1. ಅತಿವೇಗದ ಅರ್ಧಶತಕ: ಕೆ.ಎಲ್. ರಾಹುಲ್
ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ ದಾಖಲೆ ಕನ್ನಡಿಗ ಕೆ.ಎಲ್. ರಾಹುಲ್ ಹೆಸರಿನಲ್ಲಿದೆ. 2018ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ.
(photo Source- Google)
1. ಅತಿವೇಗದ ಅರ್ಧಶತಕ: ಕೆ.ಎಲ್. ರಾಹುಲ್
ರಾಹುಲ್ ಆರಂಭಿನಾಗಿ ಕಣಕ್ಕಿಳಿದಾಗ ಅವರ ಬ್ಯಾಟಿಂಗ್ ನೋಡುವುದೇ ಒಂದು ಸೊಗಸು. ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ದದ ಪಂದ್ಯದಲ್ಲಿ ರಾಹುಲ್ 6 ಬೌಂಡರಿ ಹಾಗೂ 4 ಮನಮೋಹಕ ಸಿಕ್ಸರ್ ಸಹಿತ ಸಿಡಿಲಬ್ಬರದ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ.
2. ಅತಿವೇಗದ ಶತಕ: ಕ್ರಿಸ್ ಗೇಲ್
ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ದಶಕಗಳ ಕಾಲ ಐಪಿಎಲ್‌ನಲ್ಲಿ ಮನೆ ಮಾತಾಗಿದ್ದರು. 2013ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಗೇಲ್ ಚಿನ್ನಸ್ವಾಮಿ ಮೈದಾನದಲ್ಲಿ ರನ್ ಮಳೆ ಹರಿಸುವ ಮೂಲಕ ದಾಖಲೆ ಬರೆದಿದ್ದರು.
2. ಅತಿವೇಗದ ಶತಕ: ಕ್ರಿಸ್ ಗೇಲ್
ಹೌದು, ಪುಣೆ ವಾರಿಯರ್ಸ್ ವಿರುದ್ದದ ಪಂದ್ಯದಲ್ಲಿ ಕ್ರಿಸ್ ಗೇಲ್, ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಇಲ್ಲಿಗೆ ಸುಮ್ಮನಾಗದ ಗೇಲ್, 66 ಎಸೆತಗಳಲ್ಲಿ 175 ರನ್ ಚಚ್ಚಿದ್ದರು. ಇದರಲ್ಲಿ 17 ಮುಗಿಲೆತ್ತರದ ಸಿಕ್ಸರ್‌ಗಳು ಸೇರಿದ್ದವು.
3. ಅತಿವೇಗವಾಗಿ 100 ವಿಕೆಟ್: ಲಸಿತ್ ಮಾಲಿಂಗ
ಐಪಿಎಲ್ ಇತಿಹಾಸದಲ್ಲಿ ಲಂಕಾ ಮೂಲದ ಮುಂಬೈ ಇಂಡಿಯನ್ಸ್ ಬೌಲರ್ ಲಸಿತ್ ಮಾಲಿಂಗ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕರಾರುವಕ್ಕಾದ ಯಾರ್ಕರ್ ಹಾಗೂ ಡೆತ್ ಓವರ್‌ನಲ್ಲಿ ಮಿಂಚಿನ ದಾಳಿ ನಡೆಸುವ ಮೂಲಕ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
3. ಅತಿವೇಗವಾಗಿ 100 ವಿಕೆಟ್: ಲಸಿತ್ ಮಾಲಿಂಗ
ಲಸಿತ್ ಮಾಲಿಂಗ 2013ರಲ್ಲಿ ತಮ್ಮ 70ನೇ ಪಂದ್ಯದಲ್ಲೇ 100 ಬಲಿ ಪಡೆಯುವ ಮೂಲಕ, ಐಪಿಎಲ್ ಇತಿಹಾಸದಲ್ಲಿ ಅತಿವೇಗವಾಗಿ ನೂರು ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಕೀರ್ತಿಗೆ ಮುಂಬೈ ಇಂಡಿಯನ್ಸ್ ಬೌಲರ್ ಪಾತ್ರರಾಗಿದ್ದರು.
4. ವೇಗದ ಬೌಲ್: ಏನ್ರಿಚ್ ನೋಕಿಯ
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಏನ್ರಿಚ್ ನೋಕಿಯ 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಮಾರಕ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬುಗೊಳಿಸಿದ್ದರು.
ವೇಗದ ಬೌಲ್: ಏನ್ರಿಚ್ ನೋಕಿಯ
ಇದೇ ಆವೃತ್ತಿಯಲ್ಲಿ ಏನ್ರಿಚ್ ನೋಕಿಯ, 156.22 ಕಿಲೋ ಮೀಟರ್ ವೇಗದಲ್ಲಿ ಬೌಲ್ ಮಾಡುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ಅತಿವೇಗದ ಬೌಲಿಂಗ್ ಮಾಡಿದ ಆಟಗಾರ ಎನಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಜೋಸ್ ಬಟ್ಲರ್ ಬ್ಯಾಟಿಂಗ್ ಮಾಡುವ ವೇಳೆ ಏನ್ರಿಚ್ ನೋಕಿಯ ಅತಿ ವೇಗದ ಬೌಲಿಂಗ್ ಮಾಡಿದ್ದರು.
ಅತಿವೇಗದ ಚೇಸ್: ಮುಂಬೈ ಇಂಡಿಯನ್ಸ್
ಐಪಿಎಲ್ ಆವೃತ್ತಿಯಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡವು ಅತಿ ವೇಗವಾಗಿ ಗುರಿ ತಲುಪಿದ ತಂಡ ಎನ್ನುವ ದಾಖಲೆಯನ್ನು ಹೊಂದಿದೆ. ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲೇ ಮುಂಬೈ ಈ ಸಾಧನೆ ಮಾಡಿದೆ.
ಅತಿವೇಗದ ಚೇಸ್: ಮುಂಬೈ ಇಂಡಿಯನ್ಸ್
ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ ತಂಡವು ಕೇವಲ 67 ರನ್ ಬಾರಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಕೇವಲ 5.3 ಓವರ್‌ಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದೆ.