ಧೋನಿ- ರವಿಶಾಸ್ತ್ರಿ : ಬಾಲಿವುಡ್‌ ಮತ್ತು ಕ್ರಿಕೆಟ್‌ನ ಇನ್‌ಕಂಪ್ಲೀಟ್‌ ಲವ್‌ ಸ್ಟೋರಿಗಳು!

Suvarna News   | Asianet News
Published : Sep 22, 2020, 05:05 PM IST

ಕ್ರಿಕೆಟ್ ಮತ್ತು ಬಾಲಿವುಡ್ ನಡುವೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದೆ. ಶರ್ಮಿಳಾ ಟ್ಯಾಗೋರ್, ನವಾಬ್ ಪಟೌಡಿ, ಯುವರಾಜ್ ಸಿಂಗ್ ಹ್ಯಾಜೆಲ್  ಕೀಚ್, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ, ಜಹೀರ್ ಖಾನ್ ಮತ್ತು ಸಾಗರಿಕಾ ಘಾಟೆ ಇವರಿಬ್ಬರ ಸಂಬಂಧ ಯಶಸ್ವಿಯಾಗಿ ಮುಕ್ತಾಯಗೊಂಡ ಉದಾಹರಣೆಗಳಿವೆ. ಆದರೆ ಅನೇಕ ಲವ್‌ಸ್ಟೋರಿಗಳು  ಅಪೂರ್ಣವಾಗಿಯೇ ಉಳಿದಿವೆ. ಅಂತಹ ಇನ್‌ಕಂಪ್ಲೀಟ್‌ ಸಂಬಂಧಗಳು ಹೆಚ್ಚು ಬೆಳಕಿಗೆ ಬರಲಿಲ್ಲ. 

PREV
18
ಧೋನಿ- ರವಿಶಾಸ್ತ್ರಿ : ಬಾಲಿವುಡ್‌ ಮತ್ತು ಕ್ರಿಕೆಟ್‌ನ ಇನ್‌ಕಂಪ್ಲೀಟ್‌ ಲವ್‌ ಸ್ಟೋರಿಗಳು!

ಜಹೀರ್ ಖಾನ್ ಮತ್ತು ಇಶಾ ಶರ್ವಾನಿ : ಭಾರತದ ಮಾಜಿ ಆಟಗಾರ ಜಹೀರ್ ಖಾನ್ ಹಾಗೂ ಬಾಲಿವುಡ್ ನಟಿ ಇಶಾ ಶರ್ವಾನಿ  2005 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭೇಟಿಯಾದರು. ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಜಹೀರ್ ಖಾನ್ ಶೆರ್ವಾನಿಗೆ ಮನಸೋತರು. ಇದರ ನಂತರ, ಇಶಾ ಮತ್ತು ಜಹೀರ್ ಖಾನ್ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡರು ಆದರೆ ಇಬ್ಬರೂ ಇದ್ದಕ್ಕಿದ್ದಂತೆ ಬೇರ್ಪಟ್ಟರು.  ನಂತರ ಜಹೀರ್ ಖಾನ್ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ವಿವಾಹವಾದರು.

28

ಯುವರಾಜ್ ಸಿಂಗ್ ಮತ್ತು ಕಿಮ್ ಶರ್ಮ : ಯುವರಾಜ್ ಸಿಂಗ್ ಬಾಲಿವುಡ್ ನಟಿ ಹ್ಯಾಜೆಲ್ ಕೀಚ್‌ರನ್ನು ಮದುವೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಯುವರಾಜ್ ಸಿಂಗ್  ಹೆಸರು  ಅನೇಕ  ನಟಿಯರೊಂದಿಗೆ ಕೇಳಿಬಂದಿತ್ತು. ಯುವರಾಜ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದಾಗ  ಪ್ರೀತಿ ಜಿಂಟಾ ಜೊತೆ  ಸಂಬಂಧ ಹೊಂದಿದ್ದರು ಎಂಬ ರೂಮರ್‌ಗಳು ಕೇಳಿಬಂದಿದ್ದವು. 

38

ಸೌರವ್ ಗಂಗೂಲಿ ಮತ್ತು ನಾಗ್ಮಾ:  ಬಿಸಿಸಿಐ ಅಧ್ಯಕ್ಷ ಮತ್ತು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಬಾಲ್ಯದ ಪ್ರೀತಿ ಡೊನ್ನಾ ಗಂಗೂಲಿಯನ್ನು ವಿವಾಹವಾದರು. ಆದರೆ ಸೌರವ್ ಗಂಗೂಲಿ ಮತ್ತು ಬಾಲಿವುಡ್ ನಟಿ ನಾಗ್ಮಾರ  ಚರ್ಚೆ ಎಲ್ಲೆಡೆ ನಡೆಯುತ್ತಿದ್ದ ಸಮಯವಿತ್ತು. 1999 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಇವರಿಬ್ಬರು ಲಂಡನ್‌ನಲ್ಲಿ ಭೇಟಿಯಾದರು. ಇದರ ನಂತರ, ಎರಡು ವರ್ಷಗಳ ಕಾಲ, ಇವರ ಆಫೇರ್‌  ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದವು. ಅದೇ ಸಮಯದಲ್ಲಿ, ಡೊನಾ ಮತ್ತು ಗಂಗೂಲಿ ಬೇರೆಯಾಗಲಿದ್ದಾರೆ ಎಂದು ವರದಿಗಳೂ ಬಂದವು.   ಆದರೆ, ಸೌರವ್   ಕುಟುಂಬ ಮಧ್ಯ ಪ್ರವೇಶಿಸಿದ ನಂತರ ನಟಿಯ ಜೊತೆ ಬ್ರೇಕಪ್‌ ಆದ   ಸುದ್ದಿ ಪ್ರಕಟವಾಯಿತು. ಆದರೆ, ಗಂಗೂಲಿ  ಎಂದಿಗೂ ಇದನ್ನು ಒಪ್ಪಲಿಲ್ಲ. ಅದೇ ಸಮಯದಲ್ಲಿ, ನಟಿ ನಗ್ಮಾ  2010 ರಲ್ಲಿ ಸಂದರ್ಶನವೊಂದರಲ್ಲಿ ಸೌರವ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಿದರು.

48

ರವಿಶಾಸ್ತ್ರಿ ಮತ್ತು ಅಮೃತಾ ಸಿಂಗ್ : ಟೀಮ್ ಇಂಡಿಯಾದ ಹಾಲಿ ಕೋಚ್ ರವಿಶಾಸ್ತ್ರಿ 80 ರ ದಶಕದ ಫೇಮಸ್‌ ಕ್ರಿಕೆಟರ್‌. ಕೇವಲ ಆಟಕ್ಕಾಗಿ ಮಾತ್ರವಲ್ಲದೆ ಎತ್ತರದ ನಿಲುವು ಮತ್ತು ಸ್ಟೈಲ್‌ನಿಂದಾಗಿ ಹುಡುಗಿಯರ ಫೇವರೇಟ್‌ ಆಗಿದ್ದರು ಶಾಸ್ತ್ರಿ.  ಈ ಸಮಯದಲ್ಲಿ ಅಮೃತಾ ಸಿಂಗ್  ಜೊತೆ ರಿಲೆಷನ್‌ಶಿಪ್‌ನಲ್ಲಿದ್ದು   ಇಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದರು. ಅಮೃತಾ ಸಿಂಗ್ ಮ್ಯಾಚ್‌ ನೆಡೆಯುವಾಗ ಸಹ ಕಾಣಿಸಿಕೊಂಡರು.ಅದೇ ಸಮಯದಲ್ಲಿ, ಸಿನಿಮಾ ಮ್ಯಾಗ್‌ಜೀನ್‌ ಮುಖಪುಟದಲ್ಲಿ ಇಬ್ಬರ ರೋಮ್ಯಾಂಟಿಕ್‌ ಪೋಟೋ ಪ್ರಕಟಿಸಿತು. ನಂತರ ರವಿಶಾಸ್ತ್ರಿ ಸಂದರ್ಶನವೊಂದರಲ್ಲಿ ತಮ್ಮ ಸಂಬಂಧವನ್ನು ಒಪ್ಪಿಕೊಂಡರು. ನಿಶ್ಚಿತಾರ್ಥವನ್ನೂ  ಮಾಡಿಕೊಂಡರು. ಆದರೆ, ಶಾಸ್ತ್ರಿ 1990 ರಲ್ಲಿ ನೀತು ಸಿಂಗ್ ಜೊತೆ ಮದುವೆಯಾದರು. ಅದೇ ಸಮಯದಲ್ಲಿ, ಅಮೃತಾ ಸಿಂಗ್ 10 ವರ್ಷ ಕಿರಿಯ   ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. 

58

ವಿವಿಯನ್ ರಿಚರ್ಡ್ಸ್ ಮತ್ತು ನೀನಾ ಗುಪ್ತಾ :  ವಿವಿಯನ್ ರಿಚರ್ಡ್ಸ್  ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಆದರೆ ವಿವಾಹಿತ ರಿಚರ್ಡ್ಸ್‌  ಬಾಲಿವುಡ್ ನಟಿಗೆ ಬೋಲ್ಡ್‌ ಆದರು. ಮುಂಬೈ ಪಾರ್ಟಿಯಲ್ಲಿ ಇಬ್ಬರೂ ಭೇಟಿಯಾದ ನಂತರ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಮಗಳು ಮಸಾಬಾ ಇಬ್ಬರ ಪ್ರೀತಿಯ ಸಂಕೇತ. ನೀನಾ 1989 ರಲ್ಲಿ ಮದುವೆಯಾಗದೆ ಮಸಾಬಾಗೆ ಜನ್ಮ ನೀಡಿದಳು. ಮಸಾಬಾ ಈಗ ಯಶಸ್ವಿ ಫ್ಯಾಷನ್ ಡಿಸೈನರ್. ವಿವ್ ಇನ್ನೂ ತನ್ನ ಮಗಳನ್ನು ಭೇಟಿ ಮಾಡುತ್ತಾರೆ. ನಂತರ, ನೀನಾ ಮದುವೆಯಾದರು. 

68

ಇಮ್ರಾನ್ ಖಾನ್ ಮತ್ತು ಜೀನಾತ್ ಅಮನ್ : ಪಾಕಿಸ್ತಾನದ ಮಾಜಿ ನಾಯಕ ಮತ್ತು ಹಾಲಿ ಪ್ರಧಾನಿ ಇಮ್ರಾನ್ ಖಾನ್   ಹಾಗೂ ಬಾಲಿವುಡ್‌ನ ಹಾಟ್‌ ನಟಿ ಜೀನತ್ ಅಮಾನ್‌ರ ಆಫೇರ್‌ ಸುದ್ದಿಯಾಗಿತ್ತು.  ಇಮ್ರಾನ್ ಅವರ ಪಾಕಿಸ್ತಾನದ ವಧು ಆಗಲು ಜೀನತ್ ಬಾಲಿವುಡ್ ಬಿಡುತ್ತಾರೆ ಎಂದುಸದ್ದಾಗಿತ್ತು.  ಆದರೆ ನಂತರ ಅವರಿಬ್ಬರ ನಡುವೆ ಬ್ರೇಕಪ್‌ ಆಯಿತು. ಜೀನತ್ ಮಹ್ಜಾರ್ ಖಾನ್ ಅವರನ್ನು ವಿವಾಹವಾದರು. ಇಮ್ರಾನ್ ಕೂಡ ಒಂದರ ನಂತರ  ಒಂದರಂತೆ ಮೂರು ಮದುವೆಯಾದರು.

78

ಮಹೇಂದ್ರ ಸಿಂಗ್ ಧೋನಿ ಮತ್ತು ರೈ ಲಕ್ಷ್ಮಿ:  ಐಪಿಎಲ್ 2008 ರಲ್ಲಿ ನಡೆದ ಪಾರ್ಟಿಯೊಂದರಲ್ಲಿ ಭಾರತೀಯ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ದಕ್ಷಿಣದ ನಟಿ ರಾಯ್ ಲಕ್ಷ್ಮಿಯ ಸಂಬಂಧ ಚರ್ಚೆಗಳು ನಡೆದವು.ನಂತರ ಎರಡು ಹೆಸರುಗಳು ಆಗಾಗ ಕೇಳಿಬಂದವು. ಧೋನಿ ಈ ಬಗ್ಗೆ ಏನನ್ನೂ ಹೇಳದಿದ್ದರೂ, ನಾನು ಮತ್ತು ಧೋನಿ ಸ್ವಲ್ಪ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದೆವು ಎಂದು ರಾಯ್ ಲಕ್ಷ್ಮಿ ಖಂಡಿತವಾಗಿ ಹೇಳಿದ್ದಾರೆ.

88

ಗ್ಯಾರಿ ಸೋಬರ್ಸ್ ಮತ್ತು ಅಂಜು ಮಹೇಂದ್ರು :  1966 ರ ಪ್ರವಾಸದಲ್ಲಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಪತ್ರಿಕೆಗಳಲ್ಲಿ ಸಾಕಷ್ಟು ಸುದ್ದಿ ಮಾಡಿತು.  ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಗ್ಯಾರಿ ಸೋಬರ್ಸ್ ಮತ್ತು ಬಾಲಿವುಡ್ ನಟಿ ಅಂಜು ಮಹೇಂದ್ರುರ ಸಂಬಂಧ ಹೆಡ್‌ಲೈನ್‌ನ್ಯೂಸ್‌ ಆಗಿತ್ತು. ಆ ಸಮಯದಲ್ಲಿ ಅಂಜು  ರಾಜೇಶ್ ಖನ್ನಾರ ಎಕ್ಸ್‌ ಗರ್ಲ್‌ಫ್ರೆಂಡ್‌ ಎಂದು  ಗುರುತಿಸಲ್ಪಡುತ್ತಿದ್ದರು. ನಂತರ ಅವರು ಗ್ಯಾರಿ ಸೋಬರ್ಸ್ ಪಾರ್ಟಿಯಲ್ಲಿ ಭೇಟಿಯಾದರು. ಇಬ್ಬರ ನಡುವೆ ಮೀಟಿಂಗ್‌ಗಳು ಪ್ರಾರಂಭವಾಗಿ, ಮದುವೆ ಬಹುತೇಕ ಖಚಿತವಾಗಿತ್ತು. ಆದರೆ ನಂತರ ಅಂಜು ಫ್ಯಾಮಿಲಿ ಈ ಸಂಬಂಧವನ್ನು ನಿರಾಕರಿಸಿದ ಕಾರಣದಿಂದ  ಇಬ್ಬರು ಬೇರ್ಪಟ್ಟರು. 

click me!

Recommended Stories