ಲಕ್ಷ ಜನರಿದ್ದರೂ ಬೆಂಗಳೂರು ರೀತಿ ಚಿಯರ್‌ಅಪ್ ಇರಲಿಲ್ಲ,ಅಹಮ್ಮದಾಬಾದ್ ಫ್ಯಾನ್ಸ್ ಮೌನಕ್ಕೆ ಆಕ್ರೋಶ!

First Published | Nov 20, 2023, 4:05 PM IST

ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿ ಕಣ್ಣೀರಿಟ್ಟಿದೆ. ಫೈನಲ್ ಪಂದ್ಯದಲ್ಲಿ ಭಾರತದ ಪ್ರದರ್ಶನ ನಿರೀಕ್ಷಿತವಾಗಿರಲಿಲ್ಲ. ಆದರೆ ತಂಡವನ್ನು ಹುರಿದುಂಬಿಸುವಲ್ಲಿ ಅಹಮ್ಮದಾಬಾದ್ ಫ್ಯಾನ್ಸ್ ವಿಫಲರಾಗಿದ್ದಾರೆ. ಬಹುತೇಕ ಕ್ರೀಡಾಂಗಣ ಮೌನಕ್ಕೆ ಜಾರಿತ್ತು. ಅಹಮ್ಮದಾಬಾದ್‌ಗಿಂತ 35,000 ಸಾಮರ್ಥ್ಯದ ಬೆಂಗಳೂರಿನ ಕ್ರೌಡ್ ಜೋಶ್ ಹೇಗಿದೆ ಗೊತ್ತಾ ಎಂದು ಅಹಮ್ಮದಾಬಾದ್ ಅಭಿಮಾನಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಆಸಿಸ್ ನಾಯಕ ಹೇಳಿದ ರೀತಿಯ ಬರೋಬ್ಬರಿ 1.3 ಲಕ್ಷ ಅಭಿಮಾನಿಗಳು ಸೈಲೆಂಟ್ ಆಗಿದ್ದರು. ಟೀಂ ಇಂಡಿಯಾವನ್ನು ಹುರಿದುಂಬಿಸುವ ಬದಲು ಬಹುತೇಕರು ಮೌನಕ್ಕೆ ಜಾರಿದ್ದರು. ಅಭಿಮಾನಿಗಳ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
 

ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬರೋಬ್ಬರಿ 1.3 ಲಕ್ಷ ಅಭಿಮಾನಿಗಳು ಫೈನಲ್ ಪಂದ್ಯ ವೀಕ್ಷಿಸಿದ್ದರು. ಆದರೆ ಅಭಿಮಾನಿಗಳ ಶಬ್ದ ಕೇಳಿಸುತ್ತಲೇ ಇರಲಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos


ಅಹಮ್ಮದಾಬಾದ್‌ನಲ್ಲಿ 1.3 ಲಕ್ಷ ಅಭಿಮಾನಿಗಳಿದ್ದರೂ ಬೆಂಗಳೂರಿನ 35 ಸಾವಿರ ಅಭಿಮಾನಿಗಳ ಶಬದ್ಧದಷ್ಟು ಜೋಶ್ ಇರಲಿಲ್ಲ. ಘೋಷಣೆ, ಭಾರತ ತಂಡಕ್ಕೆ ಪ್ರೇರಣೆ ಅಹಮ್ಮದಾಬಾದ್ ಅಭಿಮಾನಿಗಳಿಂದ ಸಿಗಲಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
 

ಅಹಮ್ಮದಾಬಾದ್‌ನಲ್ಲಿ ಜನಸಾಗರವಿತ್ತು, ಆದರೆ ಪ್ರಯೋಜನವಿರಲಿಲ್ಲ. ವಾಂಖೆಡೆಯಲ್ಲಿ ಶಮಿ ಕ್ಯಾಚ್ ಕೈಚೆಲ್ಲಿದ ಬಳಿಕ ನಿರಂತರವಾಗಿ ಶಮಿ ಹೆಸರು ಜಪಿಸಲಾಗಿತ್ತು. ಇಡೀ ತಂಡವನ್ನು ಚಿಯರ್ ಅಪ್ ಮಾಡಲಾಗಿತ್ತು. ಇದರ ಪರಿಣಾಮ ನ್ಯೂಜಿಲೆಂಡ್ ಅಬ್ಬರ ಆರಂಭಗೊಂಡಿದ್ದರೂ ಶಮಿ 7 ವಿಕೆಟ್ ಕಬಳಿಸಿದ್ದರು ಎಂದು ಅಭಿಮಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಅಹಮ್ಮದಾಬಾದ್ ಕ್ರೌಡ್ ಪಂದ್ಯದ ಬಳಿಕ ಅಂಪೈರ್ ಹೆಸರು ಹೇಳುತ್ತಿದ್ದಂತೆ ಅಗೌರವ ಸೂಚಿಸಿತ್ತು. ಅಹಮ್ಮದಾಬಾದ್‌ನಲ್ಲಿ ಅಂಪೈರ್ ಏನು ತಪ್ಪು ಮಾಡಿದ್ದರು? ಅಹಮ್ಮದಾಬಾದ್ ಸಾಕ್ಷರತೆ ಎಷ್ಟಿದೆ? ಎಂದು ಕೆಲವರು ಪ್ರಶ್ನಿಸಿದ್ದಾರೆ.
 

ಭಾರತದ ಹಾಗೂ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಅನ್ನೋ ಹೆಗ್ಗಳಿಗೆ ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಪಾತ್ರವಾಗಿದೆ. 1.3 ಲಕ್ಷ ಜನ ಕುಳಿತು ಪಂದ್ಯ ವೀಕ್ಷಣೆ ಮಾಡಬಹುದು. ಆದರೆ ಸರಿಯಾದ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಇರಲಿಲ್ಲ ಎಂದು ಇತರ ಫ್ಯಾನ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಈ ಮೂಲಕ ಟ್ರೋಫಿ ಗೆಲ್ಲುವ ಮಹತ್ವದ ಅವಕಾಶವೊಂದನ್ನು ಕೈಚೆಲ್ಲಿದೆ. ಸೋಲಿನ ನೋವು ಕೋಟ್ಯಾಂತರ ಭಾರತೀಯರಿಗೆ ನೋವು ತರಿಸಿದೆ.

ಕ್ರಿಕೆಟಿಗರು ಮೈದಾನದಲ್ಲಿ ಕಣ್ಣೀರಿಟ್ಟಿದ್ದಾರೆ. ಒಬ್ಬರಿಗೊಬ್ಬರು ಸಂತೈಸಿದರೂ ನೋವು ತಡೆದುಕೊಳ್ಳಲು ಸಾಧ್ಯವಾಗದೇ ಕಣ್ಣಿರಿಟ್ಟಿದ್ದಾರೆ. ಇತ್ತ ದೇಶಾದ್ಯಂತ ಅಭಿಮಾನಿಗಳು ಹೃದಯ ಒಡೆದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

click me!