ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಸೆಲಿಬ್ರಿಟಿ ಜೋಡಿಗಳಲ್ಲಿ ಒಂದು ಎನಿಸಿಕೊಂಡಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ನೀವೆಂದೂ ಎಲ್ಲೂ ಕೇಳಿರದ ತಮ್ಮ ಲವ್ ಸ್ಟೋರಿ ಬಗ್ಗೆ ಚಹಲ್ ಹಾಗೂ ಧನಶ್ರೀ ವರ್ಮಾ ತುಟಿಬಿಚ್ಚಿದ್ದಾರೆ. ಚಹಲ್ ಪ್ರಪೋಸ್ ಅನ್ನು ಧನಶ್ರೀ ಒಪ್ಪಿಕೊಂಡಿದ್ದು ಹೇಗೆ ಎನ್ನುವುದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಲವ್ ಕಂ ಅರೆಂಜ್ ಮ್ಯಾರೇಜ್ ಆಗಿರುವುದು ಗೊತ್ತೇ ಇದೆ. ಆದರೆ ಚಹಲ್ ಹಾಗೂ ಧನಶ್ರೀ ಅವರ ನಡುವಿನ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಬಹುತೇಕ ಮಂದಿಗೆ ಗೊತ್ತಿಲ್ಲ.
212
ಕೋವಿಡ್ ಅಟ್ಟಹಾಸ ಮೆರೆಯುವ ಸಂದರ್ಭದಲ್ಲಿ ಸರ್ಕಾರ ಲಾಕ್‌ಡೌನ್ ಅನೌನ್ಸ್ ಮಾಡಿತು. ಇದರಿಂದಾಗಿ ಸಾಮಾನ್ಯ ವರ್ಗದ ಜನರ ಬದುಕು ಮೂರಬಟ್ಟೆ ಆಗಿದ್ದು ಇತಿಹಾಸ. ಆದರೆ ಇದೇ ಲಾಕ್‌ಡೌನ್ ಚಹಲ್ ಹಾಗೂ ಧನಶ್ರೀ ವರ್ಮಾ ನಡುವೆ ಪ್ರೇಮಾಂಕುರವಾಗಲು ಪ್ರಮುಖ ಅಸ್ತ್ರವಾಯಿತು.
312
ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಕ್ರೀಡಾಚಟುವಟಿಕೆಗಳಿಗೂ ಬ್ರೇಕ್ ಬಿದ್ದಿತ್ತು. ಈ ಸಂದರ್ಭದಲ್ಲಿ ಖಾಲಿ ಕುಳಿತಿದ್ದ ಯುಜುವೇಂದ್ರ ಚಹಲ್, ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದ ಧನಶ್ರೀ ವರ್ಮಾ ಅವರನ್ನು ಪಟಾಯಿಸುವಲ್ಲಿ ಯಶಸ್ವಿಯಾಗಿದ್ದರು.
412
ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಈ ಜೋಡಿಗೆ ಡೇಟಿಂಗ್ ಮಾಡಲು ಅವಕಾಶವೇ ಸಿಗಲಿಲ್ಲ. ಚಹಲ್, ಒಂದು ದಿನ ನನಗೆ ನಿನ್ನ ಜತೆ ಡೇಟ್ ಮಾಡಲು ಬಯಸುವುದಿಲ್ಲ, ನನ್ನನ್ನು ಮದುವೆಯಾಗ್ತೀಯಾ ಎಂದು ನೇರವಾಗಿ ಪ್ರಪೋಸ್ ಮಾಡಿ ಧನಶ್ರೀ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
512
ಸಂದರ್ಶನವೊಂದರಲ್ಲಿ ಈ ಕುರಿತಂತೆ ಮಾತನಾಡಿರುವ ಚಹಲ್, ಲಾಕ್‌ಡೌನ್ ಸಮಯದಲ್ಲಿ ಸುಮ್ಮನೆ ಇದ್ದಾಗ, ನಾಲ್ಕೈದು ಡ್ಯಾನ್ಸ್ ಸ್ಟೆಪ್ಸ್ ಕಲಿಯಬೇಕೆಂದು ನಿರ್ಧರಿಸಿದೆ. ಆಗ ಧನಶ್ರೀ ವರ್ಮಾ ಅವರು ರೀಲ್ಸ್‌ನಲ್ಲಿ ಮಾಡುವ ಡ್ಯಾನ್ಸ್ ನೋಡಿ ನೇರವಾಗಿ ಮೆಸೇಜ್ ಮಾಡಿ ನನಗೆ ಡ್ಯಾನ್ಸ್ ಕ್ಲಾಸ್ ಮಾಡ್ತೀರಾ ಎಂದು ಕೇಳಿದೆ.
612
ಇದಕ್ಕೆ ಒಪ್ಪಿಕೊಂಡ ಆಕೆ ಅಲ್ಲಿಂದ ಆನ್‌ಲೈನ್‌ನಲ್ಲೇ ಡ್ಯಾನ್ಸ್ ಕ್ಲಾಸ್ ಆರಂಭಿಸಿದರು. ಇಲ್ಲಿಂದ ನಮ್ಮ ಪರಿಚಯವಾಯಿತು. ಆರಂಭದ ಕೆಲವು ತಿಂಗಳುಗಳು ನಾವು ಕೇವಲ ಡ್ಯಾನ್ಸ್ ಕುರಿತಂತೆಯೇ ಮಾತನಾಡುತ್ತಿದ್ದೆವು ಎಂದು ಚಹಲ್ ಹೇಳಿದ್ದಾರೆ.
712
ಒಂದು ದಿನ ನಾನು ಧನಶ್ರೀಗೆ ನಿಮಗೇನೋ ಕೇಳಬೇಕು ಎಂದು ಮೆಸೇಜ್ ಮಾಡಿದೆ. ಆ ಬಳಿಕ ನೀವು ಲಾಕ್‌ಡೌನ್‌ನಲ್ಲೂ ಹೇಗೆ ಇಷ್ಟೊಂದು ಖುಷಿಯಾಗಿದ್ದೀರಾ ಎಂದು ಕೇಳಿದೆ. ಇಲ್ಲಿಂದ ನಮ್ಮಿಬ್ಬರು ಮಾತುಕತೆ ಆರಂಭವಾಯಿತು. ನನಗೆ ಧನಶ್ರೀ ಇಷ್ಟವಾಗಿದ್ದಾಳೆ ಎಂದು ನನ್ನ ತಂದೆ-ತಾಯಿಗೆ ಹೇಳಿದೆ ಎಂದು ಚಹಲ್ ವಿವರಿಸಿದ್ದಾರೆ.
812
ಆಗ ಧನಶ್ರೀ, ನಾನು ವಾರದಲ್ಲಿ ಬಹುತೇಕ ದಿನಗಳಲ್ಲಿ ನನ್ನನ್ನು ನಾನು ಬ್ಯುಸಿಯಾಗಿಟ್ಟುಕೊಂಡಿದ್ದೇನೆ, ಆನ್‌ಲೈನ್ ಡ್ಯಾನ್ಸ್ ಕ್ಲಾಸ್ ಮಾಡುತ್ತೇನೆ. ಆದರೆ ಶನಿವಾರ ಮಾತ್ರ ನನ್ನ ಸ್ನೇಹಿತರನ್ನು ಭೇಟಿಯಾಗುತ್ತೇನೆ ಎಂದು ಧನಶ್ರೀ ಹೇಳಿದ್ದಾರೆ.
912
ಆಗ ಚಹಲ್, ಆ ಒಂದು ಶನಿವಾರ ನನಗಾಗಿ ಮೀಸಲಿಡುತ್ತೀಯಾ ಎಂದು ಧನಶ್ರೀ ಬಳಿ ಮನವಿ ಮಾಡಿಕೊಳ್ಳುತ್ತಾರೆ. ಈ ವಿಚಾರವನ್ನು ಧನಶ್ರೀ ವರ್ಮಾ, ತಮ್ಮ ಅಮ್ಮನ ಬಳಿ ಹೇಳಿಕೊಳ್ಳುತ್ತಾರೆ. ಆಗ ಧನಶ್ರೀ ತಾಯಿ, ಶಿಷ್ಯನ ಕಥೆ ಮುಗಿಯಿತು ಬಿಡು ಎಂದು ಮೊದಲ ರಿಯಾಕ್ಷನ್ ನೀಡಿದ್ದಾಗಿ ಹೇಳಿದ್ದಾರೆ.
1012
ನಾನು ಧನಶ್ರೀ ವರ್ಮಾ ಬಳಿ, ನೋಡು ನಾನು ನಿನ್ನ ಜತೆ ಡೇಟಿಂಗ್ ಮಾಡಲು ಬಯಸುವುದಿಲ್ಲ, ನಾನು ನಿನ್ನನ್ನು ಮದುವೆಯಾಗಬೇಕು ಎಂದಿದ್ದೇನೆ ಎಂದು ಚಹಲ್ ಪ್ರಪೋಸ್ ಮಾಡಿದ್ದಾರೆ. ಚಹಲ್ ಡೈರೆಕ್ಟ್ ಪ್ರಪೋಸ್ ಮೆಚ್ಚಿಕೊಂಡ ಧನಶ್ರೀ ವರ್ಮಾ, ಮದುವೆಗೆ ಸಮ್ಮತಿ ನೀಡಿದ್ದಾರೆ.
1112
ನಾನು ಮೊದಲು ಕ್ರಿಕೆಟ್ ನೋಡುತ್ತಿದ್ದೆ, ಆದರೆ ಚಹಲ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ನಾನು ಕ್ರಿಕೆಟ್ ನೋಡುವುದನ್ನು ಬಿಟ್ಟೆ. ಡ್ಯಾನ್ಸ್ ಕ್ಲಾಸ್ ವಿಚಾರವಾಗಿ ಚಹಲ್ ನನಗೆ ಮೆಸೇಜ್ ಮಾಡಿದಾಗ, ಯುಜಿ ಯಾರೆನ್ನುವುದೇ ನನಗೆ ಗೊತ್ತಿರಲಿಲ್ಲ.
1212
ಚಹಲ್ ಅವರಲ್ಲಿ ಡೀಸೆನ್ಸಿ ನನಗೆ ತುಂಬಾ ಇಷ್ಟವಾದ ವಿಚಾರ. ಹಾಗೂ ಅವರು ಡೈರೆಕ್ಟ್ ಆಗಿ ಪ್ರಪೋಸ್ ಮಾಡಿದ್ದು ಇಷ್ಟವಾಯಿತು ಎಂದು ಧನಶ್ರೀ ವರ್ಮಾ ಹೇಳಿದ್ದಾರೆ.