ಸ್ಪೀಡ್ ಗನ್ ಮಯಾಂಕ್ ಯಾದವ್ ವೆಜಿಟೇರಿಯನ್ನಾ? ಡಯೆಟ್ ಸೀಕ್ರೇಟ್ ಬಿಚ್ಚಿಟ್ಟ ಲಖನೌ ವೇಗಿ ತಾಯಿ

First Published | Apr 4, 2024, 3:47 PM IST

ಬೆಂಗಳೂರು(ಏ.04): ಲಖನೌ ಸೂಪರ್ ಜೈಂಟ್ಸ್ ತಂಡದ ವೇಗಿ ಮಯಾಂಕ್ ಯಾದವ್ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬೆಂಕಿಯುಗುಳುವ ಚೆಂಡನ್ನು ಎಸೆಯುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಮಯಾಂಕ್ ಯಾದವ್ ತಾಯಿ ಆತನ ಡಯೆಟ್ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
 

ಲಖನೌ ಸೂಪರ್ ಜೈಂಟ್ಸ್ ತಂಡದ ಯುವ ವೇಗಿ ಮಯಾಂಕ್ ಯಾದವ್ 2024ರ ಐಪಿಎಲ್ ಟೂರ್ನಿಯಲ್ಲಿ ನಿರಂತರವಾಗಿ 150+ ವೇಗದಲ್ಲಿ ಬೌಲಿಂಗ್ ದಾಳಿ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಲಖನೌ ತಂಡದ ಈ ವೇಗಿಯ ಎದುರು ಬ್ಯಾಟ್ ಬೀಸಲು ವಿಶ್ವದ ದಿಗ್ಗಜ ಬ್ಯಾಟರ್‌ಗಳೇ ಪರದಾಡುತ್ತಿರುವುದನ್ನು ನಾವು ನೋಡಿದ್ದೇವೆ. ಮಯಾಂಕ್ ಯಾದವ್ ಸದ್ಯದಲ್ಲೇ ಟೀಂ ಇಂಡಿಯಾಗೆ ಎಂಟ್ರಿಕೊಡಲಿದ್ದಾರೆ ಎಂದು ಈಗಾಗಲೇ ಹಲವು ಕ್ರಿಕೆಟ್ ಪಂಡಿತರು ಷರಾ ಬರೆದಿದ್ದಾರೆ.

Tap to resize

ಮಯಾಂಕ್ ಯಾದವ್ ಇಷ್ಟೊಂದು ವೇಗವಾಗಿ ಬೌಲಿಂಗ್ ಮಾಡುವುದರ ಹಿಂದಿನ ಸೀಕ್ರೇಟ್ ಏನು ಎನ್ನುವುದನ್ನು ಅವರ ತಾಯಿ ಮಮತಾ ಯಾದವ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ಮಯಾಂಕ್ ಯಾದವ್ ಇತ್ತೀಚೆಗಷ್ಟೇ ವೆಜಿಟೇರಿಯನ್ ಆಗಿ ಬದಲಾಗಿದ್ದಾರೆ. ಇದಕ್ಕೂ ಮೊದಲು ಆತ ಮಾಂಸಹಾರ ಸೇವಿಸುತ್ತಿದ್ದ. ಆದರೆ ಕಳೆದ ಎರಡು ವರ್ಷಗಳಿಂದ ಸಸ್ಯಾಹಾರ ಸೇವಿಸುವುದನ್ನು ಆರಂಭಿಸಿದ್ದಾನೆ ಎಂದು ಮಮತಾ ಯಾದವ್ ಹೇಳಿದ್ದಾರೆ.

ಅವನಿಗೆ ಡಯೆಟ್ ಪ್ರಕಾರ ಏನು ಕೇಳುತ್ತಾನೋ ಅದನ್ನೇ ಮಾಡಿಕೊಡುತ್ತಿದ್ದೇವೆ. ಅದನ್ನು ಬಿಟ್ಟು ಅವನು ವಿಶೇಷವಾಗಿ ಏನನ್ನೂ ತಿನ್ನುವುದಿಲ್ಲ. ದಾಲ್, ರೋಟಿ, ಅನ್ನ, ಹಾಲು, ತರಕಾರಿಗಳನ್ನಷ್ಟೇ ತಿನ್ನುತ್ತಾನೆ ಎಂದು ಮಯಾಂಕ್ ತಾಯಿ ಮಮತಾ ಆಜ್‌ತಕ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಮಯಾಂಕ್ ನಾನ್‌ವೆಜ್ ಬಿಡಲು ನಿರ್ದಿಷ್ಟವಾದ ಕಾರಣವನ್ನು ಹೇಳಿಲ್ಲ, ಆದರೆ ಈ ಎರಡು ಉದ್ದೇಶಗಳಿಗಾಗಿ ಆತ ಮಾಂಸಹಾರ ಸೇವಿಸುವುದನ್ನು ಬಿಟ್ಟಿರಬಹುದು ಎಂದು ಮಮತಾ ಹೇಳಿದ್ದಾರೆ.

ಮೊದಲನೆಯದಾಗಿ ಮಯಾಂಕ್ ಯಾದವ್, ಭಗವಾನ್ ಶ್ರೀಕೃಷ್ಣನನ್ನು ಆರಾಧಿಸುತ್ತಾನೆ. ಇನ್ನೊಂದು ಅವನೇ ಹೇಳಿದಂತೆ ನಾನ್‌ವೆಜ್ ಆಹಾರ ನನ್ನ ದೇಹಕ್ಕೆ ಹಿಡಿಸುತ್ತಿಲ್ಲ ಎನ್ನುತ್ತಿದ್ದ ಎಂದು ಮಮತಾ ಯಾದವ್ ಹೇಳಿದ್ದಾರೆ.

ಮಯಾಂಕ್ ಯಾದವ್ ಇದೇ ರೀತಿಯಲ್ಲಿ ಮಾರಕ ದಾಳಿ ನಡೆಸಿ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿ ಎನ್ನುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ

Latest Videos

click me!