ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಸೋತಿದ್ದೇಕೆ? ಇಲ್ಲಿವೆ ನೋಡಿ 5 ಕಾರಣ

First Published | Nov 20, 2023, 4:39 PM IST

ಅಹಮದಾಬಾದ್‌(ನ.20): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಎದುರು 6 ವಿಕೆಟ್ ಸೋಲು ಅನುಭವಿಸಿದೆ. ಭಾರತ ಸೋಲಿಗೆ ಕಾರಣವೇನು ಎಂದು ನೋಡುವುದಾದರೇ,.. 
 

1. ಹಿಂದಿನ 10 ಪಂದ್ಯಗಳಲ್ಲಿ ಯಶ ಕಂಡಿದ್ದ ಅಗ್ರ ಕ್ರಮಾಂಕ ಸಿಡಿಯಲು ವಿಫಲವಾದದ್ದು:

ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು ತಂಡದ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿತು
 

2. ವಿಕೆಟ್‌ಗಳು ಬಿದ್ದಾಗ ಒತ್ತಡಕ್ಕೆ ಸಿಲುಕಿ ತೀರಾ ನಿಧಾನಗತಿಯಲ್ಲಿ ಇನಿಂಗ್ಸ್ ಕಟ್ಟಿದ್ದು

ಗಿಲ್, ರೋಹಿತ್ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಪತನದ ಬಳಿಕ ವಿರಾಟ್ ಕೊಹ್ಲಿ-ಕೆ ಎಲ್ ರಾಹುಲ್ ಜತೆಯಾಟ ನಿಭಾಯಿಸಿದರಾರೂ ಸ್ಪೋಟಕ ಇನಿಂಗ್ಸ್‌ ಕಟ್ಟಲು ವಿಫಲವಾದರು. ಇದು ದೊಡ್ಡ ಮೊತ್ತ ಕಲೆಹಾಕುವ ಯತ್ನಕ್ಕೆ ಹಿನ್ನಡೆಯಾಯಿತು.
 

Latest Videos


3. ಆರಂಭದಲ್ಲಿ ತೀಕ್ಷ್ಣವಾಗಿದ್ದರೂ ನಂತರ ಎಲ್ಲ ಬೌಲರ್‌ಗಳೂ ಲಯ ಕಳೆದುಕೊಂಡದ್ದು

ಮೊದಲು 47 ರನ್‌ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾದ ಮೂರು ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ವೇಗಿಗಳು ಆ ಬಳಿಕ ಅದೇ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಇದು ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಎನಿಸಿತು.
 

4. ಬೌಲಿಂಗ್‌ಗೆ ನೆರವಾಗುವಂತಿದ್ದ ಪಿಚ್‌ನಲ್ಲಿ ಐದೇ ಬೌಲರುಗಳನ್ನು ನೆಚ್ಚಿಕೊಂಡದ್ದು

ಇನ್ನು ಪಿಚ್‌ ಕೂಡಾ ಭಾರತೀಯ ಬೌಲಿಂಗ್ ಕಾಂಬಿನೇಷನ್‌ಗೆ ನೆರವಾಗುವಂತಿರಲಿಲ್ಲ. ಫೈನಲ್‌ನಲ್ಲಿ ಕೇವಲ 5 ಬೌಲರ್‌ಗಳೊಂದಿಗೆ ಕಣಕ್ಕಿಳಿದ ರೋಹಿತ್ ಶರ್ಮಾ ಪಡೆಯ ತಂತ್ರ ಯಶಸ್ಸು ಕಾಣಲಿಲ್ಲ.
 

5. ಅನುಭವಿ, ವಿಶ್ವಶ್ರೇಷ್ಠ ಸ್ಪಿನ್ನರ್ ಅಶ್ವಿನ್‌ರನ್ನು ಆಡಿಸದೆ ಬೆಂಚ್‌ ಬಿಸಿ ಮಾಡಿಸಿದ್ದು

ಆಸ್ಟ್ರೇಲಿಯಾ ಎದುರು ಅಪಾಯಕಾರಿ ಬೌಲರ್ ಎನಿಸಿಕೊಂಡಿರುವ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಬೆಂಚ್ ಕಾಯಿಸುವಂತೆ ಮಾಡಿದ್ದು ಕೂಡಾ ಭಾರತದ ಮಾಡಿದ ಯಡವಟ್ಟು ಎನಿಸಿಕೊಂಡಿತು.
 

click me!