ಸೋತರೂ ನಿಮ್ಮೊಂದಿಗಿದೆ ಭಾರತ: ಡ್ರೆಸ್ಸಿಂಗ್ ರೂಂಗೇ ಹೋಗಿ ಟೀಂ ಇಂಡಿಯಾ ಸಂತೈಸಿದ ಪ್ರಧಾನಿ ಮೋದಿ

Published : Nov 20, 2023, 04:11 PM ISTUpdated : Nov 20, 2023, 04:59 PM IST

ಅಹಮದಾಬಾದ್‌(ನ.20): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾಗೆ ಶರಣಾಗುವ ಮೂಲಕ ಮುಖಭಂಗ ಅನುಭವಿಸಿದೆ. ಭಾನುವಾರ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಘಾತಕಾರಿ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್ ರೂಂಗೆ ತೆರಳಿ ಟೀಂ ಇಂಡಿಯಾ ಆಟಗಾರರನ್ನು ಸಂತೈಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

PREV
16
ಸೋತರೂ ನಿಮ್ಮೊಂದಿಗಿದೆ ಭಾರತ: ಡ್ರೆಸ್ಸಿಂಗ್ ರೂಂಗೇ ಹೋಗಿ ಟೀಂ ಇಂಡಿಯಾ ಸಂತೈಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ 2023ರ ಏಕದಿನ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಮೊಟೇರಾಗೆ ಬಂದಿದ್ದರು. ಆದರೆ ಭಾರತ ತಂಡವು ಫೈನಲ್‌ನಲ್ಲಿ ಆಸೀಸ್‌ಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿತು.
 

26

ಟೂರ್ನಿಯುದ್ದಕ್ಕೂ ಅಧ್ಭುತ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಆಟಗಾರರು, ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಪಂದ್ಯ ಸೋಲುತ್ತಿದ್ದಂತೆಯೇ ಕೆಲ ಆಟಗಾರರು ಮೈದಾನದಲ್ಲಿಯೇ ಕಣ್ಣೀರಿಟ್ಟರು.
 

36

ಇನ್ನು ಪಂದ್ಯ ಮುಕ್ತಾಯದ ಬಳಿಕವೂ ಭಾರತ ತಂಡದ ಆಟಗಾರರ ಮುಖದಲ್ಲಿ ಸೋಲಿನ ನೋವಿನಿಂದ ಕುಸಿದು ಹೋಗಿದ್ದರು. ಈ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಸ್ವತಃ ಡ್ರೆಸ್ಸಿಂಗ್ ರೂಂಗೆ ತೆರಳಿ ಆಟಗಾರರನ್ನು ಸಂತೈಸುವ ಕೆಲಸ ಮಾಡಿದರು.
 

46

ಟೀಂ ಇಂಡಿಯಾ ಹಲವು ಕ್ರಿಕೆಟಿಗರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ತಮ್ಮನ್ನು ಭೇಟಿಮಾಡಿ ನೋವಿನಲ್ಲಿರುವ ತಮ್ಮನ್ನು ಸಂತೈಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
 

56

ಟೀಂ ಇಂಡಿಯಾ ಆಲ್ರೌಂಡರ್ ಜಡೇಜಾ ಟ್ವೀಟ್ ಮಾಡಿ, ಪ್ರಧಾನಿ ಮೋದಿಯವರು ಡ್ರೆಸ್ಸಿಂಗ್ ರೂಂಗೆ ಬಂದು ನಮ್ಮನ್ನು ಸಂತೈಸಿದರು ಹಾಗೂ ನಮ್ಮಲ್ಲಿ ಸ್ಪೂರ್ತಿಯನ್ನು ತುಂಬಿದರು ಎಂದು ಬರೆದುಕೊಂಡಿದ್ದಾರೆ.
 

66

ಇನ್ನು ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡಾ ಟ್ವೀಟ್ ಮಾಡಿ, ದುರಾದೃಷ್ಟವಶಾತ್ ನಿನ್ನೆ ನಮ್ಮ ದಿನವಾಗಿರಲಿಲ್ಲ. ಡ್ರೆಸ್ಸಿಂಗ್‌ ರೂಂಗೆ ಬಂದು ನಮ್ಮ ಸ್ಪಿರಿಟ್ ಹೆಚ್ಚಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ನಾವು ಬೌನ್ಸ್ ಬ್ಯಾಕ್ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.
 

Read more Photos on
click me!

Recommended Stories