1. ಬಾಬರ್ ಅಜಂ:
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಕೇವಲ 8ನೇ ತರಗತಿವರೆಗೆ ಮಾತ್ರ ಓದಿದ್ದಾಗಿ ವರದಿಯಾಗಿದೆ. ಇದಾದ ಬಳಿಕ ವೃತ್ತಿಪರ ಕ್ರಿಕೆಟ್‌ನತ್ತ ಗಮನ ಹರಿಸಿದ ಬಾಬರ್ ಅಜಂ, ಕ್ರಿಕೆಟ್ ಆಡುವಾಗಲೇ ಅಮೆರಿಕದ ಪ್ರತಿಷ್ಠಿತ ಹಾವರ್ಡ್ ಯೂನಿವರ್ಸಿಟಿಯಲ್ಲಿ ಬ್ಯುಸಿನೆಸ್ ಆಫ್ ಎಂಟರ್‌ಟೈನ್‌ಮೆಂಟ್,ಮೀಡಿಯಾ ಅಂಡ್ ಸ್ಪೋರ್ಟ್ಸ್(BEMS) ಪಡೆದಿದ್ದಾರೆ.
2. ಶಾದಾಬ್ ಖಾನ್:
ಪಾಕಿಸ್ತಾನ ಕ್ರಿಕೆಟ್ ತಂಡದ ಉಪನಾಯಕ ಶಾದಾಬ್ ಖಾನ್, ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಓದಿನ ಕುರಿತಂತೆ ಯಾವುದೇ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಿಲ್ಲ
3. ಫಖರ್ ಜಮಾನ್:
ಅಗ್ರಕ್ರಮಾಂಕದ ಬ್ಯಾಟರ್ ಫಖರ್ ಜಮಾನ್ ಮೆಟ್ರಿಕ್ಯೂಲೇಷನ್(10+2) ಮುಗಿಸಿದ ಬಳಿಕ 16ನೇ ವಯಸ್ಸಿಗೆ ಕರಾಚಿಯಲ್ಲಿನ ನೇವಿ ಸ್ಕೂಲ್‌ಗೆ ಸೇರಿಕೊಂಡರು. ಅಲ್ಲೇ ಅಭ್ಯಾಸ ನಡೆಸಿ, ಸದ್ಯ ಗೌರವ ಲೆಫ್ಟಿನೆಂಟ್ ಶ್ರೇಯಾಂಕದ ಹುದ್ದೆ ಹೊಂದಿದ್ದಾರೆ.
4. ಇಮಾಮ್ ಉಲ್ ಹಕ್:
ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ಅವರ ರಕ್ತಸಂಬಂಧಿ ಇಮಾಮ್ ಉಲ್ ಹಕ್ ಮೆಟ್ರಿಕ್ಯುಲೇಷನ್ ಮುಗಿಸಿದ ಬಳಿಕ ಲಾಹೋರ್‌ನಲ್ಲಿ ಕಾಮರ್ಸ್‌ನಲ್ಲಿ ICom ಪದವಿ ಪಡೆದಿದ್ದಾರೆ.
5. ಸಲ್ಮಾನ್ ಅಲಿ ಅಘಾ:
ಪಾಕಿಸ್ತಾನದ ಸ್ಟಾರ್ ಆಲ್ರೌಂಡರ್ ಸಲ್ಮಾನ್ ಅಲಿ ಅಘಾ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.
6. ಇಫ್ತಿಕಾರ್ ಅಹಮ್ಮದ್:
ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ಎದುರು ಆಕರ್ಷಕ ಶತಕ ಸಿಡಿಸಿದ್ದ ಇಫ್ತಿಕಾರ್ ಪದವಿ ಶಿಕ್ಷಣ ಪಡೆದಿದ್ದಾರೆ ಎಂದು ವರದಿಯಾಗಿದೆ. ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಇಫ್ತಿಕಾರ್ ಕ್ರಿಕೆಟ್ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
7. ಮೊಹಮ್ಮದ್ ರಿಜ್ವಾನ್:
ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಕೂಡಾ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಕಾಲೇಜು ಶಿಕ್ಷಣದ ಕುರಿತಂತೆ ಯಾವುದೇ ಮಾಹಿತಿಯಿಲ್ಲ. ಹೀಗಿದ್ದೂ ರಿಜ್ವಾನ್, ಬಾಬರ್ ಅಜಂ ಜತೆ ಹಾವರ್ಡ್ ವಿವಿಯಲ್ಲಿ ಶಿಕ್ಷಣ ಪಡೆದಿದ್ದಾರೆ ಎನ್ನಲಾಗಿದೆ.
8. ಮೊಹಮ್ಮದ್ ನವಾಜ್:
ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಮೊಹಮ್ಮದ್ ನವಾಜ್ ಕಾಲೇಜ್ ಅರ್ಧಕ್ಕೆ ತೊರೆದು ಕ್ರಿಕೆಟ್‌ನತ್ತ ಗಮನ ಹರಿಸಿದರು. ಹೀಗಾಗಿ ನವಾಜ್ ಕಾಲೇಜು ಶಿಕ್ಷಣದ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.
9. ನಸೀಂ ಶಾ
ಪಾಕಿಸ್ತಾನದ ಯುವ ಬಲಗೈ ವೇಗದ ಬೌಲರ್ ನಸೀಂ ಶಾ, ಮೆಟ್ರಿಕ್ಯುಲೇಷನ್‌ವರೆಗೆ ವ್ಯಾಸಂಗ ಮಾಡಿದ್ದಾರೆ ಎಂದು ವರದಿಯಾಗಿದೆ. ಇದಾದ ಬಳಿಕ ಪಾಕಿಸ್ತಾನ ತಂಡದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ.
10. ಶಾಹೀನ್ ಶಾ ಅಫ್ರಿದಿ:
ಪಾಕಿಸ್ತಾನದ ವೇಗದ ಅಸ್ತ್ರ ಶಾಹೀನ್ ಶಾ ಅಫ್ರಿದಿ ಶಿಕ್ಷಣದ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಿಲ್ಲ. ತೀರಾ ಚಿಕ್ಕ ವಯಸ್ಸಿಗೆ ಪಾಕಿಸ್ತಾನ ತಂಡಕ್ಕೆ ಎಂಟ್ರಿ ಕೊಡುವಲ್ಲಿ ಶಾಹೀನ್ ಅಫ್ರಿದಿ ಯಶಸ್ವಿಯಾಗಿದ್ದಾರೆ.
11. ಹ್ಯಾರಿಸ್ ರೌಫ್:
ಪಾಕಿಸ್ತಾನದ ಮತ್ತೋರ್ವ ಮಾರಕ ವೇಗಿ ಹ್ಯಾರಿಸ್ ರೌಫ್, ಇಸ್ಲಾಮಾಬಾದ್‌ನ ಮಾಡೆಲ್ ಕಾಲೇಜ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಪದವಿ ಓದುವ ಸಂದರ್ಭದಲ್ಲಿ ಫುಟ್ಬಾಲಿಗನಾಗುವ ಕನಸು ಕಂಡಿದ್ದ ರೌಫ್, ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಯೂನಿವರ್ಸಿಟಿಯಲ್ಲಿ ಇಸ್ಲಾಮಾಬಾದ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಮೂಲಕ ಕ್ರಿಕೆಟ್‌ನತ್ತ ಹೆಚ್ಚು ಒಲವು ಬೆಳೆಸಿಕೊಂಡರು.