ಮುಂಬೈನಿಂದ ಹಾರ್ದಿಕ್ ಪಾಂಡ್ಯ ಟ್ರೇಡ್‌ಗೆ 20 ಕೋಟಿ ರೂ ಆಫರ್, ಸಿಎಸ್‌ಕೆ ಮೆಗಾ ಪ್ಲಾನ್ ಬಹಿರಂಗ

Published : Jul 26, 2026, 03:12 PM IST

ಮುಂಬೈ ಇಂಡಿಯನ್ಸ್‌ನಿಂದ ಒಂದು ಕಾಲು ಹೊರಗಿಟ್ಟಿರುವ ಹಾರ್ದಿಕ್ ಪಾಂಡ್ಯ ಇದೀಗ ಸಿಎಸ್‌ಕೆ ತಂಡ ಸೇರಿಕೊಳ್ಳಲು ಸಜ್ಜಾಗಿದ್ದಾರೆ. ಸಿಎಸ್‌ಕೆ ಟ್ರೇಡ್ ಡೀಲ್‌ಗೆ ಮಗಾ ಆಫರ್ ಮುಂಬೈ ಇಂಡಿಯನ್ಸ್ ಮುಂದಿಟ್ಟಿದೆ.

PREV
16
ಸಿಎಸ್‌ಕೆಯಿಂದ ಬಿಗ್ ಆಫರ್

ಐಪಿಎಲ್ 2026ಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಮನಸ್ತಾಪಗಳು, ಬಿಕ್ಕಟ್ಟುಗಳು ತೀವ್ರಗೊಂಡಿತ್ತು. ಪರಿಣಾಮ ಮುಂಬೈ ಇಂಡಿಯನ್ಸ್ ಪಾತಾಳಕ್ಕೆ ಕುಸಿದರೆ, ಇತ್ತ ಹಾರ್ದಿಕ್ ಪಾಂಡ್ಯ ಮುಂಬೈ ತಂಡದಿಂದ ಒಂದು ಕಾಲು ಹೊರಗಿಟ್ಟಿದ್ದರು. ಹಾರ್ದಿಕ್ ಪಾಂಡ್ಯ ಖರೀದಿಗೆ ಹಲವು ತಂಡಗಳು ಆಸಕ್ತಿ ತೋರಿದೆ. ಈ ಪೈಕಿ ಸಿಎಸ್‌ಕೆ ತುದಿಗಾಲಲ್ಲಿ ನಿಂತಿದೆ. ಇದೀಗ ಖರೀದಿ ಮಾತುಕತೆಗಳು ಅಂತಿಮ ಹಂತ ತಲುಪಿದ್ದು ಬಿಗ್ ಆಫರ್ ಮುಂದಿಟ್ಟಿದೆ.

26
20 ಕೋಟಿ ರೂಪಾಯಿ ಜೊತೆಗೆ ಇಬ್ಬರು ಪ್ಲೇಯರ್ಸ್

ಹಾರ್ದಿಕ್ ಪಾಂಡ್ಯರನ್ನು ಸಿಎಸ್‌ಕೆ ತಂಡ ಟ್ರೇಡ್ ಡೀಲ್ ಮೂಲಕ ಖರೀದಿಗೆ ಮುಂದಾಗಿದೆ. ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆ ನಡೆಸಿರುವ ಸಿಎಸ್‌ಕೆ ಹಾರ್ದಿಕ್ ಪಾಂಡ್ಯ ಟ್ರೇಡ್ ಡೀಲ್ ಮೂಲಕ ಖರೀದಿಗೆ ಒಟ್ಟು 20 ಕೋಟಿ ರೂಪಾಯಿ ಬಿಗ್ ಆಫರ್ ನೀಡಿದೆ. ಈ ಆಫರ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ಬದಲಾಗಿ ಇಬ್ಬರು ಆಟಾಗರರ ವಿನಿಮಯ ಮಾಡಲು ಸಿಎಸ್‌ಕೆ ಮುಂದಾಗಿದೆ.

36
ಹಾರ್ದಿಕ್ ಪಾಂಡ್ಯ ಬದಲಾಗಿ ಮುಂಬೈ ಸೇರಿಕೊಳ್ಳುವ ಆಟಗಾರರು ಯಾರು

ಐಪಿಎಲ್ ಟ್ರೇಡ್ ಡೀಲ್ ಮೂಲಕ ಹಾರ್ದಿಕ್ ಪಾಂಡ್ಯರನ್ನು ಸಿಎಸ್‌ಕೆ ಖರೀದಿಸಿ, ಸಿಎಸ್‌ಕೆಯಿಂದ ಶಿವಂ ದುಬೆ ಹಾಗೂ ಆಯುಷ್ ಮ್ಹಾತ್ರೆ ವಿನಿಮಯ ಮಾಡಿಕೊಳ್ಳುವ ಬಿಗ್ ಆಫರ್‌ನ್ನು ಮುಂಬೈ ಇಂಡಿಯನ್ಸ್ ತಂಡದ ಮುಂದಿಟ್ಟಿದೆ. ಈ ಕುರಿತು ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ.

46
ಸಿಎಸ್‌ಕೆ ತಂಡದ ನಾಯಕನಾಗ್ತಾರ ಹಾರ್ದಿಕ್ ಪಾಂಡ್ಯ

ಸಿಎಸ್‌ಕೆ ತಂಡ ಕಳೆದೆರಡು ಆವೃತ್ತಿಗಳಲ್ಲಿ ನೀರಸ ಪ್ರದರ್ಶ ನೀಡಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಸಿಎಸ್‌ಕತೆ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗುತ್ತಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಖರೀದಿಸಿ ನಾಯಕತ್ವ ನೀಡಲು ತಯಾರಿ ನಡೆಸಿದೆ. ಇತ್ತ ಸಂಜು ಸ್ಯಾಮ್ಸನ್ 2026ನೇ ಆವೃತ್ತಿಯಲ್ಲಿ ತಂಡ ಸೇರಿಕೊಂಡಿದ್ದಾರೆ. ಸಂಜು ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ನಾಯಕತ್ವ ಪೈಪೋಟಿ ತೀವ್ರಗೊಳ್ಳುತ್ತಿದೆ.

56
2026 ಐಪಿಎಲ್‌ನಲ್ಲಿ ಕೋಲಾಹಲ

2026ನೇ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಪ್ರದರ್ಶನ ನೀಡಲು ವಿಫಲರಾಗಿದ್ದರು. ಇತ್ತ ಹಿರಿಯ ಆಟಗಾರರು ಸೇರಿದಂತೆ ಮುಂಬೈ ತಂಡದ ಇತರ ಆಟಗಾರರ ಜೊತೆ ತೀವ್ರ ಮನಸ್ತಾಪಕ್ಕೆ ಕಾರಣವಾಗಿದ್ದರು. ಹಾರ್ದಿಕ್ ಪಾಂಡ್ಯ ವಿರುದ್ದ ಆಕ್ರೋಶಗಳು ತೀವ್ರಗೊಂಡಿತ್ತು. ಇದರ ಬೆನ್ನಲ್ಲೇ ಹಾರ್ದಿಕ್ ಮುಂಬೈ ತೊರೆಯಲು ನಿರ್ಧರಿಸಿದ್ದರು.

66
ಮುಂಬೈನಿಂದ ಬೆಂಗಳೂರಿಗೆ ಶಿಫ್ಟ್ ಆಗಿರುವ ಹಾರ್ದಿಕ್ ಪಾಂಡ್ಯ

ಮುಂಬೈನಲ್ಲಿ ಖಾಯಂ ನೆಲೆಯೂರಿದ್ದ ಹಾರ್ದಿಕ್ ಪಾಂಡ್ಯ ತನ್ನ ಬಿಸಿಸಿಐ ಪುನಶ್ಚೇತನ ಶಿಬರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ವಿಶೇಷ ಮುಂಬೈನಿಂದ ಸಂಪೂರ್ಣವಾಗಿ ಹಾರ್ದಿಕ್ ಪಾಂಡ್ಯ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಬಾಡಿಗೆ ಮನೆ ಪಡೆದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories