ಆರ್‌ಸಿಬಿ ಗುಜರಾತ್ ಕ್ವಾಲಿಫೈಯರ್ ಪಂದ್ಯದ ಭವಿಷ್ಯ ನುಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

Published : May 26, 2026, 03:35 PM IST

ಮೊದಲ ಕ್ವಾಲಿಫೈಯರ್ ಪಂದ್ಯದ ಕುತೂಹಲ ಹೆಚ್ಚಾಗುತ್ತಿದೆ. ಇಂದಿನ ಪಂದ್ಯದ ಮೊದಲ 6 ಓವರ್ ಪಂದ್ಯ ಡಿಸೈಡ್ ಮಾಡಲಿದೆ. ಈ ಪಂದ್ಯದ ಕುರಿತು ರೋಚಕ ಭವಿಷ್ಯವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ನುಡಿದಿದ್ದಾರೆ. 

PREV
16
ಆರ್‌ಸಿಬಿ ಗುಜರಾತ್ ಭವಿಷ್ಯ

ಐಪಿಎಲ್ ಟೂರ್ನಿಯ ಪ್ಲೇಆಫ್ ಪಂದ್ಯಗಳು ಇಂದಿನಿಂದ ಆರಂಭಗೊಳ್ಳಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಹೋರಾಟ ನಡಸೆಲಿದೆ. ಇದೀಗ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವಿಶೇಷ ಅಂದರೆ ಮೊದಲ ಕ್ವಾಲಿಫೈಯರ್ ಕುರಿತು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದೀಪ್‌ದಾಸ್ ಗುಪ್ತ ಭವಿಷ್ಯ ನುಡಿದಿದ್ದಾರೆ.

26
ನನ್ನ ಗಟ್ ಫೀಲಿಂಗ್ ಏನಂದರೆ?

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರಂಭಿಕ 6 ಓವರ್ ಪಂದ್ಯವನ್ನು ನಿರ್ಧರಿಸಲಿದೆ ಎಂದು ದೀಪ್‌ದಾಸ್ ಗುಪ್ತ ಹೇಳಿದ್ದಾರೆ. ಪವರ್ ಪ್ಲೇ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಈ ಪಂದ್ಯ ಗೆದ್ದವರೇ ಐಪಿಎಲ್ 2026 ಟ್ರೋಫಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದವರಿಗೆ ಟ್ರೋಫಿ ಎಂದಿದ್ದಾರೆ.

36
ಆರ್‌ಸಿಬಿ ಬೌಲಿಂಗ್

ಗುಜರಾತ್ ಟಾಪ್ ಆರ್ಡರ್ ಬ್ಯಾಟಿಂಗ್ ಹಾಗೂ ಆರ್‌ಸಿಬಿಯ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಜಲ್‌ವುಡ್ ನಡುವಿನ ಹೋರಾಟ ಇದು ಎಂದು ದೀಪ್‌ದಾಸ್ ಗುಪ್ತ ಹೇಳಿದ್ದಾರೆ. ಹೊಸ ಬಾಲ್‌ನಲ್ಲಿ ಆರ್‌ಸಿಬಿಯ ಎರಡು ವೇಗಿಗಳ ಮುಂದೆ ಕ್ರೀಸ್‌ನಲ್ಲಿ ನಿಲ್ಲುವುದು ಕಷ್ಟ. ಹೀಗಾಗಿ ಇದು ಜಿಟಿಗೆ ಸವಾಲಾಗಲಿದೆ ಎಂದಿದ್ದಾರೆ.

46
ಯಾರಿಗೆ ಗೆಲುವು?

ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ ಪಂದ್ಯದಲ್ಲಿ ಯಾರಿಗೆ ಗೆಲುವು ಅನ್ನೋದನ್ನು ದೀಪ್‌ದಾಸ್ ಗುಪ್ತ ಸ್ಪಷ್ಟವಾಗಿ ಹೇಳಿಲ್ಲ. ಆದರೆ ಗುಜರಾತ್ ಕಠಿಣ ಸವಾಲು ಎದುರಿಸಲಿದೆ ಎಂದಿದ್ದಾರೆ. ದೀಪ್‌ದಾಸ್ ಗುಪ್ತ ಭವಿಷ್ಯದಂತೆ ಪವರ್ ಪ್ಲೇ ಹೋರಾಟವೇ ನಿರ್ಣಾಯಕವಾದರೆ ತಂಡದ ಫಲಿತಾಂಶ ಭಿನ್ನವಾಗಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

56
ಧರ್ಮಶಾಲಾದಲ್ಲಿ ಹೋರಾಟ

ಮೊದಲ ಕ್ವಾಲಿಫೈಯರ್ ಪಂದ್ಯ ಧರ್ಮಶಾಲಾ ಮೈದಾನದಲ್ಲಿ ನಡೆಯಲಿದೆ. ಆರ್‌ಸಿಬಿ ಅಭಿಮಾನಿಗಳು ಈಗಾಗಲೇ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಿದರೆ ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್ ಮೂಲಕ ಫೈನಲ್ ಪ್ರವೇಶಿಸುವ ಮತ್ತೊಂದು ಅವಕಾಶವಿದೆ.

66
ಮೇ.31ಕ್ಕೆ ಫೈನಲ್ ಪಂದ್ಯ

ಮೇ.31ರಂದು ಐಪಿಎಲ್ 2026 ಟೂರ್ನಿ ಫೈನಲ್ ಪಂದ್ಯ ನಡೆಯಲಿದೆ. ನರೇಂದ್ರ ಮೋದಿ ಕ್ರೀಡಾಂಗಣ ಅಹಮ್ಮದಾಬಾದ್‌ನಲ್ಲಿ ಈ ಪಂದ್ಯ ನಡೆಯಲಿದೆ. ಐಪಿಎಲ್ ನಿಯಮದಂತೆ ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಚಿನ್ನಸ್ವಾಮಿ ಜಟಾಪಟಿಯಿಂದ ಪಂದ್ಯ ಸ್ಥಳಾಂತರಗೊಂಡಿತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories