Asia Cup 2023: ಪಾಕ್ ಎದುರಿನ ಹೈವೋಲ್ಟೇಜ್‌ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..!

First Published | Sep 2, 2023, 11:39 AM IST

ಪಲ್ಲೆಕೆಲೆ: 2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇದೀಗ ಕ್ಷಣಗಣನೆ ಶುರುವಾಗಿದೆ. ಬರೋಬ್ಬರಿ 4 ವರ್ಷಗಳ ಬಳಿಕ ಉಭಯ ತಂಡಗಳು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮುಖಾಮುಖಿಯಾಗುತ್ತಿವೆ. ಭಾರತ ತಂಡವು, ಪಾಕ್‌ ಬಗ್ಗುಬಡಿದು ಟೂರ್ನಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಪಾಕಿಸ್ತಾನ ಎದುರಿನ ಮಹತ್ವದ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.

1. ರೋಹಿತ್ ಶರ್ಮಾ:

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನದ ಬಲಾಢ್ಯ ಬೌಲಿಂಗ್ ಪಡೆ ಎದುರು ದಿಟ್ಟ ಆರಂಭ ಒದಗಿಸಿಕೊಡಬೇಕಿದೆ. ಆರಂಭಿಕನಾಗಿ ಹಾಗೂ ನಾಯಕನಾಗಿ ರೋಹಿತ್ ಶರ್ಮಾ ಮೇಲೆ ಸಾಕಷ್ಟು ದೊಡ್ಡ ಸವಾಲು ಇದೆ.

2. ಶುಭ್‌ಮನ್ ಗಿಲ್‌:

ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌, ಐಪಿಎಲ್‌ ಬಳಿಕ ಲಯಕ್ಕೆ ಮರಳಲು ಪರದಾಡುತ್ತಿದ್ದಾರೆ. ಭಾರತ ತಂಡವು ಈ ಪಂದ್ಯದಲ್ಲಿ ಶುಭ್‌ಮನ್ ಗಿಲ್‌ ಫಾರ್ಮ್‌ಗೆ ಮರಳುವುದನ್ನು ಎದುರು ನೋಡುತ್ತಿದೆ.

Latest Videos


3. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ಎದುರು ಅಬ್ಬರಿಸುವುದು ಅಚ್ಚುಮೆಚ್ಚು. ಪಾಕ್ ಎದುರು ಟೀಂ ಇಂಡಿಯಾ ಗೆಲ್ಲಬೇಕಿದ್ದರೇ ಕಿಂಗ್ ಕೊಹ್ಲಿ ದೊಡ್ಡ ಮೊತ್ತ ಕಲೆಹಾಕಬೇಕಿದೆ.
 

4. ಶ್ರೇಯಸ್ ಅಯ್ಯರ್:

ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್, ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲವಾಗಿದೆ.

5. ಇಶಾನ್ ಕಿಶನ್:

ಏಷ್ಯಾಕಪ್ ಟೂರ್ನಿಯ ಮೊದಲೆರಡು ಪಂದ್ಯಕ್ಕೆ ಕೆ ಎಲ್ ರಾಹುಲ್ ಆಯ್ಕೆಗೆ ಅಲಭ್ಯರಾಗಿರುವುದರಿಂದ ಇಶಾನ್ ಕಿಶನ್, ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಕಿಶನ್ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದಾರೆ.

6. ಹಾರ್ದಿಕ್ ಪಾಂಡ್ಯ:

ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವೇಗದ ಬೌಲಿಂಗ್ ಜತೆಗೆ ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಕ್ಷಮತೆ ಹೊಂದಿದ್ದಾರೆ. ಈ ಹಿಂದೆಯೂ ಪಾಕ್ ಎದುರು ಉತ್ತಮ ಪ್ರದರ್ಶನ ತೋರಿದ ಟ್ರ್ಯಾಕ್ ರೆಕಾರ್ಡ್‌ ಪಾಂಡ್ಯ ಜತೆಗಿದೆ.

7. ರವೀಂದ್ರ ಜಡೇಜಾ:

ಜಡೇಜಾ ಸೇರ್ಪಡೆ ತಂಡದಲ್ಲಿ ಮತ್ತಷ್ಟು ಸದೃಢತೆ ತಂದು ಕೊಡುತ್ತದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಮಹತ್ವದ ಕಾಣಿಕೆ ನೀಡಬಲ್ಲ ಭಾರತ ತಂಡ ಮತ್ತೋರ್ವ ಸ್ಟಾರ್ ಆಲ್ರೌಂಡರ್ ಜಡ್ಡು ಮೇಲೂ ತಂಡದಿಂದ ಸಾಕಷ್ಟು ನಿರೀಕ್ಷೆಯಿದೆ.
 

8. ಕುಲ್ದೀಪ್ ಯಾದವ್:

ಮಣಿಕಟ್ಟು ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್, ಇತ್ತೀಚಿಗಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದು, ಅಗತ್ಯ ಸಂದರ್ಭದಲ್ಲಿ ಟೀಂ ಇಂಡಿಯಾಗೆ ವಿಕೆಟ್ ಕಬಳಿಸಿ ಮೇಲುಗೈ ತಂದು ಕೊಡುತ್ತಿದ್ದಾರೆ. ಲಂಕಾ ಪಿಚ್‌ನಲ್ಲಿ ಕುಲ್ದೀಪ್ ಮೋಡಿ ಮಾಡಲು ಹಾತೊರೆಯುತ್ತಿದ್ದಾರೆ.

9. ಜಸ್ಪ್ರೀತ್ ಬುಮ್ರಾ:

ಟೀಂ ಇಂಡಿಯಾ ಮಾರಕ ವೇಗಿ ಬುಮ್ರಾ, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಪಾಕ್ ಬ್ಯಾಟರ್‌ಗಳನ್ನು ಕಾಡಲು ಬುಮ್ರಾ ಇದೀಗ ಹೊಸ ಹುರುಪಿನೊಂದಿಗೆ ಸಜ್ಜಾಗಿದ್ದಾರೆ.
 

10. ಮೊಹಮ್ಮದ್ ಸಿರಾಜ್:

ಹೈದರಾಬಾದ್ ಮೂಲದ ಮಾರಕ ವೇಗಿ ಸಿರಾಜ್, ಸದ್ಯ ಟೀಂ ಇಂಡಿಯಾ ವೇಗದ ಬೌಲಿಂಗ್‌ನ ಹೊಸ ಅಸ್ತ್ರ ಎನಿಸಿಕೊಂಡಿದ್ದಾರೆ. ಸ್ವಿಂಗ್ ಹಾಗೂ ವೇಗದ ದಾಳಿ ಮೂಲಕ ಎದುರಾಳಿ ಬ್ಯಾಟರ್‌ಗಳ ನಿದ್ದೆಗೆಡಿಸಿರುವ ಸಿರಾಜ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
 

11. ಮೊಹಮ್ಮದ್ ಶಮಿ:

ಟೀಂ ಇಂಡಿಯಾ ಅನುಭವಿ ಮಾರಕ ವೇಗಿ ಮೊಹಮ್ಮದ್ ಶಮಿ, ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ಎದುರಿನ ಸರಣಿಗೆ ವಿಶ್ರಾಂತಿ ನೀಡಲಾಗಿತ್ತು. ಪಾಕಿಸ್ತಾನದಂತಹ ಬಲಾಢ್ಯ ತಂಡದ ಎದುರು ಮೊಹಮ್ಮದ್ ಶಮಿ ಅವರಂತಹ ಅನುಭವಿ ಬೌಲರ್‌ ಅಗತ್ಯ ಭಾರತ ತಂಡಕ್ಕಿದೆ.

click me!