ಧೋನಿ-ತೆಂಡೂಲ್ಕರ್‌ : ಸರ್ಕಾರಿ ಅಧಿಕಾರದಲ್ಲಿರುವ ಕ್ರಿಕೆಟಿಗರು!

First Published Sep 28, 2020, 4:48 PM IST

ಕ್ರಿಕೆಟಿಗರು ನಿಸ್ಸಂದೇಹವಾಗಿ ತಮ್ಮ ಆಟಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ  ಕೆಲವು ಟಾಪ್‌  ಕ್ರಿಕೆಟಿಗರು ಬೇರೆ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಹೊಂದಿದ್ದಾರೆ.  ಅದರಲ್ಲಿ  ಕೆಲವರು ಸರ್ಕಾರಿ ಉದ್ಯೋಗಗಳಲ್ಲಿ ಉನ್ನತ ಸ್ಥಾನ ಸಹ ಗಳಿಸಿದ್ದಾರೆ. ಗವರ್ನಮೆಂಟ್‌ ಆಫೀಯಲ್‌ ಆಗಿರುವ ಭಾರತೀಯ  ಕ್ರಿಕೆಟಿಗರು ಯಾರೆಂದು  ಗೆಸ್‌ ಮಾಡಿ.

ಭಾರತೀಯ ಕ್ರಿಕೆಟಿಗರ ವಿಷಯಕ್ಕೆ ಬಂದರೆ, ತಮ್ಮ ಕ್ರೀಡೆಯ ಬಗ್ಗೆ ಹೆಚ್ಚು ಶ್ರದ್ಧೆ ಹೊಂದಿದ್ದಾರೆ. ಅದು ದೇಶೀಯ ಅಥವಾ ಅಂತರರಾಷ್ಟ್ರೀಯ ಮ್ಯಾಚ್‌ ಆಗಿರಬಹುದು. ಆದರೆ, ಕೆಲವರು ತಮ್ಮನ್ನು ಕ್ರಿಕೆಟ್‌ಗೆ ಮಾತ್ರ ಸೀಮಿತಗೊಳಿಸಿ ಕೊಂಡಿಲ್ಲ.
undefined
ಹಲವಾರು ಭಾರತೀಯ ಕ್ರಿಕೆಟಿಗರು ಕ್ರಿಕೆಟ್‌ನ್ನು ಹೊರತು ಪಡೆಸಿ ಖಾಸಗಿ ಮತ್ತು ಸರ್ಕಾರಿದ ಉದ್ಯೋಗಗಳಲ್ಲಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
undefined
ಸರ್ಕಾರದ ಗೌರವಾನ್ವಿತ ಸ್ಥಾನಗಳನ್ನು ಗಳಿಸಿರುವ ಕೆಲವು ಪ್ರಮುಖ ಕ್ರಿಕೆಟಿಗರು ಯಾರು ನೋಡೋಣ.
undefined
ಎಂ.ಎಸ್.ಧೋನಿ (ಲೆಫ್ಟಿನೆಂಟ್ ಕರ್ನಲ್, ಇಂಡಿಯನ್ ಟೆರಿಟೋರಿಯಲ್ ಆರ್ಮಿ):ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಇದ್ದಾರೆ. ಕ್ರಿಕೆಟಿಗನಾಗಿ ಯಾ ನಾಯಕನಾಗಿ ಅವರು ಸಾಕಷ್ಟು ದಾಖಲೆಗಳನ್ನು ಹೊಂದಿದ್ದಾರೆ, ಎಲ್ಲಾ ಪ್ರಮುಖ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತಕ್ಕೆ ಯಶಸ್ಸು ತಂದು ಕೊಟ್ಟಿದ್ದಾರೆ. ಜೊತೆಗೆ ಟೆಸ್ಟ್‌ನಲ್ಲಿ ಪ್ರಥಮ ಸ್ಥಾನಕ್ಕೆ ತಲುಪಿದ್ದರು. ಅವರ ಯಶಸ್ಸಿನ ಕಾರಣದಿಂದಾಗಿ, ಅವರಿಗೆ 2011 ರಲ್ಲಿ ಭಾರತೀಯ ಟೆರಿಟೋರಿಯಲ್ ಆರ್ಮಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯನ್ನು ನೀಡಿತು. ಕಪಿಲ್ ದೇವ್ ನಂತರ ಶ್ರೇಯಾಂಕವನ್ನು ಗಳಿಸಿದ ಎರಡನೇ ಕ್ರಿಕೆಟಿಗ ಅವರು ಮಾತ್ರ.
undefined
ಸಚಿನ್ ತೆಂಡೂಲ್ಕರ್ (ಗ್ರೂಪ್ ಕ್ಯಾಪ್ಟನ್, ಇಂಡಿಯನ್‌ ಏರ್‌ ಫೋರ್ಸ್‌):ವಿಶ್ವ ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳನ್ನು ಹೊಂದಿರುವ ಸಚ್ಚಿನ್‌ ಗಾಡ್‌ ಅಫ್‌ ಕ್ರಿಕೆಟ್‌ ಎಂದೇ ಫೇಮಸ್‌. 2011 ರ ಐಸಿಸಿ ವಿಶ್ವಕಪ್ ಗೆಲುವಿಗೆ ಭಾರತವನ್ನು ಮುನ್ನಡೆಸುವಲ್ಲಿ ಅವರೂ ದೊಡ್ಡ ಪಾತ್ರ ವಹಿಸಿದ್ದರು. ಖ್ಯಾತ ಕ್ರಿಕೆಟಿಗರಾಗಿರುವ ಇವರಿಗೆ 2010 ರಲ್ಲಿ ಭಾರತೀಯ ವಾಯುಪಡೆಯಿಂದ ಗ್ರೂಪ್ ಕ್ಯಾಪ್ಟನ್ ಗೌರವ ಶ್ರೇಣಿಯನ್ನು ನೀಡಲಾಯಿತು. ಅಲ್ಲದೆ, ಅವರು ರಾಜ್ಯಸಭೆಯ ಸದಸ್ಯ ) ಕೂಡ ಆಗಿದ್ದಾರೆ.
undefined
ಯುಜ್ವೇಂದ್ರ ಚಹಲ್ (ಆದಾಯ ತೆರಿಗೆ ಅಧಿಕಾರಿ): ಚಾಹಲ್ ಭಾರತೀಯ ಕ್ರಿಕೆಟ್‌ನ ಪರಿಣಾಮಕಾರಿ ಸ್ಪಿನ್ನರ್‌ಗಳಲ್ಲಿ ಒಬ್ಬರು.ವಿಶೇಷವಾಗಿ ಸೀಮಿತ ಓವರ್‌ಗಳಲ್ಲಿ ಭಾರತದ ಸ್ಥಿರ ಆಟಗಾರನಾಗಿರುವ ಇವರು 2018 ರಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಅಧಿಕಾರಿ ಹುದ್ದೆ ಗಳಿಸಿದ್ದಾರೆ.
undefined
ಕೆ.ಎಲ್.ರಾಹುಲ್ (ಅಸಿಸ್ಟೆಂಟ್ ಮ್ಯಾನೇಜರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ):ರಾಹುಲ್‌ ಪ್ರಸ್ತುತ ರಿಸರ್ವ್ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್‌ ಹುದ್ದೆಯನ್ನು ಹೊಂದಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಸತತ ಸಾಧನೆಯಿಂದಾಗಿ, 2018 ರಲ್ಲಿ ಆಗಿನ ಆರ್‌ಬಿಐ ಗವರ್ನರ್ ಎಸ್‌ಎಸ್ ಮುಂಧ್ರಾ ಈ ಹುದ್ದೆಗೆ ರಾಹುಲ್‌ ಅವರನ್ನು ಶಿಫಾರಸು ಮಾಡಿದ್ದರು.
undefined
ಉಮೇಶ್ ಯಾದವ್ :ರಾಹುಲ್ ಜೊತೆಗೆ, ಅವರ ಟೆಸ್ಟ್ ತಂಡದ ಸಹ ಆಟಗಾರ ಉಮೇಶ್ ಯಾದವ್ ಕೂಡ ರಿಸರ್ವ್ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್‌ ಹುದ್ದೆ ಅಲಂಕರಿಸಿದ್ದಾರೆ.
undefined
ಜೋಗಿಂದರ್ ಶರ್ಮಾ (ಡಿಎಸ್ಪಿ, ಹರಿಯಾಣ): 2007 ರ ಐಸಿಸಿ ವಿಶ್ವ ಟಿ 20 ಫೈನಲ್ ಪಂದ್ಯದ ಅಂತಿಮ ಓವರ್ ಬೌಲಿಂಗ್ ಮಾಡಿ ಮಿಸ್ಬಾ-ಉಲ್-ಹಕ್ ಅವರನ್ನು ಔಟ್ ಮಾಡಿ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಅವಕಾಶ ಮಾಡಿಕೊಟ್ಟ ಜೋಗಿಂದರ್ ಶರ್ಮಾ ಫ್ಯಾನ್ಸ್‌ ಫೇವರೇಟ್‌. ಹರಿಯಾಣದಲ್ಲಿ ತಕ್ಷಣವೇ ಅವರಿಗೆ ಪೊಲೀಸ್ ಡಿಎಸ್ಪಿಹುದ್ದೆ ನೀಡಲಾಯಿತು.ಪ್ರಸ್ತುತ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಶರ್ಮಾ ಕುರುಕ್ಷೇತ್ರ ಜಿಲ್ಲೆಯ ಪೆಹೋವಾ ಪ್ರದೇಶದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
undefined
click me!