ಮೊಹಮ್ಮದ್ ಅಜರುದ್ದೀನ್ - ದಿನೇಶ್ ಕಾರ್ತಿಕ್ : ಮರು ಮದುವೆಯಾದ ಕ್ರಿಕೆಟಿಗರು

First Published | Sep 27, 2020, 2:52 PM IST

ದಿನೇಶ್ ಕಾರ್ತಿಕ್ ತನ್ನ ಮಾಜಿ ಪತ್ನಿಯಂದ ಮೋಸ ಹೋದರು . ಆಕೆ  ಭಾರತೀಯ ತಂಡದ ಆಟಗಾರ ಮುರಳಿ ವಿಜಯ್  ಅವರನ್ನು ಮದುವೆಯಾದರು.  ಮೊಹಮ್ಮದ್ ಅಜರುದ್ದೀನ್‌ರ  ವಿವಾದಗಳಿಗೇನು ಕಡಿಮೆ ಇಲ್ಲ,  ಬಾಲಿವುಡ್ ನಟಿಯನ್ನು ಮದುವೆಯಾಗಲು ತನ್ನ ಮೊದಲ ಹೆಂಡತಿಗೆ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರು. ಹೀಗೆ ಮರುಮದುವೆಯಾದ ಕೆಲವು ಕ್ರಿಕೆಟರ್ಸ್‌ ಇಲ್ಲಿದ್ದಾರೆ.

ಭಾರತೀಯ ಕ್ರಿಕೆಟಿಗರು ಕೆಲವರು ಬಾಲಿವುಡ್ ನಟಿಯರು ಸೇರಿದಂತೆ ಸೆಲೆಬ್ರೆಟಿಗಳನ್ನು ಮದುವೆಯಾಗಿದ್ದಾರೆ.
ಆದರೆ ಎಲ್ಲಾ ಕ್ರಿಕೆಟಿಗರಿಗೂ ಪರ್ಫೆಕ್ಟ್‌ ದಾಂಪತ್ಯ ಜೀವನವನ್ನು ಹೊಂದುವ ಆದೃ‍ಷ್ಟ ಇರುವುದಿಲ್ಲ . ಕೆಲವರು ಯಶಸ್ಸನ್ನು ಕಂಡುಕೊಳ್ಳಲು ಎರಡನೇ ಬಾರಿಗೆ ಮದುವೆಯಾಗಿದ್ದಾರೆ. ಈ ಕ್ರಿಕೆಟಿಗರಲ್ಲಿ ಕೆಲವು ಪಾಕಿಸ್ತಾನಿಗಳೂ ಸಹ ಒಳಗೊಂಡಿದ್ದಾರೆ. ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಮದುವೆಯಾದ ಉಪಖಂಡದ ಕೆಲವು ಕ್ರಿಕೆಟಿಗರು ಇವರು.
Tap to resize

ಮೊಹಮ್ಮದ್ ಅಜರುದ್ದೀನ್:ಅಜರುದ್ದೀನ್ ಕೇವಲ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ ವಿವಾಹ ಜೀವನದಲ್ಲೂ ವಿವಾದಗಳಿಗೆ ಕಡಿಮೆ ಇಲ್ಲ, ಹಿಂದೆ ನೌರೀನ್ ಅವರನ್ನು ಮದುವೆಯಾದ ಅಜರುದ್ದೀನ್ ಅವರೊಂದಿಗೆ ಎರಡು ಮಕ್ಕಳಿದ್ದಾರೆ. ಬಾಲಿವುಡ್ ನಟಿ ಸಂಗೀತಾ ಬಿಜ್ಲಾನಿಯನ್ನು ಕಂಡ ನಂತರ 1996 ರಲ್ಲಿ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರು, ಅದೇ ವರ್ಷದಲ್ಲಿ ಮತ್ತೆ ಮದುವೆಯಾದರು . ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ, ಇಬ್ಬರೂ 2010 ರಲ್ಲಿ ಡಿವೋರ್ಸ್‌ ಪಡೆದರು.
ವಾಸಿಮ್ ಅಕ್ರಮ್:ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಕೂಡ ಈ ಪಟ್ಟಿಯಲ್ಲಿದ್ದಾರೆ. 1996 ರಿಂದೀಚೆಗೆ ಹುಮಾ ಮುಫ್ತಿ ಅವರೊಂದಿಗಿನ ಅವರ ಮೊದಲ ವಿವಾಹವಾಗಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, 2009 ರಲ್ಲಿ ಅಂಗಾಂಗ ವೈಫಲ್ಯಗಳಿಂದ ನಿಧನರಾದರು. ಅದರ ಪರಿಣಾಮವಾಗಿ, ಅಕ್ರಮ್ 2013 ರಲ್ಲಿ, ಆಸ್ಟ್ರೇಲಿಯಾ ಮೂಲದ ಮಾಜಿ ಪಿಆರ್, ಶನಿಯೇರಾ ಜೊತೆ ಎರಡನೇ ಬಾರಿಗೆ ವಿವಾಹವಾದರು,
ದಿನೇಶ್ ಕಾರ್ತಿಕ್: ಕೋಲ್ಕತಾ ನೈಟ್ ರೈಡರ್ಸ್ ನಾಯಕ ಕೂಡ ಈ ಪಟ್ಟಿಯಲ್ಲಿದ್ದಾರೆ. ಕಾರ್ತಿಕ್ ಮೊದಲ ಬಾರಿಗೆ ನಿಕಿತಾ ವಂಜಾರಾರನ್ನು 2007 ರಿಂದ ಮದುವೆಯಾದರು. ಆದರೆ, ನಿಕಿತಾತಂಡದ ಸಹ ಆಟಗಾರ ಮುರಳಿ ವಿಜಯ್ ಅವರೊಂದಿಗೆ ಸಂಬಂಧ ಹೊಂದಿ ಮೋಸಮಾಡಿದರು. ಅವರು 2012 ರಲ್ಲಿ ವಿಚ್ಛೇದನ ಪಡೆದು ವಿಜಯ್ ಅವರನ್ನು ಮದುವೆಯಾದರು. ಕಾರ್ತಿಕ್ ನಂತರ ಸ್ಕ್ವ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ 2013 ರಲ್ಲಿ ಬೇಟಿಯಾಗಿ ಎರಡು ವರ್ಷಗಳ ನಂತರ ಮದುವೆಯಾದರು
ಶೋಯೆಬ್ ಮಲಿಕ್: 2010 ರಲ್ಲಿ ಇಂಡಿಯನ್ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಮದುವೆಯಾದಾಗ, ಮಲಿಕ್ ಈ ಹಿಂದೆ ವಿವಾಹವಾದರು ಎಂದು ಹಲವರಿಗೆ ತಿಳಿದಿಲ್ಲ. ಅವರ ಮೊದಲ ಪತ್ನಿ ಆಯೆಷಾ ಸಿದ್ದಿಕಿ (ಮಹಾ ಸಿದ್ದಿಕಿ) ಆಗಿದ್ದರು, ಇಬ್ಬರೂ 2002 ರಲ್ಲಿ ವಿವಾಹವಾದರು.ಸಾನಿಯಾಳನ್ನು ಮದುವೆಯಾಗಲು ಎಂಟು ದಿನಗಳ ಮೊದಲು ಮಲಿಕ್ ಅವಳನ್ನು ವಿಚ್ಛೇದನ ಪಡೆದರು. ಪ್ರಸ್ತುತ, ಮಲಿಕ್ ಸಾನಿಯಾಗೆ ಒಬ್ಬ ಮಗನಿದ್ದಾನೆ.
ಇಮ್ರಾನ್ ಖಾನ್: ಪಾಕಿಸ್ತಾನದ ಹಾಲಿ ಪ್ರಧಾನ ಮಂತ್ರಿ, ಎರಡು ಅಲ್ಲ, ಮೂರು ಮದುವೆಯಾಗಿದ್ದಾರೆ. ಅವರು 1995 ರಲ್ಲಿ ಜೆಮಿಮಾ ಗೋಲ್ಡ್‌ಸ್ಮಿತ್ ಅವರನ್ನು ವಿವಾಹವಾದರು. 2004 ರಲ್ಲಿ ಅವಳಿಗೆ ವಿಚ್ಛೇದನ ಮಾಡಿದರು. ಮದುವೆಯಿಂದ ಎರಡು ಮಕ್ಕಳನ್ನು ಹೊಂದಿದ್ದಾರೆ. ನಂತರ ಟಿವಿ ಆಂಕರ್ ರೆಹಮ್ ಖಾನ್ ಅವರನ್ನು 2014 ರಲ್ಲಿ ವಿವಾಹವಾದರು, ಅದು ಕೇವಲ 10 ತಿಂಗಳುಗಳವರೆಗೆ ನೆಡೆಯಿತು. 2018 ರಲ್ಲಿ ಮೂರನೇ ಬಾರಿಗೆ ಬುಶ್ರಾ ಮನೇಕಾರನ್ನು ಮದುವೆಯಾಗಿದ್ದಾರೆ.

Latest Videos

click me!