Jitesh Sharma on Vaibhav Suryavanshi : ಈ ಹಿಂದೆಯೇ ಕ್ರಿಕೆಟರ್ ವೈಭವ್ ಸೂರ್ಯವಂಶಿಯನ್ನು ಅನ್‌ಫ್ರೊಫೆಶನಲ್ ಎಂದು ಕರೆದಿದ್ದ ಜಿತೇಶ್ ಶರ್ಮಾ ಈಗ ಕಾರಣವನ್ನು ಕೂಡ ಬಿಚ್ಚಿಟ್ಟಿದ್ದಾರೆ. 15 ವರ್ಷದ ವೈಭವ್ ಸೂರ್ಯವಂಶಿ ಈಗಾಗಲೇ ಐಪಿಎಲ್ ಲೋಕದಲ್ಲಿ ಕಮಾಲ್ ಮಾಡುತ್ತಿದ್ದಾರೆ.
ಮಿಸ್ಟರ್ ನಾಗ್ ( ದಾನೀಶ್ ಸೇಠ್ ) ಅವರು ಆರ್‌ಸಿಬಿ ಟೀಂ ಜೊತೆ ಸಂದರ್ಶನ ಮಾಡುತ್ತಿರುತ್ತಾರೆ. ಆರ್‌ಸಿಬಿ ಇನ್‌ಸೈಡ್ ಶೋನ ಇತ್ತೀಚಿನ ಎಪಿಸೋಡ್‌ನಲ್ಲಿ ಟೀಮ್ ಇಂಡಿಯಾ, ಆರ್‌ಸಿಬಿ ಆಟಗಾರ ಜಿತೇಶ್ ಶರ್ಮಾ ಅವರು ವೈಭವ್ ಸೂರ್ಯವಂಶಿ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆಯೇ ವೈಭವ್ ಅವರನ್ನು 'ಅನ್‌ಪ್ರೊಫೆಶನಲ್' ಎಂದು ಕರೆದಿದ್ದ ಜಿತೇಶ್, ಈಗ ಮತ್ತೆ ಹಾಗೆ ಹೇಳಿದ್ದಾರೆ.
25
ಸಿಕ್ಸ್, ಫೋರ್ ಬಾರಿಸುತ್ತಿರೋ ವೈಭವ್
ವೈಭವ್ ಸೂರ್ಯವಂಶಿ ಅವರು ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್‌ನಲ್ಲಿ ಆಟ ಆಡುತ್ತಿದ್ದಾರೆ. ಈ ವೇಳೆ ಮ್ಯಾಚ್‌ವೊಂದರಲ್ಲಿ 103 ರನ್ ಬಾರಿಸಿದ್ದರು, ಅಷ್ಟೇ ಅಲ್ಲದೆ ಅತಿ ಹೆಚ್ಚು ಸಿಕ್ಸ್, ಫೋರ್ ಬಾರಿಸುತ್ತಿದ್ದಾರೆ.
35
ವೈಭವ್ ಸೂರ್ಯವಂಶಿ
ಈ ಹಿಂದೆ ಕ್ರಿಕೆಟ್ ಲೋಕದ ದಿಗ್ಗಜ ಎಬಿ ಡಿವಿಲಿಯರ್ಸ್ ಅವರು "ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಯಾರು?" ಎಂದು ಕೇಳಿದಾಗ ಜಿತೇಶ್ ತಕ್ಷಣವೇ ವೈಭವ್ ಸೂರ್ಯವಂಶಿ ಎಂದು ಹೇಳಿದ್ದಾರೆ. ವೈಭವ್ ಸೂರ್ಯವಂಶಿ ಬ್ಯಾಟಿಂಗ್ ತಂತ್ರ, ಕಠಿಣ ಪರಿಶ್ರಮದ ಬಗ್ಗೆ ಮಾತನಾಡಿದ್ದಾರೆ. ಮೂರೂ ಫಾರ್ಮ್ಯಾಟ್‌ಗಳಲ್ಲಿ ವೈಭವ್ ಸೂರ್ಯವಂಶಿ ಅವರು ಕ್ರಿಕೆಟ್ ಜಗತ್ತನ್ನು ಆಳಬಲ್ಲರು ಎಂದು ಹೇಳಿದ್ದಾರೆ.
ವೈಭವ್ ಅವರನ್ನು 'ಅನ್‌ಪ್ರೊಫೆಶನಲ್' ಎಂದಮಾತ್ರಕ್ಕೆ ನೆಗೆಟಿವ್ ಅಲ್ಲ, ಬದಲಿಗೆ ಅದು ಅವರ ಮುಗ್ಧತೆಯಂತೆ. ವೈಭವ್‌ಗೆ ಈಗ ಕೇವಲ 15 ವರ್ಷ. ಜಗತ್ತು ಅವರನ್ನು ದೊಡ್ಡ ಕ್ರಿಕೆಟಿಗ ಎಂದು ನೋಡಿದರೂ, ವೈಭವ್ ಮಾತ್ರ ಚಿಕ್ಕ ಹುಡುಗ. ನನ್ನ ರೂಮ್‌ನಲ್ಲಿ ಅವನು ಐಸ್‌ಕ್ರೀಂ ತಿನ್ನುತ್ತಿರುತ್ತಾನೆ. ನನ್ನ ಜೊತೆ ಅವನು ಸಿನಿಮಾ ನೋಡುತ್ತಾನೆ, ಹರಟೆ ಹೊಡೆಯುತ್ತಾನೆ. ಆಗ ನಾನು ಅವನನ್ನು ಜಡ್ಜ್ ಮಾಡೋದಿಲ್ಲ" ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.
55
ವೈಭವ್ ಸೂರ್ಯವಂಶಿ ಸ್ವಂತ ತಮ್ಮ ಇದ್ದಹಾಗೆ
ನನ್ನ ಮಕ್ಕಳ ಜೊತೆ ಆಡುತ್ತಾನೆ, ಹೆಂಡ್ತಿ ಬಳಿ ಮಾತನಾಡುತ್ತಾನೆ. ಹೀಗಾಗಿ ನಾನು ಅವನಿಗೆ ಜಿಮ್ ಮಾಡು, ಡಯೆಟ್ ಮಾಡು ಎಂದು ಹೇಳೋದಿಲ್ಲ. ಸಿನಿಮಾ ನೋಡು, ಕ್ರಿಕೆಟ್ ಆಡು ಎಂದು ಹೇಳ್ತೀನಿ” ಎಂದಿದ್ದಾರೆ. ಜಿತೇಶ್ ಶರ್ಮಾ ಹೇಳುವಂತೆ, ನನಗೆ ವೈಭವ್ ಸೂರ್ಯವಂಶಿ ಸ್ವಂತ ತಮ್ಮ ಇದ್ದಂತೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.