Latest Videos

ಈ ಕಾರಣಕ್ಕಾಗಿಯೇ ಡಿವೋರ್ಸ್ ಪಡೆಯಲು ಮುಂದಾದ್ರಾ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ?

First Published May 26, 2024, 3:34 PM IST

ಬೆಂಗಳೂರು: ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ದಾಂಪತ್ಯ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು, ಈ ಇಬ್ಬರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಿರುವಾಗಲೇ ಯಾವ ಕಾರಣಕ್ಕೆ ಈ ಜೋಡಿ ಬೇರ್ಪಡುತ್ತಿದ್ದಾರೆ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
 

ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟ್ಯಾಂಕೋವಿಚ್ ಅವರ ದಾಂಪತ್ಯ ಜೀವನ ಬಿರುಕುಬಿಟ್ಟಿದ್ದು, ಈ ಇಬ್ಬರು ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಟಾಕ್ ಆಫ್ ದಿ ಟೌನ್ ಎನಿಸಿಕೊಂಡಿದೆ.

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಜೋಡಿ ಸಾಕಷ್ಟು ವರ್ಷಗಳ ಡೇಟಿಂಗ್ ಬಳಿಕ 2020ರ ಜನವರಿ 1ರಂದು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆ ಬಳಿಕ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು.

ಇನ್ನು ಪಾಂಡ್ಯ ಹಾಗೂ ನತಾಶಾ ದಂಪತಿಗೆ ಮೂರು ವರ್ಷದ ಅಗಸ್ತ್ಯ ಎನ್ನುವ ಗಂಡು ಮಗು ಕೂಡಾ ಇದ್ದಾನೆ. ಹೀಗಿರುವಾಗಲೇ ಈ ಜೋಡಿ ದಿಢೀರ್ ಎನ್ನುವಂತೆ ಬೇರೆ ಬೇರೆಯಾಗಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ಜೋಡಿ ಡಿವೋರ್ಸ್ ಪಡೆಯಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದರು, ಈ ಕುರಿತಂತೆ ಪಾಂಡ್ಯ ಅವರಾಗಲಿ ಅಥವಾ ನತಾಶಾ ಅವರಾಗಲಿ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಹೀಗಾಗಿ ನತಾಶಾ ಸ್ಟ್ಯಾಂಕೋವಿಚ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ದಾಂಪತ್ಯ ಜೀವನದ ಕುರಿತಂತೆ ಅವರ ಅಭಿಮಾನಿಗಳಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಜೋರಾಗುತ್ತಲೇ ಬಂದಿದೆ.

ನತಾಶಾ ಸ್ಟ್ಯಾಂಕೋವಿಚ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಸರ್‌ನೇಮ್ ಪಾಂಡ್ಯ ಹೆಸರನ್ನು ಡಿಲೀಟ್ ಮಾಡಿದ್ದು, ಈ ಗುಸು ಗುಸು ಗಾಳಿ ಸುದ್ದಿಗೆ ಮತ್ತಷ್ಟು ಬಲ ಬರುವಂತೆ ಮಾಡಿತು.

ಇದಷ್ಟೇ ಅಲ್ಲದೇ ಹಾರ್ದಿಕ್ ಪಾಂಡ್ಯ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದರೂ, ನತಾಶಾ ಸ್ಟೇಡಿಯಂಗೆ ಬಂದು ಗಂಡನನ್ನು ಹುರಿದುಂಬಿಸಿರಲಿಲ್ಲ.

ಇನ್ನು ನತಾಶಾ ಸ್ಟ್ಯಾಂಕೋವಿಚ್ ಕಳೆದ ಮಾರ್ಚ್ 04ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿಗೆ ವಿಶ್ ಮಾಡಿರಲಿಲ್ಲ. ಈ ಕಾರಣಕ್ಕಾಗಿಯೇ ನತಾಶಾ, ಹಾರ್ದಿಕ್ ಪಾಂಡ್ಯಗೆ ಕೈಕೊಡಲು ಮುಂದಾಗಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇದಷ್ಟೇ ಅಲ್ಲದೇ 2024ರ ಫೆಬ್ರವರಿ 14ರ ವ್ಯಾಲೆಂಟೈನ್ ಡೇ ದಿನದಂದು ನತಾಶಾಗೆ ಕೊನೆಯ ಬಾರಿಗೆ ಪಾಂಡ್ಯ ವಿಶ್ ಮಾಡಿದ್ದರು. ಇದಾದ ಬಳಿಕ ನತಾಶಾ ಹಾಕಿದ ಯಾವೊಂದು ಪೋಸ್ಟ್‌ಗೂ ಪಾಂಡ್ಯ ರಿಪ್ಲೇ ನೀಡದಿರುವುದು ಸಾಕಷ್ಟು ಅನುಮಾನಕ್ಕೀಡಾಗುವಂತೆ ಮಾಡಿದೆ.

click me!