ಹಾರ್ದಿಕ್ ಪಾಂಡ್ಯ ಲವ್ ಸ್ಟೋರಿ; ಹೊಸ ಗರ್ಲ್‌ ಫ್ರೆಂಡ್ ಜತೆ ಬರ್ತ್‌ಡೇ ಸೆಲಿಬ್ರೇಟ್? ಯಾರೀಕೆ?

Published : Oct 11, 2025, 12:40 PM IST

ಬೆಂಗಳೂರು: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂದು ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೊಸ ಗರ್ಲ್‌ಫ್ರೆಂಡ್ ಜತೆ ಕಾಣಿಸಿಕೊಂಡಿದ್ದು, ಹೊಸ ರೂಮರ್ಸ್ ಹುಟ್ಟುಹಾಕಿದೆ. ಅಷ್ಟಕ್ಕೂ ಯಾರೀಕೆ? ನೋಡೋಣ ಬನ್ನಿ

PREV
15
ಏರ್‌ಪೋರ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯ, ಮಹೀಕಾ ಶರ್ಮಾ

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮಾಡೆಲ್ ಮಹೀಕಾ ಶರ್ಮಾ ಜೊತೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಇಬ್ಬರ ಹೊಸ ಸಂಬಂಧದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

25
ಸೋಶಿಯಲ್ ಮೀಡಿಯಾದಲ್ಲಿ ಸಂಚಲನ

ಮಹೀಕಾ ಶರ್ಮಾ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ. ಹಾರ್ದಿಕ್ ಜರ್ಸಿ ಸಂಖ್ಯೆ 33 ಅನ್ನು ಪೋಸ್ಟ್ ಮಾಡಿದ್ದು, ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.

35
ಮಹೀಕಾ ಶರ್ಮಾ ಯಾರು?

24 ವರ್ಷದ ಮಹೀಕಾ ಶರ್ಮಾ ದೆಹಲಿ ಮೂಲದ ಮಾಡೆಲ್ ಮತ್ತು ನಟಿ. ಹಲವು ದೊಡ್ಡ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿದ್ದು, ಸುಮಾರು 3.2 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿದ್ದಾರೆ. ಮಾಡೆಲಿಂಗ್‌ನಲ್ಲಿ ಬೆಳೆಯುತ್ತಿರುವ ತಾರೆ.

45
ನತಾಶಾ ಸ್ಟಾಂಕೋವಿಕ್ ಜೊತೆ ಹಾರ್ದಿಕ್ ಪಾಂಡ್ಯ ವಿಚ್ಛೇದನ

ಹಾರ್ದಿಕ್ ಪಾಂಡ್ಯ ಈ ಹಿಂದೆ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಮದುವೆಯಾಗಿದ್ದರು. ಅವರಿಗೆ ಅಗಸ್ತ್ಯ ಎಂಬ ಮಗನಿದ್ದಾನೆ. 2024 ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಈಗ ಮಹೀಕಾ ಜೊತೆ ಕಾಣಿಸಿಕೊಂಡಿದ್ದಾರೆ.

55
ಹಾರ್ದಿಕ್ ಐಷಾರಾಮಿ ಜೀವನ, ಹೊಸ ಲವ್ ರೂಮರ್‌ಗಳು

ಹಾರ್ದಿಕ್ ಇತ್ತೀಚೆಗೆ 4.5 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಖರೀದಿಸಿದ್ದಾರೆ. ಅದೇ ಕಾರಿನಲ್ಲಿ ಮಹೀಕಾ ಜೊತೆ ಏರ್‌ಪೋರ್ಟ್‌ಗೆ ಬಂದಿದ್ದು, ಅವರ ಪ್ರೇಮ ಜೀವನ ಮತ್ತೆ ಚರ್ಚೆಗೆ ಬಂದಿದೆ. ನಿಜವಾಗಿಯೂ ಪ್ರೀತಿಯಲ್ಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Read more Photos on
click me!

Recommended Stories