ಪಂಜಾಬ್ ಕಿಂಗ್ಸ್ ತಂಡದ ಜೊತೆ ಪ್ರೀತಿ ಜಿಂಟಾ ಟ್ರಾವೆಲ್, ಎಲ್ಲರ ಗಮನಸೆಳೆದ ಹೊಸ ಲುಕ್

Published : May 01, 2026, 08:03 PM IST

ಪಂಜಾಬ್ ಕಿಂಗ್ಸ್ ತಂಡದ ಜೊತೆ ಪ್ರೀತಿ ಜಿಂಟಾ ಟ್ರಾವೆಲ್, ಎಲ್ಲರ ಗಮನಸೆಳೆದ ಹೊಸ ಲುಕ್, ಐಪಿಎಲ್ 2026ರಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಮಾಲಕಿ ಪ್ರೀತಿ ಜಿಂಟಾ ಇದೀಗ ಭಾರಿ ಸಂಚಲನ ಸೃಷ್ಟಿಸಿದ್ದಾರೆ.

PREV
15
ಮೊದಲ ಸ್ಥಾನದಲ್ಲಿರುವ ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್

ಐಪಿಎಲ್ 2026 ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಸೋಲು ಕಂಡಿದೆ. ಆಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಈ ಬಾರಿಯ ಟ್ರೋಫಿ ಗೆಲ್ಲೋ ನೆಚ್ಚಿನ ತಂಡಗಳ ಪೈಕಿ ಮುಂಚೂಣಿಯಲ್ಲಿದೆ. ಪಂಜಾಬ್ ಕಿಂಗ್ಸ್ ಆಟಗಾರರಿಗೆ ಸಂಪೂರ್ಣ ಬೆಂಬಲ ನೀಡುತ್ತಾ , ಪ್ರತಿ ಪಂದ್ಯದಲ್ಲಿ ಖುದ್ದು ಮೈದಾನದಲ್ಲಿ ಹಾಜರಿದ್ದು ಹುರಿದುಂಬಿಸುವ ಪ್ರೀತಿ ಜಿಂಟಾ ಇದೀಗ ಹೊಸ ಲುಕ್ ಮೂಲಕ ಗಮನಸೆಳೆದಿದ್ದಾರೆ.

25
ಪ್ರೀತಿ ಜಿಂಟಾ ಟ್ರಾವೆಲ್ ಔಟ್‌ಫಿಟ್

ಪಂಜಾಬ್ ಕಿಂಗ್ಸ್ ಮಾಲಕಿ ಪ್ರೀತಿ ಜಿಂಟಾ ಪಿಂಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಆಟಗಾರರ ಜೊತೆ ಜಿಂಟಾ ಟ್ರಾವೆಲ್ ಮಾಡಿದ್ದಾರೆ. ಈ ವೇಳೆ ಹೊಸ ಲುಕ್ ಗಮನಸೆಳೆದಿದೆ. ಅಭಿಮಾನಿಗಳು ಪ್ರೀತಿ ಜಿಂಟಾ ಉತ್ಸಾಹ, ಸ್ಟೈಲ್ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

35
ಪಂಜಾಬ್ ಕಿಂಗ್ಸ್ ಆಟಗಾರರಿಗೆ ವೈಟ್ ಟಿಶರ್ಟ್

ಪಂಜಾಬ್ ಕಿಂಗ್ಸ್ ಆಟಗಾರರಿಗೆ ಟ್ರಾವೆಲ್ ಔಟ್ ಫಿಟ್ ವೈಟ್ ಟೀ ಶರ್ಟ್ ನೀಡಲಾಗಿದೆ. ಜೊತೆಗೆ ಬ್ಲಾಕ್ ಪಾಂಟ್ ನೀಡಲಾಗಿದೆ. ಪಂಜಾಬ್ ಕಿಕೆಟರ್ಸ್‌ ಜೊತೆ ಎಲ್ಲಾ ಪಂದ್ಯದಳಲ್ಲಿ ಪ್ರೀತಿ ಜಿಂಟಾ ಕೂಡ ಟ್ರಾವೆಲ್ ಮಾಡುತ್ತಾರೆ. ಪ್ರತಿ ಬಾರಿ ಜಿಂಟಾ ಆಕರ್ಷಕ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.

45
6ರಲ್ಲಿ ಗೆಲುವು, ಮೊದಲ ಸ್ಥಾನದಲ್ಲಿ ಪಂಜಾಬ್

ಪಂಜಾಬ್ ಕಿಂಗ್ಸ್ ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿದೆ. ಒಂದು ಪಂದ್ಯ ಫಲಿತಾಂಶ ಕಾಣದೇ ರದ್ದಾಗಿದ್ದರೆ, ಮತ್ತೊಂದು ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಖಚತಪಡಿಸಿಕೊಳ್ಳುವ ತವಕದಲ್ಲಿದೆ.

55
ಕಳೆದ ಬಾರಿಯ ಚಾಂಪಿಯನ್

ಕಳೆದ ಬಾರಿ ಐಪಿಎಲ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿರುವ ಪಂಜಾಬ್ ಕಿಂಗ್ಸ್, ಮೊದಲ ಟ್ರೋಫಿ ಗೆಲುವಿನ ಕನಸಿನಲ್ಲಿದೆ. ಇದಕ್ಕೆ ತಕ್ಕಂತೆ ಪಂಜಾಬ್ ಕಿಂಗ್ಸ್ ಉತ್ತಮ ಪ್ರದರ್ಶನ ನೀಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಈ ಬಾರಿ ಟ್ರೋಫಿ ಗೆಲ್ಲುತ್ತಾ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿದೆ.

ಕಳೆದ ಬಾರಿಯ ಚಾಂಪಿಯನ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories