ವಕಪ್ ಚಾಂಪಿಯನ್ ನನ್ನ ಕೈ ಸೇರಲಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

68
ಪ್ರತೀಕಾ ನಾಲ್ಕನೇ ಗರಿಷ್ಠ ರನ್ ಸ್ಕೋರರ್

ಪ್ರತಿಕಾ ರಾವಲ್ 308 ರನ್ ಗಳಿಸುವ ಮೂಲಕ, 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದ ಎರಡನೇ ಹಾಗೂ ಒಟ್ಟಾರೆ 4ನೇ ಸ್ಥಾನ ಪಡೆದಿದ್ದರು.

78
ಲಾರಾ ವೋಲ್ವಾರ್ಟ್‌ಗೆ ಮೊದಲ ಸ್ಥಾನ

ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೋಲ್ವರ್ಟ್(571 ರನ್), ಸ್ಮೃತಿ ಮಂಧನಾ(434 ರನ್) ಹಾಗೂ ಆಶ್ಲೆ ಗಾರ್ಡ್ನರ್(328 ರನ್) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದರು.

88
2002ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ

ಇನ್ನು 2002ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪ್ರತೀಕಾ ರಾವಲ್, ಕೇವಲ 24 ಪಂದ್ಯಗಳನ್ನಾಡಿ ಎರಡು ಶತಕ ಹಾಗೂ 7 ಅರ್ಧಶತಕ ಸಹಿತ 50.45ರ ಬ್ಯಾಟಿಂಗ್ ಸರಾಸರಿಯಲ್ಲಿ 1,100ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

Read more Photos on
click me!

Recommended Stories