ಕೃನಾಲ್ ಪಾಂಡ್ಯ ಲಖನೌ ಪಾಲು
ಕೃನಾಲ್ ಪಾಂಡ್ಯ ಅವರು ಭಾರತೀಯ ಕ್ರಿಕೆಟ್‌ನ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ, ದಾಖಲೆಯ ಐದು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ವಿಜೇತ ಮುಂಬೈ ಇಂಡಿಯನ್ಸ್ ಪರ ತಮ್ಮ ಸ್ಥಿರ ಪ್ರದರ್ಶನದ ಮೂಲಕ ತಮ್ಮ ಮನ್ನಣೆಯನ್ನು ಗಳಿಸಿದ್ದಾರೆ. ಆದಾಗ್ಯೂ, ಈ ಬಾರಿ ಅವರು ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ
ಮುಂಬೈ ಇಂಡಿಯನ್ಸ್ ಪರ ಮಿಂಚಿದ್ದ ಕೃನಾಲ್
ಕೃನಾಲ್ ಅವರ ಇಲ್ಲಿಯವರೆಗಿನ ಐಪಿಎಲ್ ಅಂಕಿಅಂಶಗಳ ಹೀಗಿದೆ. ಮಂಬೈ ಇಂಡಿಯನ್ಸ್ ಪರ ಅವರು 72 ಇನ್ನಿಂಗ್ಸ್‌ಗಳಲ್ಲಿ 22.41 ರ ಸಾಧಾರಣ ಸರಾಸರಿ ಮತ್ತು 138.55 ರ ಸ್ಟ್ರೈಕ್ ರೇಟ್‌ನಲ್ಲಿ 1,143 ರನ್ ಗಳಿಸಿದ್ದಾರೆ, ಇದರಲ್ಲಿ ಅರ್ಧ ಶತಕ ಮತ್ತು 86 ರ ಗರಿಷ್ಠ ಸ್ಕೋರ್ ಸೇರಿದೆ.
ಉತ್ತಮ ಆಲ್ರೌಂಡರ್ ಕೃನಾಲ್
ಕೃನಾಲ್ ಪಾಂಡ್ಯ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಅವರ ಬೌಲಿಂಗ್‌ಗೆ ಸಂಬಂಧಿಸಿದಂತೆ, ಸ್ಪಿನ್ನರ್ ಆಗಿ ಅವರು 7.37 ರ ಎಕಾನಮಿಯಲ್ಲಿ 51 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರ ಬೆಸ್ಟ್ ಬೌಲಿಂಗ್ 3/14 ಆಗಿದೆ.
ಐಪಿಎಲ್‌ನಲ್ಲಿ ಮುಂಬೈ ಪರ 3 ಟ್ರೋಫಿ
ಅವರ ವೈಯಕ್ತಿಕ ಐಪಿಎಲ್ ಸಾಧನೆ ಅಷ್ಟು ಪ್ರಭಾವಶಾಲಿಯಾಗಿಲ್ಲ. ಆದಾರೆ, ಮುಂಬೈ ಇಂಡಿಯನ್ಸ್ ತಂಡದ ಪರ ಕೃನಾಲ್ ಕೊಡುಗೆ ಮಹತ್ವದ್ದಾಗಿದೆ. ಒಟ್ಟಾರೆ ತಂಡವಾಗಿ ಕೃನಾಲ್ ಪಾಂಡ್ಯ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಅವರ ಟಿ20 ಅಂಕಿ ಅಂಶಗಳು ಹೀಗಿದೆ 111 ಇನ್ನಿಂಗ್ಸ್‌ಗಳಲ್ಲಿ, ಅವರು 22.18 ಮತ್ತು 134.63 ರಲ್ಲಿ 1,753 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧ ಶತಕಗಳು ಮತ್ತು 86 ಗರಿಷ್ಠ ಸ್ಕೋರ್ ಸೇರಿದೆ
ಉಪಯುಕ್ತ ಆಲ್ರೌಂಡರ್ ಕೃನಾಲ್
ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿ 7.33 ಎಕಾನಮಿಯಲ್ಲಿ 101 ವಿಕೆಟ್‌ಗಳಿಸಿದ್ದಾರೆ, ಇದರಲ್ಲಿ ಒಂದೆರಡು ನಾಲ್ಕು ವಿಕೆಟ್ ಪಡೆದಿದ್ದಾರೆ ಮತ್ತು 4/15 ಬೆಸ್ಟ್ ಸಾಧನೆಯಾಗಿದೆ. ಅವರು ಹೆಚ್ಚಾಗಿ ಐದು-ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ.
ಮ್ಯಾಚ್ ಫಿನಿಶರ್ ಕೃನಾಲ್
ಐಪಿಎಲ್ ಫಿನಿಶರ್‌ಗಳಿಗೆ ವರದಾನವಾಗಿರುವುದರಿಂದ ಕೃನಾಲ್ ಪಾಂಡ್ಯ ಬ್ಯಾಟ್ ಮೂಲಕ ಸಾಧನೆ ಮಾಡಲು ಹೆಚ್ಚು ಅವಕಾಶವಿದೆ. ಮತ್ತೊಂದೆಡೆ, ಅವರ ಬೌಲಿಂಗ್ ಅನ್ನು ಅವರ ಬ್ಯಾಟಿಂಗ್‌ಗಿಂತ ಉತ್ತಮ ಎಂದುಪರಿಗಣಿಸಬಹುದಾಗಿದೆ.
ಲಖನೌ ಪರ ಮಿಂಚಲು ಕೃನಾಲ್ ರೆಡಿ
ಇನ್ನೂ ಹೊಸ ತಂಡವಾದ Lucknow Super Giants ಫ್ರಾಂಚೈಸಿಗೆ ಇದು ಮೊದಲ ಐಪಿಎಲ್ ಸೀಸನ್ ಆಗಿರುತ್ತದೆ ಮತ್ತು ಈ ಬಾರಿ ಹೆಚ್ಚಿನ ಪಂದ್ಯಗಳನ್ನು ಮುಂಬೈನಲ್ಲಿ ಆಡಲಾಗುತ್ತದೆ. ಮುಂಬೈನಲ್ಲಿ ಕೃನಾಲ್ ಅವರು ಗಣನೀಯ ಸಂಖ್ಯೆಯ ಪಂದ್ಯಗಳನ್ನು ಆಡಿದ್ದಾರೆ. ಹಾಗಾಗಿ ಐಪಿಎಲ್ 2022 ರಲ್ಲಿ ಅವರ ಪಾಲಿಗೆ ಬೆಸ್ಟ್ ಆಗಬಹುದು ಎಂದು ಹೇಳಲಾಗುತ್ತಿದೆ.