ಹೆಂಡತಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ ಮಾಡಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌!

First Published | Jul 24, 2023, 8:15 PM IST

ಆರ್‌ಸಿಬಿ ತಂಡದ ಸ್ಫೋಟಕ ಆಟಗಾರ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಭಾರತೀಯ ಮೂಲದ ವಿನಿ ರಾಮನ್‌ ಅವರನ್ನು ಮದುವೆಯಾಗಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

ಆಸೀಸ್‌ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಪತ್ನಿ ವಿನಿ ರಾಮನ್‌ ಶೀಘ್ರದಲ್ಲಿಯೇ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇತ್ತೀಚೆಗೆ ಗ್ಲೆನ್‌ ಮ್ಯಾಕ್ಸ್‌ವೆಲ್ ಭಾರತೀಯ ಸಂಪ್ರದಾಯದಂತೆ ಪತ್ನಿಯ ಸೀಮಂತ ಮಾಡಿಸಿದ್ದಾರೆ.

ತಮಿಳುನಾಡು ಮೂಲದ ವಿನಿ ರಾಮನ್‌ ಅವರನ್ನು ಗ್ಲೆನ್‌ ಮ್ಯಾಕ್ಸ್‌ವೆಲ್‌ 2022ರ ಮಾರ್ಚ್‌ 27 ರಂದು ವಿವಾಹವಾಗಿದ್ದರು. ಹಿಂದು ಹಾಗೂ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಇವರ ಮದುವೆ ಸಮಾರಂಭ ನಡೆದಿತ್ತು.

Tap to resize

ತಮ್ಮ ಖಾಸಗಿ ಜೀವನವನ್ನು ಹೆಚ್ಚಾಗಿ ಹಂಚಿಕೊಳ್ಳಲು ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ವಿನಿ ರಾಮನ್‌ ಇಬ್ಬರೂ ಬಯಸೋದಿಲ್ಲ. ಆದರೆ, ಮೇ ತಿಂಗಳಲ್ಲಿ ಪತ್ನಿ ಗರ್ಭಿಣಿಯಾಗಿರುವ ಕುರಿತು ಮ್ಯಾಕ್ಸ್‌ವೆಲ್‌ ಮಾಹಿತಿ ನೀಡಿದ್ದರು.

ಇತ್ತೀಚೆಗೆ ಮ್ಯಾಕ್ಸ್‌ವೆಲ್‌, ಪತ್ನಿ ವಿನಿ ರಾಮನ್‌ ಅವರ ಸೀಮಂತ ಸಮಾರಂಭವನ್ನು ಹಿಂದು ಸಂಪ್ರದಾಯದಂತೆ ಮಾಡಿದ್ದಾರೆ. ಇದರ ಫೋಟೋಗಳನ್ನು ವಿನಿ ರಾಮನ್‌ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಅದರೊಂದಿಗೆ ವಿರಾಟ್‌ ಕೊಹ್ಲಿ-ಅನುಶ್ಕಾ ಶರ್ಮ ಅವರ ಪೇರೆಂಟ್ಸ್ ಕ್ಲಬ್‌ಗೆ ಮ್ಯಾಕ್ಸ್‌ವೆಲ್‌ ಕೂಡ ಸೇರ್ಪಡೆಯಾಗಲಿದ್ದಾರೆ. ಸೆಪ್ಟೆಂಬರ್‌ ವೇಳೆಗೆ ಮ್ಯಾಕ್ಸ್‌ವೆಲ್‌ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.

ಕರ್ನಾಟಕದಲ್ಲಿ ಸೀಮಂತ ಸಮಾರಂಭ ಎಂದರೆ, ತಮಿಳುನಾಡಿನಲ್ಲಿ ಇದಕ್ಕೆ  ವಾಲೈಕಾಪ್ಪು ಕಾರ್ಯಕ್ರಮ ಎನ್ನುತ್ತಾರೆ. ಗರ್ಭಿಣಿ ಮಹಿಳೆಗೆ ಸುಖಪ್ರಸವವಾಗಲಿ ಎಂದು ಇತರರು ಹಾರೈಸುವುದರೊಂದಿಗೆ ಹಿರಿಯ ಮಹಿಳೆಯರಿಂದ ಗರ್ಭಿಣಿ ಆಶೀರ್ವಾದವನ್ನೂ ಪಡೆಯುತ್ತಾಳೆ.

ಸಾಂಪ್ರದಾಯಿಕವಾಗಿ ಸೀರೆ ಉಟ್ಟಿರುವ ವಿನಿ ರಾಮನ್‌, ಪತಿ ಮ್ಯಾಕ್ಸ್‌ವೆಲ್‌ ಅವರ ಹಗಲಿಗೆ ಒರಗಿಕೊಂಡು ತೆಗೆದಿರುವ ಸೆಲ್ಫಿ ಚಿತ್ರ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕಾರ್ಯಕ್ರಮದಲ್ಲಿ ತಾವು ಧರಿಸಿರುವ ಬಳೆಗಳು, ಹಿರಿಯ ಮಹಿಳೆಯರು ಅಶೀರ್ವಾದ ಮಾಡುತ್ತಿರುವ ಚಿತ್ರಗಳನ್ನೂ ಕೂಡ ವಿನಿ ರಾಮನ್‌ ಹಂಚಿಕೊಂಡಿದ್ದಾರೆ.

'2023ರ ಸೆಪ್ಟೆಂಬರ್‌ನಲ್ಲಿ ಒಂದು ಕಾಮನಬಿಲ್ಲು ನಮ್ಮ ಬದುಕಿನಲ್ಲಿ ಬರಲಿದೆ ಎಂದು ಘೋಷಣೆ ಮಾಡಲು ನಾನು ಹಾಗೂ ಗ್ಲೆನ್‌ ಭಾವುಕರಾಗಿದ್ದೇವೆ' ಎಂದು ವಿನಿ ರಾಮನ್‌ ತಾವು ಗರ್ಭಿಣಿ ಎಂದು ಘೋಷಿಸುವ ವೇಳೆ ಬರೆದುಕೊಂಡಿದ್ದರು.

ಆರ್‌ಸಿಬಿ ಪ್ಲೇಯರ್‌ ಆಗಿರುವ ಕಾರಣಕ್ಕೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ವಿನಿ ರಾಮನ್‌ ಜೋಡಿಗೆ ಬೆಂಗಳೂರಿನಲ್ಲಿಯೂ ಅಪಾರ ಅಭಿಮಾನಿಗಳಿದ್ದಾರೆ.

Latest Videos

click me!