ಐಪಿಎಲ್ ಟೂರ್ನಿಯಲ್ಲಿ ಗರ್ಲ್‌ಫ್ರೆಂಡ್ ಜೊತೆ ಸುತ್ತಾಡುವ, ಪ್ರತಿ ಪಂದ್ಯಕ್ಕೆ, ಹೊಟೆಲ್‌ಗೆ ತೆರಳುವಾಗ ಜೊತೆಯಲ್ಲಿ ಕರೆದುಕೊಂಡು ಹೋಗುವ ಪದ್ಧತಿಗೆ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿದೆ.
ಐಪಿಎಲ್ ಟೂರ್ನಿಯಲ್ಲಿ ಹಲವು ಕಟ್ಟು ನಿಟ್ಟಿನ ನಿಯಮ ಜಾರಿಯಲ್ಲಿದೆ. ಆದರೆ ಆಟಗಾರರು ತಮ್ಮ ಗರ್ಲ್‌ಫ್ರೆಂಡ್ ಕರೆದುಕೊಂಡೇ ಪಂದ್ಯ,ಹೊಟೆಲ್ ಸೇರಿದಂತೆ ಎಲ್ಲೆಡೆ ಸುತ್ತಾಡುವ ಪದ್ಧತಿ ಇದೆ. ಇಷ್ಟು ಐಪಿಎಲ್ ಟೂರ್ನಿಯಲ್ಲಿ ಗರ್ಲ್‌ಫ್ರೆಂಡ್ ಟಾರ್ಗೆಟ್ ಆಗಿರಲಿಲ್ಲ. ಆದರೆ ಈ ಬಾರಿ ಬಿಸಿಸಿಐ ಗರ್ಲ್‌ಫ್ರಂಡ್ ಕಲ್ಚರ್‌ಗೆ ಬ್ರೇಕ್ ಹಾಕಲು ಮುಂದಾಗಿದೆ.
25
ಬಿಸಿಸಿಐಗೆ ಮುಜುಗರ
ಐಪಿಎಲ್ ಆಟಗಾರರ ಪೈಕಿ ಹಲವರು ತಮ್ಮ ತಮ್ಮ ಗರ್ಲ್‌ಫ್ರೆಂಡ್ ಜೊತೆ ಟೀಂ ಬಸ್ ಹತ್ತುತ್ತಿದ್ದಾರೆ. ಇತ್ತ ಡಗೌಟ್‌ನಲ್ಲಿ ಪೋನ್ ಬಳಕೆ, ಡ್ರೆಸ್ಸಿಂಗ್ ರೂಂನಲ್ಲಿ ಸಿಗರೇಟು ಘಟನೆಗಳಿಂದ ಬಿಸಿಸಿಐ ತೀವ್ರ ಮುಜುಗರಕ್ಕೆ ಈಡಾಗಿದೆ. 2023ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಳಿಕ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದರೂ ಮತ್ತೆ ಮತ್ತೆ ಕೆಲ ಘಟನೆಗಳು ಬಿಸಿಸಿಐ ಆತಂಕ ಹೆಚ್ಚಿಸುತ್ತಿದೆ.
35
ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಪ್ಲೇಯರ್ಸ್
ಹಾರ್ದಿಕ್ ಪಾಂಡ್ಯ, ಅರ್ಶದೀಪ್ ಸಿಂಗ್, ಇಶಾನ್ ಕಿಶನ್ ಹಾಗೂ ಯಶಸ್ವಿ ಜೈಸ್ವಾಲ್ ಸೇರಿದಂತೆ ಕೆಲ ಕ್ರಿಕೆಟಿಗರು ಗರ್ಲ್‌ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ. ಈ ಪೈಕಿ ಹಾರ್ದಿಕ್ ಪಾಂಡ್ಯ ತನ್ನ ಗರ್ಲ್‌ಫ್ರೆಂಡ್ ಜೊತೆಗಿನ ಸುತ್ತಾಟ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು.
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಗರ್ಲ್‌ಫ್ರೆಂಡ್ ಮಹಿಕಾ ಆಗಮಿಸಲು ವಿಳಂಬವಾದ ಕಾರಣ ಅರ್ಧ ಗಂಟೆಗೂ ಹೆಚ್ಟು ಕಾಲ ಟೀಂ ಬಸ್ ನಿಲ್ಲಿಸಲಾಗಿತ್ತು. ಇದು ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೇ ಘಟನೆ ಬಿಸಿಸಿಐಗೂ ಇರಿಸು ಮುರಿಸು ತಂದಿತ್ತು. ಹೀಗಾಗಿ ಗರ್ಲ್‌ಫ್ರೆಂಡ್ ಸಂಸ್ಕೃತಿಗೆ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿದೆ.
55
2027ರ ಐಪಿಎಲ್ ಟೂರ್ನಿಯಿಂದ ಕಠಿಣ ನಿಯಮ
ಈಗಲೇ ಕಠಿಣ ನಿಯಮ ಬೇಕು ಎಂದು ಬಿಸಿಸಿಐನ ಹಲವರು ಆಗ್ರಹಿಸಿದ್ದಾರೆ. ವಾರ್ನಿಂಗ್ ನೀಡುವುದಕ್ಕಿಂತ ನಿಯಮ ಮಾಡಿದರೆ ಒಳಿತು ಎಂದಿದ್ದಾರೆ. ಹೊಸ ನಿಯಮದಲ್ಲಿ ಗರ್ಲ್‌ಫ್ರೆಂಡ್ ಮಾತ್ರವಲ್ಲ, ಜೊತೆಗೆ ಡ್ರೆಸ್ಸಿಂಗ್ ರೂಂನಲ್ಲಿ ನಿಯಮ ಬಾಹಿರವಾಗಿ ಸಿಗರೇಟು, ಫೋನ್ ಬಳಕೆ ಸೇರಿದಂತೆ ಈ ನಿಟ್ಟಿನಲ್ಲೂ ಬಿಸಿಸಿಐ ಕಠಿಣ ನಿಯಮ ಜಾರಿಗೊಳಿಸುತ್ತಿದೆ. 2027ರಿಂದ ಹೊಸ ನಿಯಮ ಜಾರಿಯಾಗುವ ಸಾಧ್ಯತೆ ಇದೆ.
2027ರ ಐಪಿಎಲ್ ಟೂರ್ನಿಯಿಂದ ಕಠಿಣ ನಿಯಮ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.