ಐಪಿಎಲ್ ಚಾಂಪಿಯನ್ ಆಟಗಾರ ಸೇರಿ ಐವರು ಕೈಬಿಡಲು ಮುಂದಾದ ಸಿಎಸ್‌ಕೆ, ಲಿಸ್ಟ್ ಬಹಿರಂಗ, ರಿಟೈನ್ ಡೆಡ್‌ಲೈನ್ ಸಮೀಪಿಸುತ್ತಿದ್ದಂತೆ ಸಿಎಸ್‌ಕೆ ಇದೀಗ ಕೈಬಿಡಲು ಮುಂದಾಗಿರುವ ಆಟಗಾರರ ಪಟ್ಟಿ ತಯಾರಿಸಿದೆ.
ಐಪಿಎಲ್ 2026ರ ಆವೃತ್ತಿಗೆ ತಯಾರಿಗಳು ಆರಂಭಗೊಂಡಿದೆ. ಇದೀಗ ಐಪಿಎಲ್ ಸಮಿತಿ ಫ್ರಾಂಚೈಸಿಗಳಿಗೆ ರಿಟೈನ್ ಡೆಡ್‌ಲೈನ್ ನೀಡಿದೆ. 2026ರ ಐಪಿಎಲ್ ಟೂರ್ನಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ತಂಡದಲ್ಲಿ ಉಳಿಸಿಕೊಳ್ಳುವ ಹಾಗೂ ತಂಡದಿಂದ ಕೈಬಿಡುವ ಆಟಗಾರರ ಪಟ್ಟಿ ಪ್ರಕಟಿಸಲು ಸೂಚಿಸಲಾಗಿದೆ. ನವೆಂಬರ್ 15ರೊಳಗೆ ಪಟ್ಟಿ ಬಿಡುಗಡೆ ಮಾಡುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಪ್ರಮುಖ ತಂಡಗಳ ಪಟ್ಟಿ ರೆಡಿಯಾಗಿದೆ.
26
ಚೆನ್ನೈ ತಂಡಕ್ಕೆ ಮೇಜರ್ ಸರ್ಜರಿ
ಚೆನ್ನೈ ತಂಡಕ್ಕೆ ಮೇಜರ್ ಸರ್ಜರಿ
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಎಂಎಸ್ ಧೋನಿ ನಾಯಕತ್ವ ಜವಾಬ್ದಾರಿಯಿಂದ ಮುಕ್ತಿಗೊಂಡರೆ, ಇತ್ತ ರುತುರಾಜ್ ಗಾಯಕ್ವಾಡ್ ತಂಡದ ನಾಯಕತ್ವ ವಹಿಸಿದ್ದರು.ಆದರೆ ಸಿಎಸ್‌ಕೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಬಾರಿ ತಂಡಕ್ಕೆ ಮೇಜರ್ ಸರ್ಜರಿ ಮಾಡಲಾಗುತ್ತಿದೆ.
36
ಸಿಎಸ್‌ಕೆ ತಂಡದಿಂದ ಯಾರು ಔಟ್
ಸಿಎಸ್‌ಕೆ ತಂಡದಿಂದ ಯಾರು ಔಟ್
ಸಿಎಸ್‌ಕೆ ತಂಡದಿಂದ ಕೈಬಿಡುವ ಆಟಗಾರರ ಪಟ್ಟಿ ರೆಡಿ ಮಾಡಲಾಗಿದೆ. ಕ್ರಿಕ್‌ಬಝ್ ವರದಿ ಪ್ರಕಾರ ಐವರು ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಡೆವೋನ್ ಕಾನ್ವೇ, ಸ್ಯಾಮ್ ಕುರನ್, ದೀಪಕ್ ಹೂಡ, ವಿಜಯ್ ಶಂಕರ್ ಹಾಗೂ ರಾಹುಲ್ ತ್ರಿಪಾಠಿಯನ್ನು ಕೈಬಿಡಲು ಮುಂದಾಗಿದೆ. ಕಳೆದ ಕೆಲ ವರ್ಷಗಳಿಂದ ಡೆವೋನ್ ಕಾನ್ವೇ ಸಿಎಸ್‌ಕೆ ತಂಡದ ಭಾಗವಾಗಿದ್ದರು.
ಆರ್ ಅಶ್ವಿನ್ ಈಗಾಗಲೇ ವಿದಾಯ ಘೋಷಿಸಿರುವ ಕಾರಣ ಅಶ್ವಿನ್ ಸ್ಥಾನಕ್ಕೆ ಮತ್ತೊಬ್ಬನ ಖರೀದಿಸಲು ಸಿಎಸ್‌ಕೆ ಮುಂದಾಗಿದೆ. ಆರ್ ಅಶ್ವಿನ್‌ಗೆ ಸಿಎಸ್‌ಕೆ ತಂಡ 9.75 ಕೋಟಿ ರೂಪಾಯಿ ಮೊತ್ತ ನೀಡಿತ್ತು. ಇದೀಗ ಈ ಮೊತ್ತದಲ್ಲಿ ಉತ್ತಮ ಸ್ಪಿನ್ನರ್ ಖರೀದಿಸಲು ಸಿಎಸ್‌ಕೆ ಮುಂದಾಗಿದೆ.
56
ಸಿಎಸ್‌ಕೆ ತಂಡ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್
ಸಿಎಸ್‌ಕೆ ತಂಡ ಸೇರಿಕೊಳ್ತಾರಾ ಸಂಜು ಸ್ಯಾಮ್ಸನ್
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಖರೀದಿಸಲು ಸಿಎಸ್‌ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಧೋನಿ ಬಳಿಕ ಸಮರ್ಥ ಕೀಪರ್ ಹುಡುಕಾಟ ನಡೆಸುತ್ತಿರುವ ಸಿಎಸ್‌ಕೆ ಇದೀಗ ಸಂಜು ಸ್ಯಾಮ್ಸನ್ ಖರೀದಿಗೆ ಮುಂದಾಗಿದೆ. ರಾಜಸ್ಥಾನ ರಾಯಲ್ಸ್ ಭಾಗವಾಗಿರುವ ಸಂಜು, ಸಿಎಸ್‌ಕೆ ಸೇರಿಕೊಳ್ಳುತ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ.
66
ದೆಹಲಿಯಿಂದ ಮೆಚೆಲ್ ಸ್ಟಾರ್ಕ್ ರಿಲೀಸ್
ದೆಹಲಿಯಿಂದ ಮೆಚೆಲ್ ಸ್ಟಾರ್ಕ್ ರಿಲೀಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ವೇಗಿ ಮಿಚೆಲ್ ಸ್ಟಾರ್ಕ್ ಕೈಬಿಡಲು ಮುಂದಾಗಿದೆ. ಕಳೆದ ಹರಾಜಿನಲ್ಲಿ 10.75 ಕೋಟಿ ರೂಪಾಯಿ ನೀಡಿ ಮೆಚೆಲ್ ಸ್ಟಾರ್ಕ್ ಖರೀದಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಮುಂದುವರಿಸದಿರಲು ನಿರ್ಧರಿಸಿದೆ.